Police Bhavan Kalaburagi

Police Bhavan Kalaburagi

Friday, March 16, 2012

GULBARGA DIST REPORTED CRIMES

ಮಹಿಳೆಗೆ ಕಿರುಕುಳ:
ಮಹಿಳಾ ಪೊಲೀಸ ಠಾಣೆ:
ಶ್ರೀಮತಿ ಚಂದ್ರಭಾಗ ಗಂಡ ದಿಲೀಪಕುಮಾರ 28 ವರ್ಷ ಸಾ: ನಾಗಲೇಗಾಂವ ರವರು ನಮ್ಮ ದೂರದ ಸಂಬಂಧಿಯಾದ ದೀಲಿಪಕುಮಾರ ಇತನನ್ನು ಅವರ ತಂದೆ-ತಾಯಿ ಹಾಗೂ ಸಹೋದರರ ವಿರೋದಿಸಿದರು. ನಾವು ದಾವಣಗೇರೆ ಜಿಲ್ಲೆಯ ಹರಿಹರ ತಾಲುಕಿನಲ್ಲಿ ದಿನಾಂಕ 02.09.2011 ರಂದು ಹರಿಹರೇಶ್ವರ ದೇವಾಲಯದಲ್ಲಿ ಮದುವೆಯಾಗಿ ನೊಂದಣಿ ವಿವಾಹ ಕೂಡ ಮಾಡಿಕೊಂಡಿರುತ್ತೆವೆ. ನಾವು ಸದ್ಯ ಗುಲಬರ್ಗಾ ನಗರದ ಸಮತಾ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದಿದೆವು. ನನ್ನ ಗಂಡ ಮನೆಯವರು ದಿನಾಂಕ 08.11.2011 ರಂದು ನನ್ನ ಗಂಡನ ತಂದೆ ಅರ್ಜುನ, ಸಂದೀಪ,ಸೂರ್ಯಪ್ರಕಾಶ ಹಾಗೂ ಪಾರ್ವತಿ ಹಾಗೂ ಆಕೆಯ ಮಗನಾದ ಶಾಲಿವಾನ ಮತ್ತು ಇನ್ನೂ 6 ಜನ ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ವರದಕ್ಷಿಣೆ ಕೊಡದೇ ಮದುವೆಯಾಗಿದ್ದಿ ಅಂತಾ ಬೈದು ನನ್ನ ರೂಮಿನ ಸೂಟಕೇಸನಲ್ಲಿ ಇರುವ ರೂ; 49.000-00 ಹಣ ಮತ್ತು 10 ಗ್ರಾಂ ಬಂಗಾರ ಹಾಗೂ 2 ನೋಕಿಯಾ ಜಿ.5 ಮೊಬೈಲಗಳನ್ನು ತೆಗೆದುಕೊಂಡು ತಾವು ಕುಳಿತುಕೊಂಡು ಬಂದಿರುವ ಕ್ರೋಜರನಲ್ಲಿ ನನ್ನ ಸ್ವಂತ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಸಾವಳೇಶ್ವರಕ್ಕೆ ಹೋಗಿ ಬೆದರಿಕೆ ಹಾಕಿದರು. ಆ ಗ್ರಾಮದ ಸಮಾಜದ ಮುಖಂಡರು ಅವರಿಗೆ ತಿಳಿ ಹೇಳಿ ಕಳುಹಿಸಿದರು. ದಿನಾಂಕ 10.11.2011 ರಂದು ನಾವು ಬಾಡಿಗೆ ಇರುವ ಮನೆಗೆ ಕರೆದುಕೊಂಡು ಬಂದು ರೂಮಿನಲ್ಲಿ ಕೂಡಿಸಿ ಅವರ ಅಣ್ಣ ಸಂದೀಪ ಪೋನ ಮಾಡಿ ಹೊರಗೆ ಬಾ ನಿನ್ನ ಜೊತೆಯಲ್ಲಿ ಕೆಲವೊಂದು ವಿಷಯಗಳು ಮಾತನಾಡುತ್ತೇನೆ ಎಂದು ನನ್ನ ಗಂಡನನ್ನು ಕರೆದುಕೊಂಡು ಹೋದನು ಇಲ್ಲಿಯವರಗೆ ನನ್ನ ಗಂಡ ಮರಳಿ ಮನೆಗೆ ಬಂದಿರುವದಿಲ್ಲ ನನ್ನ ಗಂಡನ ಮನೆಯವರು ನನಗೆ ಪೋನ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ದೀಲಿಪ ಇತನಿಗೆ ನಾನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿರುತ್ತೇನೆ ಎಂದು ಮಾದನ ಹಿಪ್ಪರಗಾ ಠಾಣೆಯಲ್ಲಿ ಸುಳ್ಳು ಅರ್ಜುನ ಕೊಟ್ಟಿದ್ದಾರೆ . ನನ್ನ ಗಂಡ ಇಷ್ಟು ದಿನಗಳ ಕಾಲ ನನ್ನ ಜೊತೆ ಸಂಸಾರ ಮಾಡಿ ಅವರ ಮನೆಯವರ ಮಾತು ಕೇಳಿ ಮತ್ತೊಂದು ಮದುವೆ ಮಾಡಿಕೊಳ್ಳಲು ತಯಾರಿ ಮಾಡುತ್ತಿದ್ದಾರೆ ಅಂತಾ ತಿಳಿದು ಬಂದಿರುತ್ತದೆ. ನನಗೆ ಮದುವೆ ಮಾಡಿಕೊಂಡು ಮೋಸ ಮಾಡಿದ ನನ್ನ ಪತಿಯ ಮೇಲೆ ಮತ್ತು ವರದಕ್ಷಿಣೆ ಹಣಬೇಕೆಂದು ನನ್ನ ಹಣ ಬಂಗಾರ ಮೊಬೈಲ ದೋಚಿಕೊಂಡು ಹೋದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಠಾಣೆ ಗುನ್ನೆ ನಂ 27/2012 ಕಲಂ 498(ಎ).504.506.109 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: