Police Bhavan Kalaburagi

Police Bhavan Kalaburagi

Saturday, March 17, 2012

GULBARGA DIST REPORTED CRIMES

ಗಂಡನ ಕಿರುಕುಳ ತಾಳಲಾರದೇ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ:
ಶಹಾಬಾದ ನಗರ ಠಾಣೆ:
ದಿನಾಂಕ: 16/03/2012 ರಂದು ಸಾಯಂಕಾಲ ನನ್ನ ಮಗಳಾದ ಬಸಮ್ಮಾ ಗಂಡ ಶರಣಪ್ಪಾ ಧರ್ಮಾಪೂರ ವ: 25 ಸಾ: ಮರತೂರ ಇವಳಿಗೆ ಅವಳ ಗಂಡನಾದ ಶರಣಪ್ಪಾ ತಂದೆ ಮಹಾದೇವಪ್ಪಾ ಧರ್ಮಾಪೂರ ಇತನು ಅಡುಗೆ ಮಾಡಲು ಬರುವದಿಲ್ಲಾ. ಕೆಲಸ ಮಾಡಲು ಬರುವದಿಲ್ಲಾ ಅಂತಾ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ಕೊಟ್ಟದ್ದರಿಂದ, ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ತನ್ನ ಮನೆಯಲ್ಲಿ ಹಗ್ಗದಿಂದ ಉರಳು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಧೂಳಪ್ಪಾ ಸಿದ್ದಪ್ಪಾ ಪೂಜಾರಿ ಸಾ: ನಂದೂರ [ಬಿ] ಗ್ರಾಮ ತಾ:ಜಿ: ಗುಲ್ಬರ್ಗರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 498[ಎ] 306 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: