ಕಳ್ಳತನ ಪ್ರಕರಣ:
ವಾಡಿ ಪೊಲೀಸ್ ಠಾಣೆ :ಶ್ರಿ ಗೊವರ್ಧನ ರಾಠೋಡ ಮುಖ್ಯಾಧಿಕಾರಿಗಳು ಪುರಸಭೆ ವಾಡಿ ರವರು ದಿನಾಂಕ 20/21-12-2011 ರಂದು ರಾತ್ರಿ ವೇಳೆಯಲ್ಲಿ ವಾಡಿ ಪುರಸಭೆ ಕಾರ್ಯಾಲಯದ ಹತ್ತಿರ ನಿಲ್ಲಿಸಿದ ಟ್ಯಾಕ್ಟರ ನಂಬರ ಕೆಎ-32 5751 ನೇದ್ದಕ್ಕೆ ಅಳವಡಿಸಿದ ಎರಡು ಬ್ಯಾಟರಿಗಳು ಅ|| ಕಿ|| 6000/- ರೂ ಒಂದು ಆಟೋ ತಿಪ್ಪರ ಸಂಖ್ಯೆ ಇರುವುದಿಲ್ಲಾ ಅದಕ್ಕೆ ಅಳವಡಿಸಿದ ಬ್ಯಾಟರಿ ಹಾಗು ಗೈಡ್ರಾಲಿಕ ಜಾಕ (ಎರಡು) ಒಟ್ಟು ಅ|| ಕಿ|| 10000/- ರೂ ಹಿಗೆ ಎಲ್ಲಾ ಒಟ್ಟು ಅ|| ಕಿ|| 16000/- ಬೆಲೆ ಬಾಳುವುದನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 16/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ: ಶ್ರೀ ಭೀಮಶಪ್ಪಾ ತಂದೆ ಹಣಮಪ್ಪಾ ಸಾ|| ಯಾನಗುಂದಿ ರವರು ನನಗೆ 27 ವರ್ಷದ ಕಮಲೇಶ ಅಂತಾ 27 ವರ್ಷದ ಮಗನಿದ್ದು, ಇತನು ಲೇಬರ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 01-02-2012 ರಂದು ಮುಂಜಾನೆ ನಮ್ಮೂರ ಮಹದೇವಮ್ಮ ಗಂಡ ಚನ್ನಬಸವರೆಡ್ಡಿ ಇವರ ಟ್ರಾಕ್ಟರ ಕೆಎ 32 ಟಿಎ-1795/96 ನೇದ್ದರ ಮೇಲೆ ಹೊಟ್ಟು ತುಂಬುವ ಕೆಲಸಕ್ಕೆ ಹೋಗಿದ್ದು, ಸದರಿ ಟ್ರಾಕ್ಟರ ಚಾಲಕ ಮೊಗಲಪ್ಪಾ ಪಕ್ಕದಲ್ಲಿ ಕುಳಿತಿದ್ದ ಕಮಲೇಶ ಇತನು ಟ್ರಾಕ್ಟರನ್ನು ಅಲಕ್ಷತನದಿಂದ ನಡೆಯಿಸುತ್ತಿದ್ದಾಗ ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದ ಕಮಲೇಶ ಇತನು ಟ್ರಾಕ್ಟರದಿಂದ ಕೆಳಗೆ ಬಿದ್ದು ಭಾರಿ ಗಾಯ ಹೊಂದಿದ್ದು ಉಪಚಾರ ಕುರಿತು ನಾರಯಣಪೇಟ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:12/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment