Police Bhavan Kalaburagi

Police Bhavan Kalaburagi

Sunday, April 22, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸಿದ್ಧರಾಮ ತಂದೆ ಅಂಬಾರಾಯ ಶಿರ ಉ:ಟಂಟಂ ಚಾಲಕ ಸಾ: ಕೆರೆ ಭೋಸಗಾ ಗ್ರಾಮರವರು ನನ್ನ ಮಗಳಾದ ಗೌರಮ್ಮ ವಯ || 4 ಮತ್ತು ಅಣ್ಣನ ಮಗಳು ಅಶ್ವಿನಿ ವ|| 8 ವರ್ಷ ಇಬ್ಬರೂ ದಿನಾಂಕ 21-04-12 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ  ಅಂಭಾಭಾಯಿ ಗುಡಿ ಹತ್ತಿರ  ರೋಡ ಬದಿ ಹಿಡಿದುಕೊಂಡು ಹೊರಟಾಗ  ಊರ ಒಳಗಿನಿಂದ ಮೋಟಾರ ಸೈಕಲ ಕೆಎ 32 ಕ 8010 ಚಾಲಕ  ಗುಂಡಪ್ಪ ತಂದೆ ನಾಗಪ್ಪ ನಾಯಿಕೋಡಿ ಸಾ||ಕೆರೆ ಭೋಸಗಾ ಗ್ರಾಮ ಅತಿವೇಗ ಮತ್ತು ಅಲಕ್ಷನತದಿಂದ ನಡೆಸುತ್ತಾ ಬಂದು ನನ್ನ ಮಗಳಿಗೆ ಡಿಕ್ಕಿ ಪಡಿಸಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:122/2012 ಕಲಂ  279,337 ಐಪಿಸಿ ಸಂ. 187 ಎಂ.ವಿ.ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ಸಾ: ಶರಣಸಿರಸಗಿ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ರಾಣಜಿಪೀರ ದರ್ಗಾ ಕ್ರಾಸ ಹತ್ತಿರ ದಿನಾಂಕ: 21/4/12 ರಂದು 1;30 ಪಿಎಮ ಸುಮಾರಿಗೆ ನಿಂತಾಗ  ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ  4824 ನೇದ್ದರ ಸವಾರನು ತನ್ನ ಮೋಟಾರ  ಸೈಕಲ ಸವಾರನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ  ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:123/2012 ಕಲಂ 279 338 ಐಪಿಸಿ ಸಂ/ 187 ಐಎಂವಿ ಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: