ಜೂಜಾಟ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ದಿನಾಂಕ 07.03.2012 ರಂದು ಮಧ್ಯರಾತ್ರಿ ಜೆಸ್ಕಾಂ ಕಛೇರಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಶಿವಶಂಕರ ತಂದೆ ಚಂದ್ರಶೇಖರ ಕೊಂಬಿನ ಸಂಗಡ 5 ಜನರು ಇಸ್ಪೀಟ ಜೂಜಾಟ ಆಡುತ್ತಿದ್ದರಿಂದ ಶ್ರೀ ಶಿವಪುತ್ರಪ್ಪ ಎ.ಎಸ್.ಐ ಸ್ಟೇಷನ ಬಜಾರ ಪೊಲೀಸ ಠಾಣೆ ರವರು ಮತ್ತು ಗುರುಲಿಂಗಪ್ಪ, ಜಾವೀದ ಹಾಗೂ ಶಿವಾನಂದ ಪಿಸಿ ರವರು ಕೂಡಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ದಾಳಿಯಲ್ಲಿ ನಗದು ಹಣ 32,836=00 ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ 22/12 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:ಶ್ರೀ ಶಿವಕುಮಾರ ತಂದೆ ಮಹಾದೇವಪ್ಪಾ ಧನ್ನೂರ ಸಾಃ ಬಾಚನಾಳ ತಾಃಜಿಃ ಗುಲಬರ್ಗಾ ರವರು ನಾನು ದಿನಾಂಕ: 06/03/2012 ರಂದು ಬೆಳಿಗ್ಗೆ ಕಿಣ್ಣಿ ಸಡಕ ಗ್ರಾಮ ಪಂಚಾಯತಿಯಲ್ಲಿ ಕೆಲಸವಿದ್ದ ಪ್ರಯುಕ್ತ ಕಿಣ್ಣಿಸಡಕ ಗ್ರಾಮಕ್ಕೆ ಹೋಗಿ ಮರಳಿ ಸಾಯಂಕಾಲ ಕಿಣ್ಣಿಸಡಕ ಗ್ರಾಮ ಬಿಟ್ಟು ನಮ್ಮೂರಿಗೆ ಬರುತ್ತಿರುವಾಗ ನಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋಪಾಲ ಇವರು ನನಗೆ ಕಮಲಾಪೂರದಲ್ಲಿ ಕೆಲಸವಿದೆ ನಾನು ಬರುತ್ತಿದ್ದೇನೆ ಅಂತಾ ಅಂದಾಗ ನಾನು, ಮತ್ತು ಗೋಪಾಲ ಇಬ್ಬರು ಕೂಡಿಕೊಂಡು ಗೋಪಾಲ ಈತನ ಮೋಟಾರ ಸೈಕಲ ನಂ. ಕೆಎ: 32, ಎಕ್ಸ್:9891 ನೇದ್ದರ ಮೇಲೆ ಕುಳಿತುಕೊಂಡು ಕಮಲಾಪೂರ ಕಡೆಗೆ ಬರುತ್ತಿದ್ದಾಗ ಹುಮನಾಬಾದ ರೋಡಿನ ಕುದುರೆ ಮುಖದ ಹೊಡ್ಡು ಇಳಿಯುತ್ತಿರುವಾಗ ಒಬ್ಬ ಮನುಷ್ಯನು ಮೋಟಾರ ಸೈಕಲ ಸಮೇತ ಬಿದ್ದಿರುವದನ್ನು ನೋಡಿ, ನಾವು ಎಬ್ಬಿಸಿ, ವಿಚಾರಿಸಲಾಗಿ, ಆತನು ತನ್ನ ಹೆಸರು ಕರಿಯಪ್ಪಾ ತಂದೆ ಬಸವಂತಪ್ಪಾ ನಂದಿ ಸಾಃ ಹುಡಗಿ ತಾಃ ಹುಮನಾಬಾದ ಅಂತಾ ಹೇಳಿ, ಮೋಟಾರ ಸೈಕಲ ಟಿವಿಎಸ್ ಸ್ಪೀರಿಟ್ ನಂ. ಕೆಎ:03, ಈಎ:522 ನೇದ್ದರ ಮೇಲೆ ಗುಲಬರ್ಗಾಕ್ಕೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಕತ್ತಲಾಗುತ್ತಿರುವದರಿಂದ ನಾನು ಬೇಗನೆ ನಮ್ಮೂರಿಗೆ ಹೋಗಲು ನನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಿರುವಾಗ ನಿಯಂತ್ರಣ ತಪ್ಪಿ ರೋಡಿನ ಮೇಲೆ ಬಿದ್ದಿರುತ್ತೇನೆ ಅಂತಾ ತಿಳಿಸಿದ್ದು, ಕರಿಯಪ್ಪಾ ಈತನಿಗೆ ತೆಲೆಯ ಹಿಂಭಾಗಕ್ಕೆ, ಹಣೆಯ ಮೇಲೆ, ಎಡಭುಜದ ಮೇಲೆ, ಎಡ ಮೆಲಕಿನ ಹತ್ತಿರ ಹಾಗು ಮೂಗಿಗೆ ರಕ್ತಗಾಯವಾಗಿರುತ್ತದೆ. ಟಿವಿಎಸ ಸವಾರನಾದ ಕರಿಯಪ್ಪಾ ನಂದಿ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರೋಡಿನ ಮೇಲೆ ಅಪಘಾತ ಮಾಡಿಕೊಂಡಿದ್ದರಿಂದ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2012. ಕಲಂ. 279, 337, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಲಕ್ಷ್ಮಣಸಿಂಗ ತಂದೆ ವಿಠಲಸಿಂಗ ತಿವಾರಿ ಸಾ ನಬಿ ಕಾಲೋನಿ ಖಾದ್ರಿ ಚೌಕ ಆಳಂದ ರೋಡ ಗುಲಬರ್ಗಾರವರು ನನ್ನ ಮಗನಾದ ರವಿಸಿಂಗ ತಿವಾರಿ ಇತನು ಹಾಗೂ ಇನ್ನೊಬ್ಬ ಮೋ ಟಾರ ಸೈ ಕಲ ನಂ ಕೆಎ 31 J 4250 ನೇದ್ದರ ಮೇಲೆ ಆಳಂದ ರೋಡಿನ ವಿಶ್ವರಾಧ್ಯ ಗುಡಿ ಹತ್ತಿರ ಹೋರಟಾಗ ಆಳಂದ ಚಕ್ಕ ಪೋಸ್ಟ ಕಡೆಯಿಂದ ಲಾರಿ ನಂ. ಎಂ.ಹೆಚ.11 ಎಫ್-4474 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಸದರಿ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಲಾರಿಯ ಹಿಂದಿನ ಟೈರಿನ ಕೆಳೆಗೆ ಹೋಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ. ಇನ್ನೊಬ್ಬ ವ್ಯಕ್ತಿ ಯಾರು ಅನ್ನುವ ಬಗ್ಗೆ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ . ಆದ್ದರಿಂದ ಲಾರಿ ನಂ ಎಂ.ಹೆಚ.-11, ಎಫ್ 4474 ನೇದ್ದರ ಚಾಲಕ ಹೆಸರು ರಫೀಕ ತಂದೆ ಮೌಲಾನಾ ನದಾಫ ಸಾ;ಕರಜಾಳ ತಾ;ಅಕ್ಕಲಕೋಟ, ಮಹಾರಾಷ್ಟ್ರ ಇತನ ಮೇಲೆ ಕಾನೂ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Wednesday, March 7, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment