Police Bhavan Kalaburagi

Police Bhavan Kalaburagi

Sunday, April 8, 2012

GULBARGA DIST REPORTED CRIMES

ಕರುಣೇಶ್ವರ ನಗರದ ಅಪ್ಪಾಸಾಬ ರವರ ಮದುವೆ ಮನೆಯಲ್ಲಿ ಬಂಗಾರದ ಮಂಗಳಸೂತ್ರ ಕಳವು ಮಾಡಿದವರ ಬಂದನ.

ಒಂದು ವಾರದ ಹಿಂದೆ ಕರುಣೇಶ್ವರ ನಗರದ ಅಪ್ಪಾಸಾಬ ಬಿರಾದಾರ ರವರ ಮದುವೆ ಮನೆಗೆ ನಾಗಣ್ಣ ತಂದೆ ಬಸವಂತರಾವ ಕವಲಗಾ ರವರು ಬಂದು ಮದುವೆ ಕಾರ್ಯಕ್ರಮಕ್ಕೆ ಬಂದು ಮದುವೆ ಕೆಲಸಗಳ್ನು ಮುಗಿಸಿ ಮಧ್ಯರಾತ್ರಿ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದಾಗ ಪ್ಯಾಂಟ ಮತ್ತು ಶರ್ಟ ಜೇಬಿನಿಂದ ಬಂಗಾರದ ಮಂಗಳಸೂತ್ರ, ನಗದು ಹಣ ಮತ್ತು ಮೋಬಾಯಿಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಂತಾ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಗರದ (ಎ) ಉಪ-ವಿಭಾಗಧಿಕಾರಿಗಳಾದ ಶ್ರೀ ಭೂಷಣ ಭೋರ್ಸೆ ಎ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಅಶೋಕ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಶ್ರೀ ಟಿ.ಹೆಚ್.ಕರೀಕಲ್, ಪ್ರಭು ಉಪ್ಪಿನ ಪಿ.ಎಸ್.ಐ, ಮತ್ತು ಸಿಬ್ಬಂದಿ ಜನರಾದ ಸುರೇಶ, ಸಂಜೀವಕುಮಾರ , ಬಸಯ್ಯಾ ಸ್ವಾಮಿ ಎ.ಎಸ್.ಐ, ಶಿವಪುತ್ರಪ್ಪ ಎ.ಎಸ್.ಐ, ಸಿಬ್ಬಂದಿ ಜನರಾದ ಅರ್ಜುನಸಿಂಗ, ಅಣ್ಣಪ್ಪ , ಬಸವರಾಜ, ಚಂದ್ರಕಾಂತ, ಮೌಲಾಲಿ, ಗುರುಮೂರ್ತಿ, ಉಮೇಶ, ರಫೀಕ್, ಶಿವಪ್ರಕಾಶ, ರಾಮು, ದೇವಿಂದ್ರ ರವರ ಒಳಗೊಂಡ ತಂಡವು ಪೊಲೀಸ್ ತಂತ್ರಜ್ಞಾನದ ಸಹಾಯದಿಂದ 3 ಜನ ಕಳ್ಳರಾದ ಸಂತೋಷ @ ರಾಜು ತಂದೆ ಸುರೇಶ ರಜಪೂತ ಸಾ: ಭೋಗನಳ್ಳಿ ತಾ: ಅಫಜಲಪೂರ, ಪ್ರವೀಣ ತಂದೆ ಶಿವಶಂಕ್ರೇಯ್ಯಾ ಮಠಪತಿ ಸಾ: ಮಿರಿಯಾಣ ತಾ: ಚಿಂಚೋಳಿ, ಕಸ್ತೂರಪ್ಪ ತಂದೆ ಕಲ್ಲಪ್ಪ ಹೊರಪೇಠ ಸಾ: ಕುರಕುಂದಾ ತಾ: ಶಹಾಪೂರ ರವರಿಂದ ಒಟ್ಟು 1,04,000/- ರೂ ಬೇಲೆ ಬಾಳುವ ಬಂಗಾರದ ಮಂಗಳಸೂತ್ರ ಮತ್ತು 11 ಮೋಬಾಯಿಲ್ ಪೋನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವಾರದ ಒಳಗಡೆ ಅಶೋಕ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚುವಲ್ಲಿ ಯಶಸ್ಸಿ ಆಗಿರುತ್ತಾರೆ. ಹಾಗು ಈ ಪ್ರಕರಣದ ಆರೋಪಿತರು ಗುಲಬರ್ಗಾ ನಗರದಲ್ಲಿ ಇನ್ನೂ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿ ಇರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ವೈಜಿನಾಥ ತಂದೆ ಹಣಮಂತ ಬಬಲಾದ ಸಾ: ಕುಮಸಿ ವಾಡಿ ತಾ:ಜಿ: ಗುಲಬರ್ಗಾರವರು ನಾವು ದಿನಾಂಕ 07-04-12 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಅಡುಗೆ ಮಾಡಿ ಓಲೆ ಉರಿ ಆರಿಸದೇ ಹಾಗೇ ಬಿಟ್ಟಿದ್ದರಿಂದ ಓಲೆಯಲ್ಲಿದ್ದ ಬೆಂಕಿ ಗೋಡೆಗೆ ಲಗತ್ತಾಗಿರುವ ಕಟ್ಟಿಗೆ ಚಪ್ಪರಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಮನೆ ಪೂರ್ತಿ ಸುಟ್ಟಿದ್ದರಿಂದ ಮನೆಯಲ್ಲಿ ನಗದು ಹಣ 2,30,000 ರೂ. ಜೋಳ, ತೊಗರಿ, ಧರಿಸಿದ ಬಟ್ಟೆಗಳು ಮತ್ತು ಮನೆ ಬಳಕೆ ಸಾಮಾನುಗಳು ವಿಕ್ಟರ ಜಿಎಲಎಕ್ಸ ಒಟ್ಟು 3.50,000/-ರೂ. ಲುಕ್ಸಾನ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಎಫ್,ಎ 5/12 ಕಲಂ ಆಕಸ್ಮಿಕ ಬೆಂಕಿ ಅಪಘಾತ ಅಂತಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ: ದಿನಾಂಕ 06-04-2012 ರಂದು 12-05 ಪಿ.ಎಮ್ ಕ್ಕೆ ನಗರದ ಶೇಖ ರೋಜಾ ಜಿ.ಡಿ.ಎ ಕಾಲೂನಿ ರೋಡಿನಲ್ಲಿ ಜೆ.ಸಿ.ಬಿ ನಂ. ಕೆ.ಎ 32 ಬಿ 3448 ನೇದ್ದರ ಚಾಲಕನು ತನ್ನ ಜೆ.ಸಿ.ಬಿಯನ್ನು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ಇರುವ ಆರ್.ಸಿ.ಸಿ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಜೆ.ಸಿ.ಬಿ ಸಮೇತ ಓಡಿ ಹೋಗಿರುತ್ತಾನೆ ಶ್ರೀ ಅರುಣ ಕುಮಾರ, ಕಾರ್ಯ ನಿರ್ವಾಹಕ ಕಿರಿಯ ಅಭಿಯಂತರರು, ಯನಿಟ ನಂ -1 ಸಿ.ಎಸ್.ಡಿ-1 ಜೆಸ್ ಕಮ್ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 279 ಐಪಿಸಿ ಸಮಗಡ 187 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: