Police Bhavan Kalaburagi

Police Bhavan Kalaburagi

Wednesday, April 4, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ 02-04-12 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಪ್ರವೀಣಕುಮಾರ ಈತನು ತನ್ನ ಗೆಳೆಯರೊಂದಿಗೆ ಹಾಗರಗಾ ರೋಡಿಗೆ ಇರುವ ಬೇಗ ಕ್ಲಿನಿಕ ಹತ್ತಿರ ನಡೆದುಕೊಂಡು ಹೊರಟ ನನ್ನನ್ನು ಕಾರಿನಲ್ಲಿ ಜಬರ ದಸ್ತಿಯಿಂದ ಕೂಡಿಸಿಕೊಂಡು ಸೇಡಂಕ್ಕೆ ಒಯ್ದು ಅಲ್ಲಿಂದ ಒಂದು ಹಳ್ಳಿಗೆ ಕರೆದುಕೊಂಡು ಒಂದು ಚಪ್ಪರ ರೂಮಿನಲ್ಲಿ ದಿನಾಂಕ: 02-04-2012 ರಿಂದ ಸಾಯಂಕಾಲ 7 -00 ಗಂಟೆಯಿಂದ ದಿನಾಂಕ: 04-04-2012 ರ 3-00 ಗಂಟೆಯವರೆಗೆ ಕೂಡಿ ಹಾಕಿರುತ್ತಾರೆ. ಈ ಸಮಯದಲ್ಲಿ ನನಗೆ ಬೇಹುಷ ಮಾಡಿ ನನಗೆ ಎನು ಮಾಡಿದ್ದಾನೆಂಬುದು ಗೊತ್ತಿಲ್ಲಾ. ನಮ್ಮ ಮನೆಯವರು ಮಿಸ್ಸಿಂಗ ಕೇಸ ಮಾಡಿದ್ದಾರೆ ಸಿಕ್ಕಿ ಹಾಕಿಕೊಳ್ಳುತ್ತೇನೆ. ನಿನಗೆ ನಿಮ್ಮ ಮನೆಗೆ ಒಯ್ದು ಬಿಡುತ್ತೇನೆ ನೀನು ನಿಮ್ಮ ಮನೆಯಲ್ಲಿ ಕೇಳಿದರೆ ಫ್ರೆಂಡ್ಸ ಮನೆಗೆ ಹೋಗಿರುತ್ತೇನೆ. ಅಂತಾ ಹೇಳಬೇಕು ಅಂತಾ ಚಾಕು ತೋರಿಸಿ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.105/12 ಕಲಂ 366, 342,506, 323 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ಕೊಲೆ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮಂಜುನಾಥ ತಂದೆ ಬಸಯ್ಯ ಗುತ್ತೇದಾರ ಸಾ: ಅವರಾದ ತಾ: ಜೇವರ್ಗಿ ರವರು ನನ್ನ ತಂದೆಯವರು ಜೆ.ಸಿ..ಬಿ ಯ ಕಮೀಷನ ಎಜೇಂಟ ಅಂತಾ ಕೆಲಸ ಮಾಡಿಕೊಂಡಿದ್ದು. ದಿನಾಂಕ: 25/03/2012 ರಂದು ಬಸಯ್ಯ ಗುತ್ತೇದಾರ ಮತ್ತು ಬಾಪು ಕಚೋರೆ ಇವರ ಮದ್ಯೆ ಕಮೀಷನದ ಹಣ 1,84,000-00 ರೂಪಾಯಿ ನಮ್ಮ ತಂದೆಗೆ ಕೊಡುವ ವಿಷಯದಲ್ಲಿ ಬಾಯಿ ಮಾತಿನ ತಕರಾರು ಆಗಿರುತ್ತದೆ. ದಿನಾಂಕ: 27/03/2012 ರಂದು ಮುಂಜಾನೆ ಮನೆಯಿಂದ ಜೆ.ಸಿ.ಬಿ ಕೆಲಸದ ಸಲುವಾಗಿ ಮಾರಡಗಿಗೆ ಹೊಗುತ್ತೇನೆ ಅಂತ ಹೊದವರು ವಾಪಸ್ಸ ಮನೆಗೆ ಬಂದಿರುವುದಿಲ್ಲಾ. ಬಾಪೂ ಕಚೋರಿ ಸಾ: ಕೇಸ್ಕರವಾಡಿ ಇತನು ನಮ್ಮ ತಂದೆಗೆ ಹೊಡೆದು ಕೊಲೆ ಮಾಡಿದರೆ ನನ್ನ ತಂದೆಗೆ ಕೊಡಬೇಕಾದ ಹಣ ಮುಣುಗಿ ಹೋಗುತ್ತವೆ ಅಂತಾ ವಿಚಾರ ಮಾಡಿ ದಿನಾಂಕ: 27/03/2012 ರಂದು ನಮ್ಮ ತಂದೆ ಜಿ.ಸಿ.ಬಿ ಹತ್ತಿರ ಕೆಲಸ ಮಾಡಿಸಲು ಹೋದಾಗ ಬಾಪೂ ಕಚೂರೆ ಇತನು ತನ್ನ ಸಂಗಡ ಜಿ.ಸಿ.ಬಿಯಲ್ಲಿ ಕೆಲಸ ಮಾಡುವ ಇತರರೊಂದಿಗೆ ಕೂಡಿ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಾಯಿಬಣ್ಣ ಕವಲ್ದಾರ ಸಾ: ಕೊಡಚಿ ಇವರ ಮುದಬಾಳ ಬಿ ಗ್ರಾಮದ ಸೀಮಾಂತರದಲ್ಲಿ ಇರುವ ಹೊಲದಲ್ಲಿ ಜಿ.ಸಿ.ಬಿಯಿಂದ ತಗ್ಗು ತೋಡಿ ಹೆಣ ಅದರಲ್ಲಿ ಹಾಕಿ ಯಾರಿಗೂ ಗೊತ್ತಾಗದಂತೆ ಮಣ್ಣು ಮುಚ್ಚಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 37/2012 ಕಲಂ 302, 201, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹೆಂಡತಿಗೆ ಬೆಂಕಿ ಹಚ್ಚಿದ ಗಂಡ:
ಆಳಂದ ಪೊಲೀಸ್ ಠಾಣೆ: ಸಂಗಮ್ಮ ಗಂಡ ಅಂಬರಾಯ ಪುಜಾರಿ ಸಾ||ಕೊತನ್ ಹಿಪ್ಪರರ್ಗಾ ತಾ||ಆಳಂದ ರವರು ನನ್ನ ಮದುವೆ 13 ವರ್ಷಗಳ ಹಿಂದೆ ಅಂಬರಾಯ ಪುಜಾರಿ ಸಾ: ಕೊತನ ಹಿಪ್ಪರಗಾ ರವರೊಂದಿಗೆ ಮದುವೆಯಾಗಿದ್ದು, 2 ಹೆಣ್ಣು ಮಕ್ಕಳು 2 ಗಂಡು ಮಕ್ಕಳು ಇರುತ್ತಾರೆ, ನನ್ನ ಗಂಡ ಸರಾಯಿ ಕುಡಿಯುವ ಚಟದವನಿದ್ದು. ಕುಡಿಯುತ್ತಿದ್ದ ಹಣ ಕೊಡದೆ ಇದ್ದರೆ ನನ್ನೊಂದಿಗೆ ತಕರಾರು ಮಾಡಿ ಅವಾಚ್ಯವಾಗಿ ಬೈಯ್ದುವದು ಹೊಡೆಯುವದ್ದು ಮಾಡಿ ಮಾನನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾನೆ ದಿನಾಂಕ 04/04/2012 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ ನಾನು ರೊಟ್ಟಿ ಮಾಡುತ್ತಾ ಕುಳಿತಾಗ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ ಗ್ಯಾಸಲೇಟ ಡಬ್ಬಿಯಿಂದ ಎಣ್ಣೆ ನನ್ನ ತಲೆಯ ಮೇಲೆ ಸುರಿದು ಬೆಂಕಿ ಕಡಿಯಿಂದ ಕಡ್ಡಿ ಕೊರೆದು ಸಾಯಿಸುವ ಉದ್ದೇಶದಿಂದ ಬೆಂಕಿ ಹಚ್ಚಿದನು ನಾನು ಚಿರಾಡುವ ಸಪ್ಪಳ ಕೇಳಿ ಮನೆಯ ಪಕ್ಕದವರು ಬಂದು ಬಿಡಿಸಿರುತ್ತಾರೆ. ಮೈಕೈಗೆ ಬೆಂಕಿ ಹತ್ತಿದ್ದರಿಂದ ಮುಖಕ್ಕೆ, ಎರಡು ಕೈಗಳಿಗೆ, ಎದಗೆ, ಬೆನ್ನಿಗೆ, ಸುಟ್ಟ ಗಾಯಗಳಾಗಿರುತ್ತವೆ. ಉಪಚಾರ ಕುರಿತು ಆಳಂದ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 64/2012 ಕಲಂ 498 (ಎ) 504, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: