ಬೇಟೆ ಸಿಗದೆ ಇರುವದಕ್ಕೆ ಕೊಲೆ:
ಮಳಖೇಡ ಪೊಲೀಸ ಠಾಣೆ:ಶ್ರೀಮತಿ ಮುತ್ತಮ್ಮ ಗಂಡ ಸಂತೋಷ ಯಡ್ಡಳ್ಳಿ ವಯ:22 ವರ್ಷ, ಸಾ:ಕುಕ್ಕುಂದಾ ಗ್ರಾಮ, ತಾ:ಸೇಡಂ ರವರು ನನ್ನ ಗಂಡನಾದ ಸಂತೋಷ ಮತ್ತು ಕಿಟ್ಟಪ್ಪ ಕರದಳ್ಳಿ, ಸಾಬಣ್ಣ ಕರದಳ್ಳಿ ರವರು ದಿನಾಂಕ 04-04-2012 ರಂದು ಮದ್ಯಾಹ್ನ ಸಮಯದಲ್ಲಿ ಬೇಟೆ ಆಡಲು ಹೋಗಿ ಬೇಟೆ ಮುಗಿಸಿಕೊಂಡು ಸಾಯಂಕಾಲ ಮರಳಿ ಮನೆಗೆ ಬಂದು ನನಗೆ ಬೇಟೆ ಸಿಕ್ಕಿಲ್ಲ ಅಂತಾ ತಿಳಿಸಿ ಊರಲ್ಲಿ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದನು ಸಾಯಂಕಾಲ 6-30 ಗಂಟೆಗೆ ಟೇಲಿಫೋನ ಎಕ್ಸೇಂಜ ಆಫಿಸ್ ಹತ್ತಿರ ನಿಂಬೆ ಗಿಡದ ಸಮೀಪ ಒಬ್ಬರಿಗೊಬ್ಬರು ಬೇಟೆಗೆ ಹೋದಾಗ ಭೇಟೆ ಸಿಗಲಿಲ್ಲ ಅಂತಾ ಜಗಳ ಮಾಡುತ್ತಿದ್ದರು ಕಿಟ್ಟಪ್ಪನು ಸಂತೋಷನೊಂದಿಗೆ ಜಗಳ ಮಾಡುವಾಗ ಮರೇಮ್ಮ ಗಂಡ ಹಣಮಂತ ಇಡ್ಲೂರ ಇವಳು ಜಗಳ ನೋಡಿ ಓಡಿ ಹೋಗಿ ಕಿಟ್ಟಪ್ಪನ ತಮ್ಮನಾದ ಸಾಬಣ್ಣ ತಂದೆ ದೆವಸುಂದರ ಇತನಿಗೆ ನಿನ್ನ ಅಣ್ಣನಿಗೆ ಹೊಡೆಯುತ್ತಿದ್ದಾರೆ ಬಾ ಅಂತಾ ಹೇಳಿದಳು ಆಗ ಸಾಬಣ್ಣನು ಮನೆಯಲ್ಲಿದ್ದ ಭರ್ಚಿ ತಗೆದುಕೊಂಡು ಜಗಳ ನಡೆದಲ್ಲಿಗೆ ಬಂದು ಮರೆಮ್ಮ ಇವಳು ಏನು ನೋಡುತ್ತಿ ಸಂತೋಷನಿಗೆ ಹೊಡೆದು ಬಿಡು ಅಂತಾ ಸಾಬಣ್ಣನಿಗೆ ಪ್ರಚೋದನೆ ನೀಡಿದ್ದರಿಂದ ಕಿಟ್ಟಪ್ಪ ಮತ್ತು ಸಾಬಣ್ಣ ಇವರುಗಳು ಸಂತೋಷನಿಗೆ ನೆಲಕ್ಕೆ ಕೆಡವಿ ಕಿಟ್ಟಪ್ಪನು ಕೈಯಿಂದ ಮುಸ್ಟಿ ಮಾಡಿ ಸಂತೋಷನ ಬಲ ಕಪಾಳಕ್ಕೆ ಮತ್ತು ಎದೆಗೆ ಕುತ್ತಿಗೆಗೆ ಹೊಡೆದನು ಸಾಬಣ್ಣನು ಕೇಳಗೆ ಬಿದ್ದ ಸಂತೋಷನಿಗೆ ಭರ್ಚಿಯಿಂದ ತಲೆಗೆ ಹೊಡೆದನು ಅವನು ಬೇವುಷ ಆಗಿ ಬಿದ್ದಿರುತ್ತಾನೆ ಅಂತಾ ಈರಪ್ಪಾ ತಂದೆ ಚಂದ್ರಪ್ಪಾ ರವರು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಾವ, ಅತ್ತೆ ಹೋಗಿ ನೋಡಲಾಗಿ ನನ್ನ ಗಂಡನು ಬೆವುಷ ಆಗಿ ಬಿದ್ದಿದ್ದನು ಅವನಿಗೆ ಉಪಚಾರಕ್ಕಾಗಿ ನಾವುಗಳು ಮತ್ತು ನಮ್ಮೂರ ಈರಪ್ಪ ಯಡ್ಡಳ್ಳಿ, ನರಸಪ್ಪ ಬೀರನಳ್ಳಿ ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೇಡಂ ಸರ್ಕಾರಿ ಆಸ್ಪತ್ರೆಗೆ ರಾತ್ರಿ 8-30 ಗಂಟೆಗೆ ಬಂದು ಸೇರಿಕೆ ಮಾಡಿದ್ದು ಆಗ ಡಾಕ್ಟರ ಸಾಹೇಬರು ನೋಡಿ ನಿನ್ನ ಗಂಡ ಸಂತೋಷ ಸತ್ತಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡ ಸಂತೋಷ ಇವನಿಗೆ ಬೇಟೆ ಆಡಲು ಹೋದಾಗ ಬೇಟೆ ಸಿಕ್ಕಿಲ್ಲ ಅಂತಾ ವಿನಾಃಕಾರಣ ಜಗಳ ಮಾಡಿ ಕೈಯಿಂದ ಎದೆಗೆ ಮತ್ತು ತಲೆಗೆ ಹೋಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 302,109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ಶ್ರೀ ಗುರಣ್ಣ ತಂದೆ ಮಡಿವಾಳಪ್ಪ ಕೆಸರಟಗಿ ಸಾ: ಕಾಚಾಪೂರ ತಾ: ಜೇವರ್ಗಿ ರವರು ನನಗೆ ಸುಮಾರು 8-10 ವರ್ಷಗಳ ಹಿಂದೆ ಸೂರಪೂರ ತಾಲೂಕಿನ ಹಾವಿನಾಳ ಗ್ರಾಮದ ಅಯ್ಯಣ್ಣ ತಂದೆ ಸಿದ್ದಣ್ಣ ಕಲ್ಲಮನಿ ಇವರ ಮಗಳಾದ ಮಲ್ಲಮ್ಮ ಇವಳೊಂದಿಗೆ ಮದುವೆಯಾಗಿರುತ್ತದೆ. 8 ತಿಂಗಳ ಅನುಸುಬಾಯಿ ಎಂಬ ಹೆಣ್ಣು ಮಗು ಇರುತ್ತದೆ ಈಗ ಸುಮಾರು ಒಂದು ವರ್ಷದಿಂದ ನಮ್ಮೂರಿನ ಗುರುಸಿದ್ದಪ್ಪ ತಂದೆ ಗುರಣ್ಣ ಕೆಂಬಾವಿ ಇತನು ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಾ,ನನ್ನ ಹೆಂಡತಿಯೊಂದಿಗೆ ಅತೀ ಸಲುಗೆಯಿಂದ ಮಾತನಾಡುವುದು ಮಾಡುತ್ತಿದ್ದನು. ದಿನಾಂಕ: 30-03-2012 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ತಂದೆ ಮನೆಯಲ್ಲಿದ್ದಾಗ ನನ್ನ ಹೆಂಡತಿ ಮಲ್ಲಮ್ಮ ಇವಳು ಸಂಡಾಸಕ್ಕೆ ಹೊಗಿ ಬರಲು ಮನೆಯಿಂದ ಹೋರಟಳು ಸ್ವಲ್ಪ ಸಮಯದಲ್ಲಿ ನನ್ನ ಹೆಂಡತಿ ಚಿರಾಡುತ್ತಿರುವಾಗ ನಮ್ಮ ಮನೆಯವರೆಲ್ಲರೂ ಹೋಗಿ ನೋಡಲಾಗಿ ಗುರುಸಿದ್ದಪ್ಪ ತಂದೆ ಗುರಣ್ಣ ಕೆಂಬಾವಿ ಸಾ: ಕಾಚಾಪೂರ ಇತನು ನನ್ನ ಹೆಂಡತಿಗೆ ಕೈಹಿಡೆದು ಜಬರ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಕ್ರುಜರ್ ನಂ ಕೆಎ-32-ಎ-0731 ನೇದ್ದರಲ್ಲಿ ಜಬರದಸ್ತಿಯಿಂದ ಎತ್ತಿ ಹಾಕುತ್ತಿದ್ದಾಗ ನಾವೆಲ್ಲರೂ ಬಿಡಿಸಿಕೊಳ್ಳುತ್ತಿದ್ದಂತೆ ಜೀಪನ್ನು ಚಾಲು ಮಾಡಿಕೊಂಡು ಹೋಗಿರುತ್ತಾನೆ, ನನ್ನ ಹೆಂಡತಿಯಾದ ಮಲ್ಲಮ್ಮಳಿಗೆ ಪುಸಲಾಯಿಸಿ ಜಬರ ದಸ್ತಿಯಿಂದ ಕೈ ಹಿಡಿದು ಎಳೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 366,504,506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾನೆ.
ಜೂಜಾಟ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ದಿನಾಂಕ :04/04/2012 ರಂದು ಹನುಮಾನ ನಗರ ತಾಂಡಾದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಪ್ರಯುಕ್ತ ಶ್ರೀ ಭೂಷಣ ಜಿ. ಭೊರಸೆ ಎ.ಎಸ್.ಪಿ "ಎ" ಉಪ ವಿಭಾಗ ಗುಲಬರ್ಗಾರವರು ಮತ್ತು ಪಿ.ಐ ಜೆ.ಹೆಚ್ ಇನಾಮದಾರ ಹಾಗು ಸಿಬ್ಬಂದಿವರಾದ ಚೆನ್ನಪ್ಪ, ಚಂದ್ರಕಾಂತ, ರಫೀಕ, ಶಿವಪ್ರಕಾಶ ಪಿ.ಸಿರವರು ಪಂಚರ ಸಮಕ್ಷಮ ಜೂಜಾಟಗಾರರ ಮೇಲೆ ದಾಳಿ ಮಾಡಿ ಕುನಾಲ ತಂದೆ ಸುಭಾಷ ರಾಠೋಡ, ಸಾ||ಹನುಮಾನ ನಗರ ತಾಂಡ, ರಾಮಚಂದ್ರ ತಂದೆ ಶಂಕರ, ವಿಶ್ವನಾಥ ತಂದೆ ಸುಭಾಷ ಮತ್ತು ಸುಭಾಷ ತಂದೆ ಭಿಮಷ್ಯಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟಕ್ಕೆ ಸಂಬಂದಿಸಿದ 5500=00 ರೂಪಾಯಿ ನಗದು ಹಣ 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 42/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಜಗದೀಶ ತಂದೆ ಸುರೇಶ ಶೇಷಲು ಸಾ|| ಘಾಟಗೆ ಲೇಔಟ ಗುಲಬರ್ಗಾರವರು ನಾನು ದಿನಾಂಕ 03.04.2012 ರಂದು ರಾತ್ರಿ 9-00 ನಮ್ಮ ಪ್ಲೆವುಡ್ ಹಾರ್ಡವೇರ ಅಂಗಡಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿ:04.04.2012 ರಂದು ಬೆಳಿಗ್ಗೆ ಬಂದು ನೋಡಲಾಗಿ ಅಂಗಡಿಯ ಸೇಟರ್ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಪ್ಲೆವುಡ್ & ಹಾರ್ಡವೇರ ಸಾಮಾನುಗಳು ಒಟ್ಟು ಅಕಿ 18825/- ರೂ ನೇದ್ದು ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ 43/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಕಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment