Police Bhavan Kalaburagi

Police Bhavan Kalaburagi

Saturday, April 7, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರಾಜಕುಮಾರ ತಂದೆ ನಿಂಗಪ್ಪ ಮಂಠಾಳ ಸಾ: ಜಂಬಗಾ (ಬಿ) ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಸಂಬಂಧಿಕರಾದ ಅಂಬರಾಯ ಇಬ್ಬರೂ ದಿನಾಂಕ: 06/04/2012 ರಂದು ಹುಮನಾಬಾದ ತಾಲೂಕಿನ ತಡೋಳಗಿ ಗ್ರಾಮದಲ್ಲಿ ಜಾತ್ರೆ ಇದ್ದ ಪ್ರಯುಕ್ತ ಬಜಾಜ ಡಿಸ್ಕವರ ಮೋಟರ್ ಸೈಕಲ್ ನಂ: ಕೆಎ-32- ಇಎ-1305 ನೇದ್ದರ ಮೇಲೆ ಕುಳಿತುಕೊಂಡು ಗುಲಬರ್ಗಾದಿಂದ ಹೊರಟು ಕಮಲಾಪೂರ ಮಾರ್ಗವಾಗಿ ತಡೋಳಗಿಗೆ ಹೋರಟಾಗ ಅಂಬಾರಾಯ ಈತನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನಾನು ಮೋಟರ್ ಸೈಕಲದ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದೇನು. ಕಮಲಾಪೂರ ದಾಟಿದ ನಂತರ ಅಂಬಾರಾಯ ಈತನು ಮೋಟರ್ ಸೈಕಲ್ ನಂ: ಕೆಎ- 32- ಇಎ- 1305 ನೇದ್ದನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮಹಿಬೂಬ ಸುಬಾನಿ ದರ್ಗಾದ ಹತ್ತಿರ ಅಂಬಾರಾಯ ಇತನು ಮೋಟರ್ ಸೈಕಲ್ ಸ್ಕೀಡ್ ಮಾಡಿ ಅಪಘಾತ ಪಡಿಸಿದನು. ಬಸ್ಸಿನಲ್ಲಿ ಬರುತ್ತಿದ್ದ ನಮ್ಮ ಸಂಭಂದಿಕರಾದ ಲಕ್ಷ್ಮೀಪುತ್ರ ತಂದೆ ಬೀರಣ್ಣ ಮಂಠಾಳ ಸಾ; ಜಂಬಗಾ [ಬಿ] ತಾ: ಗುಲಬರ್ಗಾ ಇವರು ರಸ್ತೆಯ ಮೇಲೆ ಬಿದ್ದಿದ್ದ ನಮ್ಮನ್ನು ನೋಡಿ ಬಸ್ಸ ನಿಲ್ಲಿಸಿ ನಮ್ಮನ್ನು ರೋಡಿನಿಂದ ಎಬ್ಬಿಸಿ ನೋಡಲಾಗಿ ನನಗೆ ದೇಹದ ಭಾಗದಲ್ಲಿ ಗುಪ್ತಗಾಯಗಳಾಗಿದ್ದವು. ಅಂಬಾರಾಯ ಈತನಿಗೂ ಸಹ ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:37/2012 ಕಲಂ 279. 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಆಳಂದ ಪೊಲೀಸ್ ಠಾಣೆ: ಶ್ರೀ ಮಹಿಮೂದಮೀಯಾ ತಂದೆ ಮೀರಾಸಾಬ ಮುರಮಕರ್ ಸಾ: ಬಸ್ ಸ್ಟಾಂಡ್ ರೋಡ ಆಳಂದ ರವರು ನಾನು ಆಳಂದ ಪಟ್ಟಣದ ಬಸ್ಸ ಸ್ಟಾಂಡ ಹತ್ತಿರ ಕಿರಾಣ ಅಂಗಡಿ ಇಟ್ಟಕೊಂಡು ಉಪಜೀವಿಸುತ್ತೆನೆ. ದಿನಾಂಕ: 03/04/2012 ರಂದು ಪ್ರತಿ ದಿನದಂತೆ ಬೆಳಿಗ್ಗೆ 9-00 ಗಂಟೆಗೆ ಕಿರಾಣಿ ಅಂಗಡಿ ತೆರೆದು ವ್ಯಾಪರ ಮಾಡಿಕೊಂಡು ರಾತ್ರಿ 8.00 ಗಂಟೆಗೆ ಕಿರಾಣಿ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿರುತ್ತೆನೆ. ದಿನಾಂಕ 04/04/2012 ರಂದು ಮುಂಜಾನೆ 8 ಗಂಟೆಗೆ ಬಂದು ನೋಡಲಾಗಿ ಅಂಗಡಿಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿ ಆಗಿದ್ದವು, ನಗದು ಚಿಲ್ಲರೆ ಹಣ 3000=00 ರೂಪಾಯಿಗಳು, ಯಾರೋ ಕಳ್ಳರು 40000=00 ರೂಪಾಯಿ ಮೌಲ್ಯದ ಸಾಮಾನುಗಳಯ 3 ಮೊಬೆಲಗಳು ಹಿಗೇ 63000=00 ರೂಪಾಯಿ ಬೆಲೆಬಾಳುವ ಸಾಮಾನುಗಳು ಯಾರೋ ಕಳ್ಳರು ಸೆಟ್ಟರ್. ಒಳಗಡೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ. ಮಲ್ಲಿನಾಥ ತಂದೆ ಸಿದ್ರಾಮಪ್ಪ ಮೈಂದರ್ಗಿ ಸಾ|| ಮಾದನ ಹಿಪ್ಪರಗಾರವರು ನ್ನ ಕಟ್ಟಿಗೆ ಮಷಿನ ಹೊಲ ಸರ್ವೇ ನಂ: 533/9 ನೇದ್ದರಲ್ಲಿದ್ದು, ನನ್ನ ತಮ್ಮನಾದ ಗುರುನಾಥ ಇತನು ನನ್ನ ಹತ್ತಿರ ಬಂದು ಈ ಹೊಲ ನನ್ನದು ಇರುತ್ತದೆ ಅಂತಾ ಹೊಡೆಯುತ್ತಿದ್ದನು ಇದನೂ ನೋಡಿ ನನ್ನ ಹೆಂಡತಿ ಸಿದ್ದಮ್ಮ ಇವಳು ಜಗಳ ಬಿಡಿಸಲು ಬಂದಾಗ ಅವಳಿಗೆ ಸಹ ಕಟ್ಟಿಗೆಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 341, 323, 324, 504, 506, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: