Police Bhavan Kalaburagi

Police Bhavan Kalaburagi

Friday, March 9, 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಶಿವರಾಯ ತಂದೆ ಅವ್ವಣ್ಣ ಸಾ:ಗೊದೋತಾಯಿ ನಗರ ಗುಲಬರ್ಗಾರವರು ನಾನು ದಿನಾಂಕ 04/03/12 ರಂದು 11-30 ಗಂಟೆಗೆ ಮೊಟಾರ ಸೈಕಲ್ ನಂ ಕೆ.ಎ 32 ಕೆ 569 ಹೀರೋ ಹೊಂಡಾ ಸಿ.ಡಿ 100 ಕಪ್ಪು ಬಣ್ಣದ್ದು ಪಟೇಲ ಸರ್ಕಲ ಹತ್ತಿರ ಇರುವ ಜೆ.ಸಿ.ಪಿ ಹೋಟೆಲ್ ಮುಂದೆ ಇಟ್ಟು ಕೀಲಿ ಹಾಕಿ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2012 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:
ಶ್ರೀ ರಾಜು ತಂದೆ ರೇವಣಸಿದ್ದಪ್ಪ ಕುಂಡಾ ಸಾ ಲಾಲಗೇರಿ ಬ್ರಹ್ಮಪುರ ಗುಲಬರ್ಗಾ ರವರು ನಮ್ಮ ತಂದೆಯ ಹೆಸರಿನಲ್ಲಿ ಮನೆಯಿದ್ದು, ಮನೆ ಹಂಚಿಕೆ ಮಾಡಿದ್ದು, ಒಂದು ದೊಡ್ಡ ರೂಮ್ ನಮ್ಮ ಅಣ್ಣ ಮಾರುತಿಗೆ, ಸಣ್ಣ ರೂಮ್ ನನಗೆ ಬಂದಿದ್ದು ಅಣ್ಣತಮ್ಮಂದಿರು ಬೇರೆ ಬೇರೆ ಆಗುವ ಸಮಯದಲ್ಲಿ ನನ್ನ ಪಾಲಿಗೆ ಸಣ್ಣ ರೂಮ್ ಬಂದಿದ್ದರಿಂದ ನನ್ನ ಅಣ್ಣ ನನಗೆ 20000/- ರೂ. ಕೊಡಬೇಕು ಅಂತಾ ಮಾತುಕತೆ ಆಗಿದ್ದರಿಂದ ನಾನು ಹಣ ಕೇಳಿದ್ದರಿಂದ ದಿನಾಂಕ 08-03-2012 ರಂದು ಮಧ್ಯಾಹ್ನ ಸುಮಾರಿಗೆ ನಮ್ಮ ಕಾಲೋನಿಯ ಅಂಭಾ ಭವಾನಿಗುಡಿಯ ಹತ್ತಿರ ರೋಡಿನ ಮೇಲೆ ಮನೆಗೆ ಬರುತ್ತಿರುವಾಗ ಅಣ್ಣ ಮಾರುತಿ ಮತ್ತು ಆತನ ಹೆಂಡತಿ ಯಲ್ಲಮ್ಮ @ ಅರ್ಚನಾ ಇಬ್ಬರು ಅವಾಚ್ಯವಾಗಿ ಬೈದು ಹೊಡೆ ಬಡೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 19/2012 ಕಲಂ 341, 323,504 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕೊಂಡಿರುತ್ತಾರೆ.

No comments: