Police Bhavan Kalaburagi

Police Bhavan Kalaburagi

Saturday, March 10, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಅಂಬುಬಾಯಿ ಗಂಡ ಮಹಾಂತಪ್ಪ ಹಾದಿಮನಿ ಸಾ: ಪ್ಲಾಟ ನಂ:147 ವಿಧ್ಯಾ ನಗರ ಗುಲಬರ್ಗಾರವರು ನಾನು ದಿನಾಂಕ 08-03-2012 ರಂದು ಬೆಳಗ್ಗೆ 7-30 ಗಂಟೆಯ ಸುಮಾರಿಗೆ ಕೇಂದ್ರ ಬಸ್ ನಿಲ್ದಾಣ ಹತ್ತಿರ ಮಹಾರಾಜ ಚಪ್ಪಲ ಅಂಗಡಿ ಎದುರು ಹೊರಟಾಗ ಮೋಟಾರ ಸೈಕಲ್ ನಂ: ಕೆಎ-33, ಜೆ - 2596 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ: 279,338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಯು.ಡಿ.,ಅರ್. ಪ್ರಕರಣ:

ಆಳಂದ ಠಾಣೆ: ಶಿವಶರಣಪ್ಪ ತಂದೆ ಪ್ರಭು ಸವಳೇಶ್ವರ ಉ:ಗೌಂಡಿ ಕೆಲಸ ಸಾ; ಖಜೂರಿ ರವರು ನನ್ನ ಮಗ ಸಿದ್ದಪ್ಪ 27 ವರ್ಷ ಈತನು ಸಿದ್ರಾಮ ಪಾಟೀಲ ಇವರ ಹೊಲದ ಬಾಯಿ ದಂಡೆಯ ಮೇಲೆ ಇದ್ದ ನುಗ್ಗಿ ಗಿಡದ ನುಗ್ಗಿ ಕಾಯಿಯನ್ನು ಕಡಿಯುವಾಗ ನುಗ್ಗಿ ಗಿಡದ ಟೊಂಗೆ [ಫಂಟೆ] ಮುರಿದ್ದು ಟೊಂಗೆಯೊಂದಿಗೆ ಬಾವಿಯ ನೀರಿನಲ್ಲಿ ಬಿದ್ದು ಸತ್ತಿರುತ್ತಾನೆ ಅಂತಾ ತಿಳಿದುಕೊಂಡು ನಾನು ಹಾಗೂ ಊರಿನ ಇತರು ಜನರು ಕೂಡಿ ಬಂದು ನೋಡಲಾಗಿ, ಬಾಯಿಯಲ್ಲಿ ಅಂದಾಜು 5 ಪೀಟ ನೀರು ಇದ್ದು ಹೊರತಗೆದು ನೋಡಲಾಗಿ ನನ್ನ ಮಗನ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಅವನ ಮರಣದಲ್ಲಿ ಯಾರ ಮೇಲೆ ಸಂಶಯವಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು,ಡಿ.ಅರ್. ನಂ: 2/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮೈನುದ್ದಿನ್ ತಂದೆ ಮಹಿಬೂಬಸಾಬ ಖುರೇಶಿ ಸಾ|| ಎಕ್ಬಾಲ್ ಕಾಲೋನಿ ಜಿಲಾನಾಬಾದ ಗುಲಬರ್ಗಾರವರು ನನ್ನ ಮಗನಿಗೂ ಮತ್ತು ಸಲಿಂ ತಂದೆ ಯೂಸುಪ್ ಇತನಿಗೂ ದಿನಾಂಕ 08-03-2012 ರ ಮದ್ಯಾಹ್ನ ಸಮಯದಲ್ಲಿ ಎಮ್.ಎಸ್.ಕೆ ಮಿಲ್ ಬಡಾವಣೆಯ ಸೈದಾಪೂರಿ ಹೋಟೆಲನಲ್ಲಿ ಬಾಯಿ ಮಾತಿನ ತಕರಾರಾಗಿದ್ದು ಅದೇ ವೈಮನಸ್ಸಿನಿಂದ ಸಲಿಂ ತಂದೆ ಯುಸೂಫ, ಇಸಾಮ್, ವಾಸಿಂ, ಇಮ್ತಿಯಾಜ್, ಖದೀರ, ಕರೀಮ್, ತಾಹು, ಫಿರೋಜ್. ಮಹ್ಮದ, ಮಹಿಬೂಬ ಸಂಗಡ ಬಸವನಗರದ 8-10 ಹುಡುಗರು ಸಾ|| ಎಲ್ಲರೂ ಗುಲಬರ್ಗಾ ರವರು ದಿನಾಂಕ 09-03-2012 ರಂದು ರಾತ್ರಿ 11 ಗಂಟೆಗೆ ಕೊಲೆ ಮಾಡುವ ಉದ್ಧೇಶದಿಂದ ಮೌಲಾಲಿ ಕಟ್ಟಾದಲ್ಲಿ ಮಾತಾಡುತ್ತಾ ನಿಂತ ನನಗೆ ಮತ್ತು ನನ್ನ ಸಂಗಡಿಗರಿಗೆ ಬಡಿಗೆ ಮತ್ತು ಹರಿತವಾದ ಆಯುಧಗಳಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 20/12 ಕಲಂ 143, 144, 147, 148, 341, 323, 324, 307, 504 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: