ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:ಶ್ರೀ ಕೇರನಾಥ ತಂದೆ ನಾಮದೇವ ಕೋಳಸುರೆ ಸಾ:ಆಳಂದ ನಾನು ದಿನಾಂಕ 08/02/2012 ರಂದು ಪ್ರತಿ ದಿನದಂತೆ ಬೆಳಿಗ್ಗೆ ಮಕ್ಕಳಿಗೆ ಶಾಲೆಗೆ ಕಳುಹಿಸಿ ಮನೆಗೆ ಬಿಗ ಹಾಕಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋದೆವು ಮದ್ಯಾಹ್ನ ಊಟಕ್ಕಾಗಿ ನಾನು ಮನೆಗೆ ಬಂದು ಕೀಲಿ ತೆರೆದು ಒಳಗೆ ನೋಡಲಾಗಿ ಮನೆಯ ಹಿಂದಿನ ಬಾಗಿಲು ಮುರಿದಿದ್ದು, ಮನೆಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 24840 / ರೂ ಬೆಲೆಬಾಳುವ ಬಂಗಾರದ ಮತ್ತು ಬೆಳ್ಳಿ ಸಾಮಾನಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಾಕಾ ಜೂಜಾಟ ಪ್ರಕರಣ:
ಆಳಂದ ಪೊಲೀಸ ಠಾಣೆ: ದಿನಾಂಕ 11/02/2012 ರಂದು 10.30 ಮುಂಜಾನೆ ಆಳಂದ ಪಟ್ಟಣದ ಹೊಸ ಎಪಿಎಮಸಿ ಯಾರ್ಡದಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ. ಅಂತಾ ಆಳಂದ ಪೊಲೀಸ ಠಾಣೆಯ ಶ್ರೀ ವಿಜಯಕುಮಾರ ಪಿ.ಎಸ್.ಐ ರವರಿಗೆ ಮಾಹಿತಿ ಬಂದ ಮೇರೆಗೆ ಅವರು ಪಂಚರ ಸಮಕ್ಷಮ ಠಾಣೆ ಸಿಬ್ಬಂದಿವರಾದ ಮೈನೊದ್ದಿನ್, ಬಾಬು ಪಾಟೀಲ, ರಾಜಶೇಖರ ರವರೊಂದಿಗೆ ದಾಳಿ ಮಾಡಿ ಹೆಸರು ವಿಚಾರಿಸಲು ನರಸಪ್ಪ ತಂದೆ ಯಂಕಪ್ಪ ಜಮಾದಾರ ಸಾ:- ಶಾಕಾಪುರ ಅಂತಾ ಹೇಳಿದ್ದು ಚೀಟಿ ಬರೆಸಲು ಬಂದವರು ಓಡಿ ಹೋಗಿದ್ದು ಸದರಿಯವನಿಂದ ನಗದು ಹಣ 470/ ರೂ , ಒಂದು ಅಂಕಿ ಸಂಖೆ ಬರೆದ ಮಟಕಾ ಚೀಟಿ, ಒಂದು ಬಾಲ ಪೇನ, ಮತ್ತು ಒಂದು ನೋಕಿಯಾ ಕಂಪನಿಯ ಕಪ್ಪು ಬಣ್ಣದ ಹಳಯ ಮೋಬೈಲ ಜಪ್ತಿ ಮಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 420 ಐಪಿಸಿ ಮತ್ತು 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಶ್ರೀಮತಿ ರಾಜೇಶ್ರೀ ಗಂಡ ಬಸವರಾಜ ಸುತಾರ ವ 19 ವರ್ಷ ಸಾ ಬಳೂರ್ಗಿ ಹಾ ವ ಅಫಜಲಪೂರ ರವರು ನಮ್ಮ ಹಳೆಯ ಸಂಬಂಧಿಕ ಬಸವರಾಜ ಸುತಾರ ಸಾ ಬಳೂರ್ಗಿ ಈತನೊಂದಿಗೆ ದಿನಾಂಕ 19/12/2011 ರಂದು ದೆಸಾಯಿ ಕಲ್ಲೂರ ಗ್ರಾಮದಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಸಿದ್ರಾಮೇಶ್ವರ ಗುಡಿಯಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ನಮ್ಮ ತಂದೆ – ತಾಯಿವರು 21.000-00 ರೂ. ಹುಂಡಾ ಮತ್ತು 1 ತೋಲಿ ಬಂಗಾರ ಇದನ್ನು 2012 ನೇ ಸಾಲಿನಲ್ಲಿ ಉಗಾದಿ ಹಬ್ಬಕ್ಕೆ ಕೋಡುವ ಮುದ್ದತ್ತು ಮಾಡಿಕೊಂಡು ಮದುವೆ ಮಾಡಿರುತ್ತಾರೆ. ಮದುವೆಯಾದ ಮೇಲೆ ನನ್ನ ಗಂಡನು 1 ತಿಂಗಳು ಸರಿಯಾಗಿದ್ದುಕೊಂಡು ಗಂಡ ಬಸವರಾಜ, ಅತ್ತೆ ಕಮಲಾಬಾಯಿ, ನಾದನಿಯರಾದ ಸುನಂದಾ ಮತ್ತು ಮಹನಂದಾ ಈ 4 ಜನರು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ, ಸರಿಯಾಗಿ ಬಟ್ಟೆ ಉಡುವಲು ಬರುವುದಿಲ್ಲ ಅಂತಾ ಸುಮ್ಮ, ಸುಮ್ಮನೆ ಜಗಳ ತೆಗೆದು ಕೈಯಿಂದ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತಿದ್ದರು ಗಂಡನ ಮನೆ ಬಳೂರ್ಗಿ ಗ್ರಾಮದಲ್ಲಿದ್ದ ಮನೆಯಿಂದ ಅಫಜಲಪೂರ ನಗರದ ಲಿಂಬಿ ತೋಟದಲ್ಲಿರುವ ಸಿವಪ್ಪಾ ಪಾಟೀಲ ಇವರ ಮನೆಯಲ್ಲಿ ಬಾಡಿಗೆಗೆ ಉಳಿದಿರುತ್ತೇವೆ.ದಿನಾಂಕ 04.02.2012 ರಂದು ಲಿಂಬಿತೋಟದಲ್ಲಿರುವ ಬಾಡಿಗೆ ಮನೆಯಲ್ಲಿ ನನ್ನ ಗಂಡ, ಅತ್ತೆ ಕಮಲಾಬಾಯಿ ನಾದನಿಯರಾದ ಸುನಂದ, ಮಹಾನಂದ, ಇವರೆಲ್ಲರೂ ಸೇರಿ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ನೀನು, ತವರು ಮನೆಯಿಂದ ಹಣ ಮತ್ತು ಭಂಗಾರ ತರುವಂತೆ ಕಾಣುವುದಿಲ್ಲಾ ಅಂತಾ ಮದ್ಯಾಹ 3 ಗಂಟೆಯ ಸಮಯಕ್ಕೆ 4 ಜನರು ಸೇರಿ ಹಗ್ಗದಿಂದ ನನ್ನ ಕುತ್ತಿಗೆಗೆ ಬಿಗಿದಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಮನೆಯ ಮಾಲಿಕರಾದ ಶಿವಪ್ಪಾ ಮತ್ತು ಆತನ ಹೆಂಡತಿ ಲಲಿತಾಬಾಯಿ ಇವರು ಬಂದು ಬಿಡಿಸಿರುತ್ತಾರೆ, ದಿನಾಂಕ 11.02.12 ರಂದು ನನ್ನ ತಾಯಿ, ಅಣ್ಣ, ತಂದೆ ಮತ್ತು ನಮ್ಮ ಗ್ರಾಮದ ಪ್ರಮುಖರಾದ ಬಸವರಾಜ ಶೇಟಗಾರ, ಸಿದ್ದಯ್ಯ ಆಕಾಶಮಠ ಕಲ್ಲಪ್ಪ ಪ್ಯಾಟಿ, ಗುರುಪಾದಯ್ಯ ಆಕಾಶಮಠ, ಅರ್ಜುನ ಪ್ಯಾಟಿ, ನಿಂಗಪ್ಪ ವರಗಿ ನಾವೆಲ್ಲರೂ ಕೂಡಿ ಅಫಜಲಪೂರ ನಗರದಲ್ಲಿ ನನ್ನ ಗಂಡನು ಹಿಡಿದ ಬಾಡಿಗೆ ಮನೆಗೆ ನ್ಯಾಯ ಪಂಚಾಯಿತಿಗಾಗಿ ಬಂದಿರುತ್ತೇವೆ ನನ್ನ ಗಂಡನು ಏ ಬೋಸಡಿ ಮಕ್ಕಳೆ ನೀವು ನ್ಯಾಯ ಪಂಚಾಯಿತಿ ಮಾಡುತ್ತಿರಿ ನನಗೆ ಕೊಡಬೆಕಾದ ಹಣ ಮತ್ತು ಭಂಗಾರ ಕೊಡ್ರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅವರೆಲ್ಲರ ಎದುರು ನನಗೆ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 24/12 498 (ಎ) 323 504 307 ಸಂ. 34 ಐಪಿಸಿ ಮತ್ತು 3 , 4 ಡಿ ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ: ಶ್ರೀ.ಶಿವಶರಣಪ್ಪ ತಂದೆ ಹೀರು ನಾಯಕ, ಸಾ ನಂದಿಕೂರ ತಾಂಡಾ ಗುಲಬರ್ಗಾ ರವರು ನಾನು ದಿನಾಂಕ: 10/02/2012 ರಂದು 1336 ಗಂಟೆಗೆ ಸುಪರ ಮಾರ್ಕೆಟ ಕೆನರಾ ಬ್ಯಾಂಕ ಎದುರುಗಡೆ ನನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಪೆಂಡರ ಪ್ಲಸ ನಂ:ಕೆಎ 32 ಎಸ್ 7807 ಅಕಿ 25,000/- ನೇದ್ದನ್ನು ನಿಲ್ಲಿಸಿ ಮಾರುಕಟ್ಟೆಗೆ ಸಮಾನುಗಳನ್ನು ಖರೀದಿಸಲು ಹೋಗಿ ಮರಳಿ ಬಂದು ನೋಡಿದಾಗ, ಮೋಟಾರ ಸೈಕಲ ಇದ್ದಿರುವದಿಲ್ಲ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 24/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Saturday, February 11, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment