ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :ಶ್ರೀ ಶೇಖ ನಜಿಮುದ್ದಿನ ತಂದೆ ಶೇಖ ಅಬ್ದುಲ್ ಹಮೀದ ಸಾಃ ಅಬುಬಕರ ಕಾಲೋನಿ ರೆಹಮತ್ ನಗರ ಗುಲಬರ್ಗಾರವರು ನಾನು ದಿನಾಂಕ 29-01-2012 ರಂದು ರಾತ್ರಿ 8-45 ಪಿ.ಎಮ್ ಕ್ಕೆ ಸುಮಾರಿಗೆ ನನ್ನ ಅಳಿಯನಾದ ಮೌಸಿನ್ ಈತನ ಮೋಟಾರ ಸೈಕಲ್ ನಂ ಕೆಎ 25 ಕ್ಯೂ 8525 ನೇದ್ದರ ಮೇಲೆ ಹಿಂದುಗಡೆ ಕುಳಿತು ಜನತಾ ಬಜಾರ ಕ್ರಾಸ್ ದಿಂದ ಚೌಕ್ ಸರ್ಕಲ್ ಕಡೆಗೆ ಹೋಗುವಾಗ ಎದುರುಗಡೆಯಿಂದ ಒಂದು ಅಟೋರಿಕ್ಷಾ ಚಾಲಕನು ತನ್ನ ಅಟೋ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಅಟೋದಲ್ಲಿಯೇ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿ ಅಲ್ಲಿಂದ ಹೇಳದೆ ಕೇಳದೆ ಅಟೋ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2012 ಕಲಂ 279, 338 ಐ.ಪಿ.ಸಿ. ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ: ಶ್ರೀ ಅರ್ಜುನ ತಂದೆ ರಾಣಪ್ಪ ಹತಗುಂದಿ ಸಾ: ದತ್ತ ನಗರ ಗುಲಬರ್ಗಾ ರವರು ನನ್ನ ಮನೆ ದತ್ತ ನಗರದಲ್ಲಿದ್ದು ದಿನಾಂಕ 18/09/2011 ರಂದು ನಾನು ನನ್ನ ಹೆಂಡತಿ ಕೆರಳಾಕ್ಕೆ ಹೋದಾಗ ಸುಶಿಲಾಭಾಯಿ ಯಂಕಂಚಿ ಎಂಬುವವಳು ತನ್ನ ಸಂಗಡಿಗರೊಂದಿಗೆ ಬಂದು ಮುಖ್ಯ ಗೇಟಿನ ಹತ್ತಿರದ ಹೆಸರಿನ ಪ್ಲೇಟನ ಕಲ್ಲು ಒಡೆದು ಹಾನಿ ಮಾಡಿದಲ್ಲದೇ ಮನೆಯ ನೆಲ ಮಾಳಿಗೆ ಮೂದಲನೇಯ ಮಾಡಿಯಲ್ಲಿ ಬಾಗಿಲಗಳ ಕೀಲಿ ಮುರಿದು ಮನೆಯಲ್ಲಿಟ್ಟ ಗೌತಮ ಸಂಸ್ಥೆಯ ಕಾಗದ ಪತ್ರ, ಸ್ಟ್ಯಾಂಪ್ ಮತ್ತು ಲಾಕರದಲ್ಲಿಟ್ಟ 1,57,000/- ರೂ ನಗದು ಹಣ, 25 ತೊಲೆ ಬಂಗಾರದ ಆಭರಣ ಇತ್ಯಾಧಿ ಒಟ್ಟು 7,57,000/- ರೂ ಮಾಲು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರುದಾರರು ಉಚ್ಚ ನ್ಯಾಯಾಲಯದ ಆದೇಶದ ಮೋರೆ ಹೋಗಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ 02/02/2012 ರಂದು ಕಳುವಾದ ಬಗ್ಗೆ ದೂರಿನ ಮೇರೆಗೆ ಠಾಣೆಯ ಗುನ್ನೆ ನಂ. 11/2012 ಕಲಂ. 454, 380, 427, ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Friday, February 3, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment