Police Bhavan Kalaburagi

Police Bhavan Kalaburagi

Monday, April 9, 2012

GULBARGA DIST REPORTED CRIMES


ಅನೈಸರ್ಗಿಕ ಸಂಭೋಗ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 07/04/2012 ರಂದು ಶನಿವಾರ ಮುಂಜಾನೆ ಅಮರೇಶನು ಸ್ನಾನ ಮಾಡುವಾಗ ನರಳುತ್ತಿರುವದನ್ನು ಕೇಳಿ ನಾನು ಬಚ್ಚಲಲ್ಲಿ ಹೋಗಿ ನೋಡಲಾಗಿ ನೋವಿನ ಬಾದೆಯಿಂದ ನರಳುತ್ತಿದ್ದನು, ಕೈ ಸನ್ನೆ ಮಾಡಿ ವಿಷಯ ತಿಳಿಸಿದನು. ಆತನು ಕರೆದುಕೊಂಡು ಗ್ರಾಮದ ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗಿ ತಾನು ಮಲಗಿರುವ ಜಾಗವನ್ನು ತೋರಿಸಿ ಸದರಿ ಜಾಗದಲ್ಲಿ ಮಲಗಿದಾಗ ಒಬ್ಬ ವ್ಯಕ್ತಿ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆ ನಮ್ಮ  ಗ್ರಾಮದ ಗುಂಡಪ್ಪ ತಂದೆ ನಾರಾಯಣ ನಾಟಿಕಾರ ಇವನ ಕಡೆಗೆ ಕೈ ಮಾಡಿ ತೋರಿಸಿ ಈತನೆ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆಂದು ತೋರಿಸಿರುತ್ತಾನೆ ಅಂತ ತೋರಿಸಿದ್ದ ನೊಂದ ಯುವಕನ ತಾಯಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 27/2012 ಕಲಂ 377 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಪುರ್ಣಿಮಾ ಕುಲಕರ್ಣಿ ಗಂಡ ಸುನಿಲ್ ಅಗ್ನಿಹೋತ್ರಿ ಸಾ|| ಕವಿ ಪ್ಲಾಟ ಸ್ಟೇಷನ ರೋಡ ಬಿಜಾಪೂರ ಹಾ|||| 72 ಕೋಚಲೈನ ಎಕ್ಸಷ್ಟೇನ್ಸ ಪೇನಸ್ಲಿಯನಿಯಾ ಪಿ.ಎ 1934 ಯು.ಎಸ್.ಎ ರವರು ನಮ್ಮ ತಮ್ಮನ ಮದುವೆಯು ಗುಲಬರ್ಗಾ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇರುವದರಿಂದ ನಾನು ಮುದುವೆಗೆ ಬಂದಿರುತ್ತನೆ. ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಯು.ಎಸ್ ಡ್ರಾವಿಂಗ ಲೈಸನ್ಸ, ಬ್ಯಾಂಕ ಆಫ್ ಅಮೇರಿಕಾ ಕ್ರೇಡಿಟ / ಡೆಬಿಟ ಕಾರ್ಡ, ಐಸಿಐಸಿಐ ಡೆಬಿಟ ಕಾರ್ಡ, ಯು.ಎಸ್.ಇನ್ಸೂರೇನ್ಸ ಮೇಡಿಕಲ್/ಕಾರ ಕಾರ್ಡ,ವಾಲ ಮಾರ್ಟ ಕ್ರೇಡಿಟ ಕಾರ್ಡ,ಕೋಲಾಭ ಚಾರ್ಜ ಕಾರ್ಡ,ಸನ್ಯಾಸ ಕ್ಲಬ ಕಾರ್ಡ,ಬ್ಲಾಕ ಬೇರಿ ಮೋಬಾಯಿಲ್ ಅ||ಕಿ|| 10,000/-, ಯು.ಎಸ್. ಲೈಬ್ರರಿ ಕಾರ್ಡ ಮತ್ತು ಇನ್ನಿತರ ದಾಖಲಾತಿಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 46/12 ಕಲಂ: 379 380 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ನಾಗೇಂದ್ರ ಸಿಪಿಸಿ.436 ಶಹಾಬಾದ ನಗರ ಠಾಣೆರವರು ಠಾಣೆ ವ್ಯಾಪ್ತಿಯ ರೇಲ್ವೆ ಸ್ಟೇಷನ ಹತ್ತಿರ ಪೆಟ್ರೋಲಿಂಗ ಕರ್ತವ್ಯ ಕುರಿತು ಹೋದಾಗ ಪೋಸ್ಟ್‌ ಆಫೀಸ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದನ್ನು ನೋಡಿ ವಿಚಾರಿಸಲಾಗಿ ಆತನ ಹೆಸರು ಶಾಮ ತಂದೆ ರಘುನಾಥ ನಾಯಕ ಸಾ:ಇಂದಿರಾ ನಗರ ಮಡ್ಡಿ ನಂ.2 ಅಂತಾ ಹೇಳಿದನು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗಬಹುದು ಅಂತಾ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2012 ಕಲಂ: 110 (ಇ) & (ಜಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಮೇಲೆ ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ.ನೀಲಮ್ಮ ಗಂಡ ಸೋಮನಾಥ ವಗ್ಗಾಲೆ ಸಾ|| ಮೋಘಾ (ಕೆ)ರವರು ನನ್ನ ಮನೆಯ ಮುಂದೆ ಬಂದು ಪರಮೇಶ್ವರ ತಂದೆ ಚನ್ನಪ್ಪ ವಗ್ಗಾಲೆ, ಶರಣಪ್ಪ ತಂದೆ ಚನ್ನಪ್ಪ ವಗ್ಗಾಲೆ,ಜಗದೇವಿ ಗಂಡ ಚನ್ನಪ್ಪ ವಗ್ಗಾಲೆ, ಚನ್ನಪ್ಪ ತಂದೆ ದುಂಡಪ್ಪ ವಗ್ಗಾಲೆ ಇವರೆಲ್ಲರೂ ಕೂಡಿಕೊಂಡು ಮನೆಯ ಹತ್ತಿರ ಬಂದು ಹೊಲಕ್ಕೆ ಪೈಪಲೈನ ಮಾಡಬೇಡ ಅಂತಾ ಹೇಳಿದರೂ ಪೈಪ ಲೃನ್ ಮಾಡಿದ್ದಿರಿ ಅಂತಾ ಅವಾಚ್ಯಾವಾಗಿ ಹೊಡೆ ಬಡೆ ಮಾಡಿರುತ್ತಾರೆ. ಮತ್ತು ಸೀರೆ ಹಿಡಿದು ಎಳೆದಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2012 ಕಲಂ 323,324, 354, 504, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಜೀವನಕುಮಾರ ತಂದೆ ಶಿವಶರಣಪ್ಪಾ ನಿಂಗಮಾರಿ, ಸಾಃ ಮಳಖೇಡ, ಹಾ.ವ ಬಿ.ಸಿ.ಎಮ್ ಹಾಸ್ಟೆಲ ಬುದ್ದ ವಿಹಾರ ಗುಲಬರ್ಗಾರವರು ನಾನು ದಿನಾಂಕ 08-04-2012 ರಂದು ಮಧ್ಯಾಹ್ನ ಅಟೋರಿಕ್ಷಾ ನಂ. ಕೆ.ಎ 32 ಎ 5048 ನೇದ್ದರಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಅಟೋರಿಕ್ಷಾ ಚಾಲಕನು ಹುಮನಾಬಾದ ರೋಡಿಗೆ ಇರುವ ಲಾಹೋಟಿ ಶೋ ರೂಮ ಹತ್ತಿರ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆದು ಪಲ್ಟಿ ಮಾಡಿ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 279, 337, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಜಕುಮಾರ ತಂದೆ ಶಿವರಾಜ ಮಂಗದಳ್ಳಿ ಸಾ: ಭೀಮ್ಮಳ್ಳಿ ತಾ: ಗುಲಬರ್ಗಾರವರು ನಾನು ಮತ್ತು ಗುರುರಾಜ ದಿನಾಂಕ:08/04/2012 ರಂದು ಮದ್ಯಾಹ್ನ 12 ಗಂಟೆಗೆ ನನ್ನ ಮೋಟಾರ ಸೈ ಕಲ ನಂ ಕೆಎ 37 ಆರ್‌ 6861 ನೇದ್ದರ ಗುಲಬರ್ಗಾಕ್ಕೆ ಮದುವೆಯ ನಿಶ್ಚಯ ಕಾರ್ಯಾಕ್ರಮಕ್ಕೆ ಹೊರಟಾಗ ಆಳಂದ ಕಡೆಯಿಂದ ಬಸ್ಸ ನಂ ಕೆಎ 36 ಎಪ್‌ 826 ನೇದ್ದರ ಚಾಲಕ ಅತೀವೇಗ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಕಾಲು ಮುರಿದಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/12 ಕಲಂ279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರವಿಕುಮಾರ ತಂದೆ ಚಂದ್ರಶ್ಯಾ ನಡುವಿನ ಮನಿ ಸಾ||ಗರೂರ (ಬಿ) ಹಾ:ವ: ಧನಗರಗಲ್ಲಿ ಬ್ರಹ್ಮಪೂರರವರು ನಾನು ದಿನಾಂಕ:-08/04/2012 ರಂದು ಮದ್ಯಾಹ್ನ 1 ಗಂಟೆಗೆ ಟಿವಿಎಸ್‌ ಎಕ್ಸಲ್ ಮೋಟಾರ ಸೈಕಲ ನಂ ಕೆಎ 32 ಎಕ್ಸ್‌ 3894 ನೇದ್ದರ ಮೇಲೆ ಕೆರೆ ಬೋಸಗಾ ಗ್ರಾಮಕ್ಕೆ ಮದುವೆಗೆ ಹೊರಟಾಗ ಬೋಸಗಾ ಕ್ರಾಸ ಹತ್ತಿರ ಆಳಂದ ಕಡೆಯಿಂದ ಬಸ್ಸ ನಂ ಕೆಎ 32 ಎಪ್‌ 1483 ನೇದ್ದರ ಬಸ್ಸ ಚಾಲಕ ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು ನಿಲ್ಲಿಸಿದೆ ಹಾಗೆ ಹೋಗಿರುತ್ತಾನೆ ಡಿಕ್ಕಿ ಪಡಿಸಿದ್ದರಿಂದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/12 ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: