Police Bhavan Kalaburagi

Police Bhavan Kalaburagi

Thursday, March 8, 2012

GULBARGA DIST REPORTED CRIME


ಹಲ್ಲೆ, ಮಾನಭಂಗ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:
ಕು: ಸೋನಾ ತಂದೆ ತುಕರಾಮ್ ವ:17 ವರ್ಷ ಸಾ: ಶಹಾಬಜಾರ ತಾಂಡ ಗುಲಬರ್ಗಾ ರವರು ನಾನು ನಮ್ಮ ದಿನಾಂಕ:05.03.12 ರಂದು ಸಾಯಂಕಾಲ ಸುಮಾರಿಗೆ ನಮ್ಮ ಮನೆಯ ಎದುರು ನಿಂತುಕೊಂಡಾಗ ನಮ್ಮ ಪಕ್ಕದ ಮನೆಯ ಅಶೋಕ ತಂದೆ ಬಿಕ್ಕು ಇತನು ಬಂದವನೇ ನನ್ನ ಮೈ ಕೈಗೆ ಎದೆಗೆ ಮುಟ್ಟಿ ತಬ್ಬಿಕೊಳ್ಳಲು ಯತ್ನಿಸಿದನು, ನಾನು ಗಾಬರಿಗೊಂಡು ಚಿರಾಡಿದಾಗ ಮನೆಯೊಳಗಿದ್ದ ನನ್ನ ಅಕ್ಕ ಕಮಲ್, ತಮ್ಮ ರಾಜಕುಮಾರ ಇವರು ಬಂದು ಅವರಿಂದ ನನಗೆ ಬಿಡಿಸಿಕೊಂಡರು. ಅಶೋಕ ಮತ್ತು ಆತನ ತಮ್ಮನಾದ ಕಿಶನ್ ಇಬ್ಬರೂ ಕೂಡಿ ನನಗೆ ಮತ್ತು ನನ್ನ ಅಕ್ಕಳಿಗೆ ಹೊಡೆ ಬಡೆ ಮಾಡಿ ತಮ್ಮ ರಾಜಕುಮಾರನಿಗೆ ಹೊಡೆದಿರುತ್ತಾರೆ. ಕಿಶನ ಇತನು ನನ್ನ ತಮ್ಮನಿಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ.ಮತ್ತು ಅಶೋಕನ ತಾಯಿಯಾದ ಸುಶೀಲಾಬಾಯಿ ಇವಳು ಬಂದು ನನಗೆ ಮತ್ತು ನನ್ನ ಅಕ್ಕಳಿಗೆ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿರುತ್ತಾರೆ. ನಮಗೆ ಹೊಡೆ ಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ ಅಶೋಕ,ಕೀಶನ, ಸುಶೀಲಾಬಾಯಿ ಇವರ ಮೇಲೆ ಕಾನೂನು ಕ್ರಮ್ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2012ಕಲಂ 323.324.355.506.509.ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: