Police Bhavan Kalaburagi

Police Bhavan Kalaburagi

Wednesday, April 18, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮರೆಪ್ಪಾ ತಂದೆ ನಾಗಪ್ಪ ಹಾಗರಗುಂಡಗಿ ಸಾ: ಬಸವ ನಗರ ಗುಲಬರ್ಗಾ ರವರು ನಾನು ದಿನಾಂಕ 17-04-12 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಸೈಕಲ ಮೇಲೆ ಜೇವರ್ಗಿ ಕ್ರಾಸದಿಂದ ಜೇವರ್ಗಿರಿಂಗ ರೋಡ ಕಡೆಗೆ ಹೋಗುತ್ತಿದಾಗ ಯಾತ್ರಿಕ ನಿವಾಸ ಎದುರು ರೋಡಿನ ಮೇಲೆ ಒಬ್ಬ ಮೋಟಾರ ಸೈಕಲನ್ನು ಜೇವರ್ಗಿ ರಿಂಗ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ನನ್ನ ಸೈಕಲಗೆ ಎದುರುನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2012 ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಾವು ಕಚ್ಚಿ ಸಾವು:

ಮಾದನ ಹಿಪ್ಪರಗಾ ಠಾಣೆ:ಶ್ರೀ.ಶ್ರೀಶೈಲ ತಂದೆ ಕಲ್ಲಪ್ಪ ಮೇತ್ರೆ ಸಾ;ನಾಗಲೇಗಾಂವ ರವರು ನನ್ನ ಹೆಂಡತಿಯಾದ ಸೋನುಬಾಯಿ ಇವಳು ದಿನಾಂಕ: 17-04-2012 ರಂದು ಮುಂಜಾನೆ ಹೊಲದಲ್ಲಿ ಮೆಕ್ಕೆಜೋಳ ಕಣಕಿ ತಗೆದುಕೊಳ್ಳುತ್ತಿದ್ದಾಗ ಮಕ್ಕೆಜೋಳದಕಣಿಕೆಯಲ್ಲಿದ್ದ ಹಾವು ಸೋನುಬಾಯಿಯ ಎಡಗಾಲ ಕಪಖಂಡ ಹತ್ತಿರ ಮತ್ತು ಎಡಗೈತೋರುಬೆರಳಿಗೆ ಕಚ್ಚಿದರಿಂದ ಉಪಚಾರ ಕುರಿತು ಸೊಲ್ಲಾಪೂರಕ್ಕೆ ತಗೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಯು.ಡಿ.ಆರ್ ನಂ 02/2012 ಕಲಂ 174 ,ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಶಾರದಾಬಾಯಿ ಗಂಡ ಲಿಂಬೊಜಿ ವ:45 ವರ್ಷ ಜಾ:ಲಂಬಾಣಿ ಉ:ಮನೆಕೆಲಸ ಸಾ:ಕುಸನೂರ ತಾಂಡಾ ಹಾ:ವ: ಉದನೂರ ತಾಂಡಾ ತಾ:ಜಿ:ಗುಲಬರ್ಗಾರವರು ನನ್ನ ಮಗಳಾದ ಸುರೇಖಾ 6 ವರ್ಷದ ಹಿಂದೆ ಮದುವೆ ಮಾಡಿದ್ದು ನನ್ನ ಅಳಿಯನು ನನ್ನ ಮಗಳ ಶೀಲದ ಬಗ್ಗೆ ಸಂಶಯ ಪಟ್ಟು ಹೊಡೇ ಬಡೇ ಮಾಡಿ ದೈಹಿಕ ಮತ್ತು ಮಾನಸಿಕ ತೊಂದರೆ ಕೊಡುತ್ತಿದ್ದನು,ದಿನಾಂಕ:17/04/2012 ರಂದು 8 ಎಎಮಕ್ಕೆ ನಮ್ಮ ಅಳಿಯ ಕುಮಾರ ಇವನು ನಮ್ಮ ಮಗಳಿಗೆ ಹೊಡೆಯುತ್ತಿದ್ದಾಗ ಮಗಳು ತ್ರಾಸ ತಾಳಲಾರದೇ ಕ್ರಿಮಿನಾಶಕ ಔಷದಿಯನ್ನು ಕುಡಿದು ಒದ್ದಾಡುತ್ತಿದಳು ಆಗ ನಾನು ನಮ್ಮ ತಾಂಡಾದ ಜನರು ಕೂಡಿಕೊಂಡು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿರುತ್ತೇವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಹಸನಸಾಬ ತಂದೆಖಾಜಾಸಾಬ ಬಂಕಾಪೂರ ವ: 31 ಜಾ: ಮುಸ್ಲಿಂ ಉ:ಆಟೋ ರೀಕ್ಷಾ ಚಾಲಕ ಸಾ: ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ 17/4/2012 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಆಟೋ ರೀಕ್ಷಾ ನಂ ಕೆಎ 32 6570 ನೇದ್ದರಲ್ಲಿ ಪ್ಯಾಸೆಂಜರ ಕೂಡಿಸಿಕೊಂಡು ತಾಜ ಸುಲ್ತಾನಪೂರದಿಂದ ಗುಲಬರ್ಗಾ ರಿಂಗ ರೋಡ ಕಡೆಗೆ ಬರುವಾಗ ಕಮಲ ನಗರದ ಹತ್ತಿರ ಹಿಂದಿನಿಂದ ಟ್ರ್ಯಾಕ್‌ರ ನಂ ಕೆಎ 32 ಟಿ- 3951- 3952 ನೇದ್ದರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಆಟೋಕ್ಕೆ ಓವರ ಟೇಕ ಮಾಡಿ ಒಮ್ಮೇಲೆ ಬ್ರೇಕ ಮಾಡಿದಾಗ ಆಟೋ ರೀಕ್ಷಾವು ಟ್ರ್ಯಾಲಿಯ ಹಿಂದೆ ಸಿಕ್ಕಿ ಬಿದಿದ್ದು ಹಾಗೆ ಮುಂದೆ ಹೋಗಿದ್ದರಿಂದ ಆಟೋ ಹಾಗೂ ಟ್ರಾಲಿ ಪಲ್ಟಿಯಾಗಿ ಅದರಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಗುರುನಾಥ ತಂದೆ ಭೀಮಾಶಂಕರ ಖನಕೆ ಸಾ: ಕರಜಗಿ (ಎನ್‌ ತಾ: ಅಕ್ಕಲಕೋಟ ಹಾ: ವ: ಗುಲಬರ್ಗಾರವರು ನಾನು ದಿನಾಂಕ 17/4/2012 ರಂದು ಸಾಯಂಕಾಲ ಗಂಟೆ ಸುಮಾರಿಗೆ ನನ್ನ ಮೋ ಸೈಕಲ ನಂ ಕೆಎ 32 ಎಕ್ಸ್‌‌ 6015 ನೇದ್ದರ ಮೇಲೆ ದುಬೈ ಕಾಲನಿಗೆ ಹೋಗತ್ತಾ ನನ್ನ ಅತ್ತೆ ಮಾವನಿಗೆ ಬಿಟ್ಟು ಮರಳಿ ಮಿಜಬಾ ನಗರ ನಗರ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 35 ಜೆ 8397 ನೇದ್ದರ ಸವಾರನು ಅತಿವೇಗ ಹಾಗೂ ಅಲಕ್ಷತನದಿಂದ ವೇಗವಾಗಿ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 119/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: