Police Bhavan Kalaburagi

Police Bhavan Kalaburagi

Wednesday, April 18, 2012

GULBARGA DIST

ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ 5 ಜನ ಕೊಲೆ ಆರೋಪಿತರ ಬಂದನ:

ದಿನಾಂಕ:14/04/2012 ರಂದು ಡಾ||ಬಾಬಾ ಸಾಬ ಅಂಬೇಡ್ಕರ ರವರ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಕಾಲಕ್ಕೆ ಸಚಿನ ಇತನೊಂದಿಗೆ ರಾತ್ರಿ ಚೌಕ್ ಸರ್ಕಲ್ ನಲ್ಲಿ ಸೂರ್ಯಕಾಂತ ಭೀಮನಗರ, ಮಲ್ಲು ಮತ್ತು ರಾಜು ತೆಲ್ಲೂರ ಸಾ:ಆದರ್ಶ ನಗರ ಕಾಲೋನಿ ಇವರು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿದ್ದರು ಮತ್ತೆ ಅದೇ ವೈಮನಸ್ಸಿನಿಂದ ದಿನಾಂಕ:16/04/2012 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ರಾಮಜಿ ನಗರ ರಸ್ತೆಯ ಮೇಲೆ ಸಚಿನ, ಇತನು ಕಿರಣ & ವಿಜಯ ಕುಮಾರ ಸಂಗಡ ನಿಂತಾಗ ಮಲ್ಲು ಕ್ಯಾಂಟಿನ ಹಾಗು ಇನ್ನು 4 ಜನರೊಂದಿಗೆ ಅಟೋರಿಕ್ಷಾದಲ್ಲಿ ಬಂದು ಸಚೀನ ತಂದೆ ಅರ್ಜುನ ಸಿಂದಗಿ ವಯ:18 ವರ್ಷ, ಸಾ||ರಾಮಜೀ ನಗರ ಇತನನ್ನು ಒಂದು ಆಟೋ ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಅಪಹರಿಸಿಕೊಂಡ ಹೋದ ಸಚೀನ ಇತನಿಗೆ ಇಟಗಾ ಗ್ರಾಮದ ಸೀಮಾಂತರದಲ್ಲಿರುವ ಹಳ್ಳದ ನೀರಿನಲ್ಲಿ ಮುಳುಗಿಸಿ, ಕೆಸರಿನಲ್ಲಿ ತುಳಿದು, ಉಸಿರುಗಟ್ಟಿಸಿ ಕೊಲೆಮಾಡಿರುತ್ತಾರೆ.ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಅಪಹರಣನಾದ ಸಚಿನ ಇತನ ಪತ್ತೆ ಮಾಡಲು ಮತ್ತು ಆರೋಪಿತರನ್ನು ದಸ್ತಗಿರಿ ಮಾಡಲು ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಶ್ರೀ ಎ.ಡಿ ಬಸಣ್ಣನವರ ಡಿಎಸಪಿ (ಬಿ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಈ ತನಿಖಾ ತಂಡಗಳ ನೇತ್ರತ್ವವನ್ನು ಶ್ರೀ ಡಿ.ಜಿ ರಾಜಣ್ಣ ಪೊಲೀಸ್ ಇನ್ಸಪೇಕ್ಟರ ಮತ್ತು ಶ್ರೀ ಬಿ.ಪಿ.ಚಂದ್ರಶೇಖರ ವೃತ್ತ ನಿರೀಕ್ಷಕರು ಮಹಾತ್ಮ ಬಸವೇಶ್ವರ ನಗರ ರವರು ಹಾಗು ಅವರ ಸಿಬ್ಬಂದಿಯವರಿಗೆ ವಹಿಸಿದ್ದು, ಈ ತನಿಖಾ ತಂಡದವರು ದಿನಾಂಕ: 18-04-2012 ರಂದು ಹುಮನಬಾದ ಮತ್ತು ಸೋಲಾಪೂರದಲ್ಲಿ ಕಾರ್ಯಚರಣೆ ನಡೆಸಿ 5 ಆರೋಪಿತರನ್ನು ಬಂದಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಬಂದನಕ್ಕೆ ವ್ಯಾಪಕ ಜಾಲ ಬಿಸಿ ಕಾರ್ಯಚರಣೆ ಜಾರಿಯಲ್ಲಿರುತ್ತದೆ. ದಸ್ತಗಿರಿಯಾದ ಆರೋಪಿತರ ವಿವರ ಈ ಕೆಳಕಂಡಂತೆ ಇರುತ್ತದೆ.1) ಮಲ್ಲು @ ಮಲ್ಲಿಕಾರ್ಜುನ ತಂದೆ ಹುಸನಪ್ಪಾ ಬೆಣ್ಣೂರ,2) ದಿನೇಶ ತಂದೆ ಬಾಬುರಾವ ಟೆಂಗೆ,3) ಯಶ್ವಂತ ತಂದೆ ಶಿವಶರಣಪ್ಪಾ ಬಪ್ಪನ,4) ಸಚಿನ ತಂದೆ ಪ್ರಕಾಶ ರಾಜನಾಳ,5) ಮಲ್ಲಿಕಾರ್ಜುನ ತಂದೆ ಜಗನಾಥ ನಿಂಬರ್ಗಾ ಎಲ್ಲರೂ ಸಾ|| ಭಿಮನಗರ ಗುಲಬರ್ಗಾ .

No comments: