ಬಾವಿಯಲ್ಲಿ ಟ್ರಾಕ್ಟರ ನುಗ್ಗಿಸಿ ಮೃತನಾದ ಟ್ರಾಕ್ಟರ ಚಾಲಕ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ: 26/02/2012 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಗಂಡನಾದ ಶರಣಬಸಪ್ಪ ಧಲ್ಲು ಇತನು ಟ್ರ್ಯಾಕ್ಟರ ನಂ ಕೆಎ:32 ಟಿ:5922 – 23 ನೇದ್ದರಲ್ಲಿ ಮುರುಮ ಹೊಡೆಯಲು ಹೋಗಿದ್ದು, ಇಬ್ರಾಹಿಂಪೂರ ರೋಡಿಗೆ ಟ್ರ್ಯಾಕ್ಟರದಲ್ಲಿ ಮುರಮು ತುಂಬಿಕೊಂಡು ಹೋಗುತ್ತಿದ್ದಾಗ ನಮ್ಮ ಗ್ರಾಮದ ವರದ ಶಂಕರ ಇವರ ಹೊಲದಲ್ಲಿರುವ ಬಾವಿಯಲ್ಲಿ ಟ್ರ್ಯಾಕ್ಟರ ಸಮೇತ ನೀರಿನಲ್ಲಿ ಬಿದ್ದು ಟ್ರ್ಯಾಕ್ಟರ ಇವರ ಮೆಲೆ ಬಿದ್ದಿದ್ದರಿಂದ ಮೃತಪಟ್ಟಿರುತ್ತಾನೆ. ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶರಣಬಸಪ್ಪಾ ಧಲ್ಲು ಸಾ:ಚಲಗೇರಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 6/2012 ಕಲಂ 279, 304(ಎ) ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ: ಶ್ರೀ ವಿಕ್ರಮ ತಂದೆ ಚಿತಂಬರಾಯ ಪಾಟೀಲ ಸಾ||ಮುದ್ದಡಗಾ ಹಾ||ವ||ಸರಾಫ ಬಜಾರ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಕುಮಾರ, ಅಭೀಷೆಕ ಕೂಡಿಕೊಂಡು ಶಾಂತು ಅಗ್ಗಿ ರವರ ಕಾರಬಾಡಿಗೆಯಿಂದ ಪಡೆದುಕೊಂಡು ಅಬ್ಬೆತುಮಕೂರಿಗೆ ಹೋಗಿ ಮರಳಿ ಗುಲಬರ್ಗಾಕ್ಕೆ ಬಂದು, ಊಟ ಮಾಡಲು ಪಲ್ಲವಿ ಹೋಟೆಲಕ್ಕೆ ಹೋಗಿರುತ್ತೆವೆ. ಇನ್ನೂ ನನ್ನ ಗೆಳೆಯರಾದ ಯಶ್ವಂತ , ಜಗದೀಶ ರವರಿಗೆ ಊಟಕ್ಕೆ ಕರೆಯಿಸಿ ನಾನು ಹೊಟೇಲ ಮ್ಯಾನೇಜರ ಸಂಗಡ ಹೊಟೇಲ ಮುಂದೆ ಮಾತನಾಡುತ್ತ ಇದ್ದಾಗ ನಮ್ಮೂರ ಅನಿಲ ತಂದೆ ಹಣಮಂತ ಮತ್ತು ಅವನ ಗೆಳೆಯ ದತ್ತು ಪೂಜಾರಿ ಇವರು ಕೂಡಿ ಹೊಟೇಲಕ್ಕೆ ಬಂದು ನನ್ನನ್ನು ನೋಡಿ ಅವಾಚ್ಯವಾಗಿ ನಿಂದನೆ ಮಾಡಿ ಅನಿಲ ಇತನು ತನ್ನ ಹತ್ತಿರ ಇದ್ದ ಜಂಬ್ಯಾ ತೆಗೆದು ನನ್ನ ತಲೆಯ ಎಡಭಾಗಕ್ಕೆ, ಎಡಕಪಾಳಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಾನು ಕುಸಿದು ಬಿದ್ದಾಗ ಓಡಿ ಹೋಗಿರುತ್ತಾರೆ. ನನ್ನ ಗೆಳೆಯರು ನನಗೆ ಆಸ್ಪತ್ರೆಗೆ ತೆಗೆದುಕೊಂಡು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 504 307 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಮಾಳು ಗಂಡ ಶಂಕರ ಪಾಟೀಲ ಸಾ: ಸುಂದರ ಗುಲಬರ್ಗಾ ರವರು ನಾನು ದಿನಾಂಕ 25-02-12 ರಂದು ರಾತ್ರಿ 20=00 ಗಂಟೆಯ ಸುಮಾರಿಗೆ ಆರ್.ಟಿ.ಓ.ಕ್ರಾಸ್ ದಿಂದ ಜಿ.ಜಿ.ಹೆಚ್.ಸರ್ಕಲ್ ಮೇನ ರೋಡಿನಲ್ಲಿ ಬರುವ ಗುಮ್ಮಜ ಹತ್ತಿರದ ಸುಂದರ ನಗರ ರೋಡ ಮೇಲೆ ಹೊರಟಾಗ ಮೋಟಾರ ಸೈಕಲ್ ನಂ:ಕೆಎ 32 ವಾಯ-3074 ನೆದ್ದರ ಚಾಲಕ ಬಾಪು ನಗರ ಸುಂದರ ನಗರ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ಮೋಟಾರ ಸೈಕಲ್ ಸಮೇತ ಹೋರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment