Police Bhavan Kalaburagi

Police Bhavan Kalaburagi

Friday, April 13, 2012

GULBARGA DIST REPORTED CRIME

ಮಟಕಾ ಜೂಜಾಟ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 12/04/2012 ರಂದು ಮಧ್ಯಾಹ್ನ 1-00 ಮಕ್ತಂಪೂರ ಶಂಕರಲಿಂಗ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಮೊಬೈಲ ಫೋನ ಮುಖಾಂತರ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೆರೆಗೆ ಮಾನ್ಯ ಎ.ಎಸ್.ಪಿ (ಎ) ಉಪ-ವಿಭಾಗ ರವರ ನೇತ್ರತ್ವದಲ್ಲಿ ಶ್ರೀ.ಡಿ.ಸಂತೋಷಕುಮಾರ ಪಿ.ಎಸ್.ಐ ಬ್ರಹ್ಮಪೂರ ಪೊಲೀಸ ಠಾಣೆ ರವರು ಮತ್ತು ಪಂಚರರೊಂದಿಗೆ ಮಟಕಾ ಜೂಜಾಟದ ಚೀಟಿ ಬರೆದುಕೊಳ್ಳುತ್ತಿರುವವನ್ನು ಮೇಲೆ ದಾಳಿ ಮಾಡಿ ಹೆಸರು ವಿಚಾರಿಸಲು ರಾಜಶೇಖರ ತಂದೆ ಗುರುಲಿಂಗಪ್ಪ ಖಜೂರಿ, ಸಾ|| ಶಂಕರಲಿಂಗ ಗುಡಿಯ ಹತ್ತಿರ ಮಕ್ತಂಪೂರ ಗುಲಬರ್ಗಾ ಅಂತಾ ಹೇಳಿದ್ದು, ಸದರಿಯವನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1100,1 ಮಟಕಾ ಚೀಟಿ, 1 ಬಾಲ ಪೆನ್ನ, ಒಂದು ನೊಕಿಯಾ ಕಂಪನಿಯ ಮೊಬೈಲ ಫೋನ್, ಒಂದು ಸ್ಯಾಮಸಂಗ ಕಂಪನಿಯ ಮೊಬೈಲ ಫೋನ್ ಜಪ್ತ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/12 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: