Police Bhavan Kalaburagi

Police Bhavan Kalaburagi

Monday, April 9, 2012

GULBARGA DIST

ಜೆಸಿಬಿ ಏಜೆಂಟ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ.

ದಿನಾಂಕ: 27-3-12 ರಂದು ಜೇವರಗಿ ತಾಲೂಕಿನ ಅವರಾದ ಗ್ರಾಮದ ಶ್ರೀ ಬಸಯ್ಯ ತಂದೆ ಸಿದ್ದಯ್ಯ ಗುತ್ತೇದಾರ ವಯ: 42 ವರ್ಷ ಉ: ಜೆಸಿಬಿ ಎಜೇಂಟ ಇತನ ಹತ್ಯೆಯಾದ ಬಗ್ಗೆ ಮೃತನ ಮಗನಾದ ಮಂಜುನಾಥ ಗುತ್ತೇದಾರ ಸಾ: ಅವರಾದ ಇವರು ನೀಡಿದ ಪಿರ್ಯಾದಿ ಮೇರೆಗೆ ಜೇವರಗಿ ಪೊಲೀಸ ಠಾಣೆಯಲ್ಲಿ ದಿನಾಂಕ: 4-4-12 ರಂದು ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿತರು ಮೃತನ ಶವವನ್ನು ಮುದಬಾಳ (ಕೆ) ಕೊಡಚಿ ರಸ್ತೆಯ ಪಕ್ಕದ ಸಾಬಣ್ಣ ಕವಲ್ದಾರ ರವರ ಹೊಲದಲ್ಲಿ ಜೆ.ಸಿ.ಬಿ. ಉಪಯೋಗಿಸಿ ಮಣ್ಣು ಮಾಡಿ ಹೋಗಿದ್ದರು. ಇದನ್ನು ಖಚಿತ ಪಡಿಸಿಕೊಂಡ ಜೇವರಗಿ ಪೊಲೀಸರು ತಹಸೀಲ್ದಾರ ಜೇವರಗಿ ರವರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಸಿ ಶವ ಮಣ್ಣಿನಿಂದ ಹೊರಗೆ ತೆಗೆದು ಮುಂದಿನ ತನಿಖೆ ಕೈಕೊಂಡಿದ್ದರು.

ದಿನಾಂಕ: 8-4-12 ರಂದು ಈ ಪ್ರಕರಣದಲ್ಲಿ ಪ್ರಮುಖ ಆರೋಪಿತನಾದ ಬಾಪು ತಂದೆ ಸುಕದೇವ ಕಾಚರೆ ವಯ: 26 ವರ್ಷ ಸಾ: ಕೇಸ್ಕರವಾಡಿ ತಾ: ಪಂಡರಪೂರ ಜಿ: ಸೋಲಾಪೂರ ಇತನನ್ನು ಹಾಗೂ ಇನ್ನೋಬ್ಬ ಆರೋಪಿತನಾದ ಜೆ.ಸಿ.ಬಿ ಆಪರೇಟರ ಅನೀಲ ತಂದೆ ಜಲಿಂದರ ಬುಡವಳೆ ವಯ: 30 ವರ್ಷ ಸಾ: ನಿಂಬವಡೆ ತಾ: ಅಟಪಡಿ ಜಿ: ಸಾಂಗಲಿ ಮಹಾರಾಷ್ಟ್ರ ಇಬ್ಬರನ್ನು ಬೆಳಿಗ್ಗೆ 6 ಗಂಟೆ ಸುಮಾರಿಗೆ ಖಚಿತ ಭಾತ್ಮಿ ಆಧರಿಸಿ ಮಹಾರಾಷ್ಟ್ರದ ಸತಾರಾ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ಸೂಕ್ತ ವಿಚಾರಣೆ ಮಾಡಿದಾಗ ಇಬ್ಬರು ಆರೋಪಿತರು ಕೊಲೆಯಾದ ಬಸಯ್ಯನಿಗೆ ಕೋಡಬೇಕಾದ 1,04,000=00 ರೂಪಾಯಿ ಕಮೀಶನ್ ಹಣ ಮುಳುಗಿಸುವ ಉದ್ದೇಶದಿಂದ ದಿನಾಂಕ: 28-3-12 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆತನು ಮಲಗಿದಾಗ ಆತನ ತಲೆ ಮತ್ತು ಎದೆಗೆ ದೊಡ್ಡ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಅದೇ ಜೆ.ಸಿ.ಬಿ ಯಲ್ಲಿ ಹಾಕಿಕೊಂಡು ಬಂದು ಕೊಡಚಿ ಗ್ರಾಮದ ಸಾಬಣ್ಣ ಕವಲ್ದಾರ ಇವರ ಹೊಲದಲ್ಲಿ ರಾತೋ ರಾತ್ರಿ ಜೆ.ಸಿ.ಬಿ ಯಿಂದ ತೆಗ್ಗು ತೋಡಿ ಹೆಣ ಹೂತು ಹೋದ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಆರೋಪಿತರಿಂದ ಗುನ್ನೆಗೆ ಉಪಯೋಗಿಸಿದ ಸುತ್ತಿಗೆ ಹಾಗೂ ಜೆ.ಸಿ.ಬಿ ಯನ್ನು ವಶಪಡಿಸಿಕೊಂಡಿದ್ದು, ಜೆ.ಸಿ.ಬಿ. ಯು ಆರೋಪಿತನಾದ ಬಾಪು ಇತನ ಸಂಬಂಧಿಕನಾದ ಸಚೀನ ತಂದೆ ಬಾಪು ಮೋಟೆ ಸಾ: ನಿಂಬವಡೆ ತಾ: ಅಟಪಡಿ ಇವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಸದರಿ ಪ್ರಕರಣದ ತನಿಖೆಯನ್ನು ಶ್ರೀ ಪ್ರವೀಣ ಪವಾರ ಪೊಲೀಸ ಅಧೀಕ್ಷಕರು ಗುಲಬರ್ಗಾ, ಶ್ರೀ, ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು ಗುಲಬರ್ಗಾ, ಶ್ರೀ ಹೆಚ್, ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ವಿಶ್ವನಾಥ್ ರಾವ್ ಕುಲಕರ್ಣಿ ಸಿಪಿಐ ಜೇವರಗಿ ರವರು ಕೈಕೊಂಡು ಅವರು ಹಾಗೂ ಸಿಬ್ಬಂದಿ ಜನರಾದ 1. ಅಣ್ಣಪ್ಪ ಪಿಸಿ 1538, 2, ತುಕಾರಾಮ ಪಿಸಿ 689, 3. ಅಂಬಾರಾಯ ಪಿಸಿ 499, 4. ಮಲ್ಲಿಕಾರ್ಜುನ ಪಿಸಿ 824, 5. ಜಗದೇವಪ್ಪ ಪಿಸಿ 1725 ರವರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ.

No comments: