ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ವಿಧ್ಯಾಧರ ತಂದೆ ಮನೋಹರ ಗೌರೆ ಸಾ; ಬ್ಲಾಕ ನಂಬರ್: 4 , ಕಮಲಾಪೂರ ತಾ:ಜಿ:ಗುಲಬರ್ಗಾರವರು ನನ್ನ ಪರಿಚಯದವರಾದ ದಯಾನಂದ ತಂದೆ ಶರಣಪ್ಪ ಸಿಂಗೆ ಇತನ ಮದುವೆ ದಿನಾಂಕ: 08/04/2012 ರಂದು ಬಸವಕಲ್ಯಾಣದಲ್ಲಿ ಮದುವೆಗೆ ಹಾಜರಾಗಿ ಮರಳಿ ಬಂದು ರಾತ್ರಿ 9-00 ಗಂಟೆ ಸುಮಾರಿಗೆ ಬಸವಣ್ಣದೇವರ ಗುಡಿಯ ಹತ್ತಿರ ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾಗ ನಾನು ಕೂಡಾ ಅವರೊಂದಿಗೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಸುಖೀಲ್ ಕುಮಾರ ತಂದೆ ಸತೀಶ ಸಿಂಗೆ ಈತನ ಕಾಲು ತುಳಿದಿದ್ದು, ಆಗ ಸುಖೀಲ್ ಕುಮಾರ ಈತನು ನನ್ನೊಂದಿಗೆ ಬಾಯಿ ಮಾತಿನ ತಕರಾರು ಮಾಡುತ್ತಿದ್ದರಿಂದ ನಾನು ಮೆರವಣಿಗೆ ಬಿಟ್ಟು ನಮ್ಮ ಮನೆಯ ಕಡೆಗೆ ಹನುಮಾನ ದೇವರ ಗುಡಿಯ ಹತ್ತಿರ ಬರುತ್ತಿದ್ದಾಗ ಸುಖೀಲ್ ಕುಮಾರ ತಂದೆ ಸತೀಶ್ ಸಿಂಗೆ, ಸತೀಶ ತಂದೆ ಭರಣಪ್ಪ ಸಿಂಗೆ ಸಾ: ಇಬ್ಬರೂ ಕಮಲಾಪೂರ ಮತ್ತು ನಿರಂಜನ ತಂದೆ ಬಸಣ್ಣ ಚೆಂಗಟೆ,ಶಿವರಾಜ ತಂದೆ ಗುಂಡಪ್ಪ ದುಂಪಾಕರ ಸಾ: ಇಸ್ಲಾಂಪೂರ ತಾ; ಬಸವಕಲ್ಯಾಣ ಹಾ.ವ. ಕಮಲಾಪೂರ, ಶಿವಕುಮಾರ ತಂದೆ ಬಸವರಾಜ ನಿಂಗದಳ್ಳಿ ಸಾ; ಶಹಾಪೂರ ಹಾ,ವ,ಕಮಲಾಪೂರ ಇವರೆಲ್ಲರೂ ಕೂಡಿಕೊಂಡು ನಿನಗೆ ಮದುವೆಗೆ ಅಷ್ಟೆ ಕರೆದಿದ್ದು, ಮೆರವಣಿಗೆಯಲ್ಲಿ ಡ್ಯಾನ್ಸ ಮಾಡಿ ನಮ್ಮೊಂದಿಗೆ ಜಗಳ ಮಾಡಿ ಬೀಗರ ಮುಂದೆ ನಮ್ಮ ಮರ್ಯಾದೆ ಕಳೆದಿದ್ದಿ ಅಂತಾ ಎಲ್ಲರೂ ಹೊಡೆ ಬಡೆ ಮಾಡಿರುತ್ತಾರೆ. ಸುಖೀಲ್ ಕುಮಾರ ಈತನು ತನ್ನ ಕೈಯಲ್ಲಿದ್ದ ಕೊಯಿತಾದಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಕೊಯಿತಾದಿಂದ ಇನ್ನೊಂದು ಏಟ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಮುಂದೆ ತಂದಾಗ ಎಡಗೈಯ ಹೆಬ್ಬೆರಳು ಮತ್ತು ಕಿರುಬೆರಳಿಗೆ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ರಕ್ತಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 143.147.148.341.323.324.307.504 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi

Monday, April 9, 2012
Gulbarga Dist Reported Crime
Subscribe to:
Post Comments (Atom)
No comments:
Post a Comment