Police Bhavan Kalaburagi

Police Bhavan Kalaburagi

Tuesday, March 6, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ:
ಶ್ರೀ ಬಸವರಾಜ ತಂದೆ ದಸ್ತಯ್ಯ ಗುತ್ತೇದಾರ ಸಾ ಭಟ್ಟರಗಾ, ತಾ ಅಳಂದ, ಹಾ ವ ವಿಶ್ವರಾಧ್ಯ ಕಾಲೋನಿ ಗುಲಬರ್ಗಾರವರು ನಾನು ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿ ಕೆಲಸ ನಾನು ಮಾಡಿಸಿದ್ದು ನನ್ನಂತೆ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದಂಗಾಪೂರ ಗ್ರಾಮದ ನಾಗರಾಜ ತಂದೆ ಬರಗಾಲಸಿದ್ದ ಈತನು ಸಹ ಉದ್ಯೋಗ ಖಾತ್ರಿ ಕೆಲಸ ನಾನು ಮಾಡಿಸಿದ್ದು, ಇಲ್ಲಿಯವರೆಗೆ ಬಿಲ್ಲುಗಳು ಆಗಿರುವದಿಲ್ಲಾ , ಅದಕ್ಕೆ ನಾನೇ ಕಾರಣ ಅಂತ ಆಗಾಗ ಹೇಳುತ್ತಾ ಬಂದಿದ್ದು ಇರುತ್ತದೆ.ದಿನಾಂಕ 05-03-2012 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ನಾನು ಮಹಾಂತಪ್ಪ ಮತ್ತು ಸಂತೋಷ ಮೂವರು ಕೂಡಿಕೊಂಡು ಡಬರಾಬಾದ ಕ್ರಾಸದಿಂದ ಸಂತೋಷ ಕಾಲೋನಿ ಕಡೆಗೆ ಹೋಗುತ್ತಿರುವಾಗ, ನಾಗರಾಜ್ ಈತನು ತನ್ನ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಬಂದು ಅವಾಚ್ಯವಾಗಿ ಬೈದು ನೀನು ಉದ್ಯೋಗ ಖಾತ್ರಿ ಬಿಲ್ಲು ಆಗಬಾರದೆಂದು ಹೇಳಿದ್ದಿ ಅಂತ ಎದೆಯ ಮೇಲಿನ ಅಂಗಿ ಹಿಡಿದು, ಕೈಯಿಂದ ಹೊಟ್ಟೆಯ ಮೇಲೆ ಹೊಡೆದನು. ಅಲ್ಲಿಯೇ ಬಿದ್ದ ಒಂದು ಕಲ್ಲಿನಿಂದ ಹೊಡೆದಾಗ ಆ ಏಟು ನನ್ನ ಮೂಗಿನ ಮೇಲೆ ಬಿದ್ದು ರಕ್ತಗಾಯವಾಗಿರುತ್ತದೆ. ಅವನ ಜೊತೆಯಲ್ಲಿದ್ದ ಇನ್ನಿಬ್ಬರು ಸಹ ನನಗೆ ಹೊಡೆ ಬಡೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 17/12 ಕಲಂ 341, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಉಮೇಶ ತಂದೆ ಈರಪಣ್ಣಾ ಬಬಡಿ ಸಾಃಚಿಟಗುಪ್ಪಾ ತಾಃಹುಮನಾಬಾದ ಜಿಃ ಬೀದರ ರವರು ನಾನು ಮತ್ತು ನನ್ನ ಗೆಳೆಯನಾದ ನಾಗರಾಜ ಇಬ್ಬರೂ ಕೂಡಿಕೊಂಡು ದಿನಾಂಕ: 06/03/12 ರಂದು ಮೋಟಾರ ಸೈಕಲ ನಂಬರ ಕೆಎ:39, ಹೆಚ್:2649 ನೇದ್ದರ ಮೇಲೆ ಕುಳಿತುಕೊಂಡು ಖಾಸಗಿ ಕೆಲಸದ ನಿಮಿತ್ಯಾ ಗುಲಬರ್ಗಾಕ್ಕೆ ಬಂದು ಮರಳಿ ಚಿಟಗುಪ್ಪಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಕುದುರೆ ಮುಖದ ಹೊಡ್ಡಿನ ಹತ್ತಿರ ಹುಮನಾಬಾದ ಕಡೆಯಿಂದ ಟವೇರಾ ಕಾರ ನಂ. ಕೆಎ:25, ಸಿ:2547 ನೇದ್ದರ ಚಾಲಕನಾದ ಸಂತೋಷ ತಂದೆ ಭೀಮಪ್ಪಾ ಕಾಳೆ ಸಾಃ ಧಾರವಾಡ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಹಣೆಯ ಬಲಭಾಗದ ಹತ್ತಿರ ರಕ್ತಗಾಯ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಮತ್ತು ನಾಗರಾಜ ಈತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/12 ಕಲಂ. 279, 337 ಐಪಿಸಿ ನೇದ್ದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಸುರೇಶ ತಂದೆ ಮಾಧುರಾವ ಘಾಟಗೆ ಸಾಃ ಕಮಲಾಪೂರ ತಾಃಜಿಃ ಗುಲಬರ್ಗಾ ರವರು ನಾನು, ನನ್ನ ಗೆಳೆಯನಾದ ರಾಮಲಿಂಗ ತಂದೆ ಶರಣಯ್ಯಾ ಇಬ್ಬರು ಕೂಡಿಕೊಂಡು ನನ್ನ ಮೋ.ಸೈ ನಂ. ಕೆಎ:32, ಡಬ್ಲೂ:5537 ನೇದ್ದರ ಮೇಲೆ ದಿನಾಂಕ: 06/03/12 ರಂದು ಬೆಳಿಗ್ಗೆ ಖಾಸಗಿ ಕೆಲಸದ ನಿಮಿತ್ಯಾ ಸೊಂತ ಗ್ರಾಮಕ್ಕೆ ಹೋಗಲು ಕಮಲಾಪೂರ ಪೆಟ್ರೋಲ ಪಂಪದಲ್ಲಿ ಪೆಟ್ರೋಲ ಹಾಕಿಸಿಕೊಳ್ಳುತ್ತಿರುವಾಗ ಅದೇ ವೇಳೆಗೆ ನಮ್ಮೂರಿನ ಹಣಮಂತ ತಂದೆ ಭೀಮಣ್ಣಾ ಜಮಾದಾರ ಲೈನಮ್ಯಾನ ಸಾಃಧನ್ನೂರ ಹಾಃವಃ ಕಮಲಾಪೂರ ಈತನು ಕೂಡಾ ತನ್ನ ಮೋ.ಸೈ ಕೆಎ:39, ಈ:6787 ನೇದ್ದರಲ್ಲಿ ಪೆಟ್ರೋಲ ಹಾಕಿಸಲು ಬಂದಾಗ ನಾವು ಆತನಿಗೆ ಎಲ್ಲಿಗೆ ಹೊರಟಿರುವಿ ಅಂತಾ ಮಾತನಾಡಿಸಲು ಆತನು ನಾನು ಡೊಂಗರಗಾಂವ ಗ್ರಾಮಕ್ಕೆ ಹೊರಟಿದ್ದೇನೆ ಅಂತಾ ತಿಳಿಸಿದಾಗ ನಾವು ಮತ್ತು ಹಣಮಂತ ಮೋಟಾರ ಸೈಕಲಗಳಿಗೆ ಪೆಟ್ರೋಲ ಹಾಕಿಸಿಕೊಂಡು ಪೆಂಟೋಲ ಪಂಪ ಮುಂದುಗಡೆ ಇರುವ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ.218 ನೇದ್ದರ ರೋಡಿನ ಮೇಲೆ ಹೋಗುತ್ತಿರುವಾಗ ಹುಮನಾಬಾದ ಕಡೆಯಿಂದ ಮಾರುತಿ ಸ್ವೀಪ್ಟ್ ಕಾರ ನಂ. ಎಪಿ:29, ಬಿಎಫ್:5028 ನೇದ್ದರ ಚಾಲಕ ಸಾಯಿಬಾಲಾಜಿ ತಂದೆ ಭದ್ರರಾವ ಸಾಃಹೈದ್ರಾಬಾದ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಣಮಂತ ಇತನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಹಣಮಂತ ಇತನು ಭಾರಿಗಾಯ ಹೊಂದಿದ್ದು ಎಡಗಾಲಿಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದರಿಂದ ಉಪಚಾರ ಕುರಿತು 108 ಅಂಬುಲೇನ್ಸಗೆ ಫೋನ ಮಾಡುತ್ತಿರುವಾಗ ಕಾರ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಕಾರ ಸಮೇತ ಓಡಿ ಹೋಗಿರುತ್ತಾನೆ. ಹಣಮಂತ ಈತನಿಗೆ ಉಪಚಾರಕ್ಕಾಗಿ ಗುಲಬರ್ಗಾ ಆಸ್ಪತ್ರೆಗೆ ಕೊಟ್ಟು ಕಳುಸಿರುತ್ತೇವೆ. ಅಪಘಾತ ಪಡಿಸಿದ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/12 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಎಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ ಅನುಸೊಯಾಬಾಯಿ ಗಂಡ ಪಾಂಡುರಂಗ ಹಳ್ಳಿಖೇಡ ಸಾಃ ಕಾಳಮಂದರಗಿ ರವರು ನಾನು ಮನೆಯಲ್ಲಿದ್ದಾಗ ಲಾಲಪ್ಪಾ ಈತನ ಅಳಿಯನಾದ ದ್ಯಾವಪ್ಪಾ ತಂದೆ ಬಸಣ್ಣ ಹೊಳ್ಕರ ಈತನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತುಕೊಂಡು ಹೊಲದ ಬಂದಾರಿಯಲ್ಲಿ ನಮ್ಮ ಮಾವ ಮಲ್ಕಪ್ಪಾ ಹಾಗು ಕಾಂತವ್ವ ಇಬ್ಬರು ಕಟ್ಟಿಗೆ ಕಡಿಯುತ್ತಿದ್ದಾಗ ನೀವು ಬೈಯುದು ಕಳುಹಿಸಿದ್ದಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗೆ ಬಂದು ಈ ರೀತಿ ಬೈಯುವುದು ಸರಿ ಅಲ್ಲಾ ನಾವು ಸಂಬಂಧಿಕರು ಇದ್ದೇವೆ. ನನ್ನ ಗಂಡ ಮನೆಯಲ್ಲಿ ಇಲ್ಲಾ ಹೊಲಕ್ಕೆ ಹೋಗಿದ್ದಾರೆ ಅಂತಾ ಅಂದಾಗ ದ್ಯಾವಪ್ಪಾ ಈತನು ಏ ರಂಡಿ ನೀನು ನನಗೆ ಎದುರು ಮಾತನಾಡುತ್ತಿ ನಾವು ನೀವು ಯಾವ ಸಂಬಂಧಿಕರು ನಿನಗೆ ಸೊಕ್ಕು ಬಂದಿದೆ ಅಂತಾ ಅಂದವನೇ ಅಲ್ಲೇ ಬಿದ್ದಿರುವ ಕಲ್ಲನ್ನು ತೆಗೆದುಕೊಂಡು ಬೆನ್ನ ಮೇಲೆ ಹೊಡೆದನು. ಆಗ ನಾನು ನೆಲದ ಮೇಲೆ ಬಿದ್ದಾಗ ಕಾಲಿನಿಂದ ನನ್ನ ಹೊಟ್ಟೆಯ ಒದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2012 ಕಲಂ. 323, 324, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

No comments: