Police Bhavan Kalaburagi

Police Bhavan Kalaburagi

Saturday, April 14, 2012

GULBARGA DIST REPORTED CRIMES

ಗೃಹಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ:

ಸೇಡಂ ಪೊಲೀಸ ಠಾಣೆ: ಶ್ರೀಮತಿ ಕಾಶಮ್ಮಾ ಗಂಡ ಕಾಶಪ್ಪ ಮುಗಟಿ ಸಾ:ಸಣ್ಣ ಅಗಸಿ ಸೇಡಂ ತಾ:ಸೇಡಂ ರವರು ನನ್ನ ಮಗಳಾದ ಹಣಮವ್ವ ಇವಳಿಗೆ 10 ವರ್ಷಗಳ ಹಿಂದೆ ಮಹೇಶ ತಂದೆ ಬಸಣ್ಣ ರನಟಲಾ ಸಾ:ಸಣ್ಣ ಅಗಸಿ ಸೇಡಂ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಆದಾಗಿನಿಂದಲೇ ಆಗಾಗ ಜಗಳ ಮಾಡುತ್ತಾ ಬಂದಿರುತ್ತಾರೆ, ನಮ್ಮ ಅಳಿಯ ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತ ದಿನಾಲು ಜಗಳ ಮಾಡುತ್ತಿದ್ದನು. ಈ ವಿಷಯವನ್ನು ಅವನ ತಂದೆ ಬಸಣ್ಣ ರನಟಲಾ ತಾಯಿ ಸಿದ್ದಮ್ಮ ಇವಳಿಗೆ ತಿಳಿಸಿದರೂ ಕೂಡಾ ಸದರಿಯವರು ತನ್ನ ಮಗನಿಗೆ ಬುದ್ದಿವಾದ ಹೇಳಿ ಜಗಳ ಬಿಡಿಸದೇ ಅವನಗೆ ಜಗಳ ಮಾಡಲು ಪ್ರಚೋದನೆ ನೀಡುತ್ತಿದ್ದರು. ದಿನಾಂಕ:14-04-2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಪೋನ ಮೂಲಕ ತಿಳಿದ್ದೆನೆಂದರೆ, ನನ್ನ ಮಗಳಾದ ಹಣಮವ್ವ ಇವಳಿಗೆ ಅವಳ ಗಂಡ ಮಹೇಶ ಇತನು ಸೀಮೆ ಎಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತ ತಿಳಿಸಿದ್ದರಿಂದ ನಾನು ಸೇಡಂ ಸರಕಾರಿ ಆಸ್ಪತ್ರೆಗೆ 12-00 ಗಂಟೆಗೆ ಬಂದು ನನ್ನ ಮಗಳಿಗೆ ವಿಚಾರಿಸಲಾಗಿ ಅವಳು ನನ್ನ ಗಂಡನಾದ ಮಹೇಶ ಇತನು ತನ್ನ ಸಂಗಡ ವಿನಾಕಾರಣ ಜಗಳ ತೆಗೆದು , ಅವಾಚ್ಯ ಶಬ್ದಗಳಿಂದ ಬೈದು ತನಗೆ ಕೈಯಿಂದ ಹೊಡೆಬಡೆ ಮಾಡುವಾಗ ತನ್ನ ಅತ್ತೆ ಸಿದ್ದಮ್ಮ ಹಾಗೂ ಮಾವನಾದ ಬಸಣ್ಣ ಇವರು ಕೂಡ ಮನೆಯಲ್ಲಿದ್ದು ಅವರು ಜಗಳ ಬಿಡಿಸದೇ ಅವಳಿಗೆ ಸೀಮೆ ಎಣ್ಣೆಯನ್ನು ಸುರಿಯುತ್ತಿರುವದನ್ನು ನೋಡಿ ಬಸಣ್ಣ ರನಟಲಾ ಇವನು ತನ್ನ ಮಗನಿಗೆ ಕಡ್ಡಿಪೆಟ್ಟಿಗೆ ನೀಡಿ ಬೆಂಕಿ ಹಚ್ಚುವಂತೆ ಪ್ರೇರಣೆ ನೀಡಿದ್ದಾನೆ ಅತ್ತೆಯಾದ ಸಿದ್ದಮ್ಮ ಇವಳು ನನಗೆ ಎರಡೂ ಕೈ ಹಿಡಿದು ಬೆಂಕಿ ಹಚ್ಚುವಂತೆ ಸಹಾಯ ಮಾಡಿರುತ್ತಾಳೆ, ಮಹೇಶ ಇತನು ಬೆಂಕಿ ಕೊರೆದು ನನಗೆ ಬೆಂಕಿ ಹಚ್ಚಿದ್ದು ನನ್ನ ಮೈಮೇಲೆ ಬಟ್ಟೆ ಬರೆ ಸುಟ್ಟು ಕುತ್ತಿಗೆಗೆ ಎದೆಗೆ ಬೆನ್ನಿಗೆ ಹಾಗೂ ಎರಡೂ ಕೈ ರಟ್ಟೆಗೆ ಸುಟ್ಟ ಗಾಯಗಳಾಗಿರುತ್ತವೆ. ನಮ್ಮ ಮನೆಯ ಮುಂದೆ ಇದ್ದ ನಮ್ಮಣ್ಣ ಶೇಖಪ್ಪ ಮುಗಟಿ, ದ್ಯಾವಣ್ಣ ಮುಗಟಿ ಹಾಗೂ ದತ್ತು ಮುಗುಟಿ ಇವರು ಬೆಂಕಿ ಆರಿಸಿ ಉಪಚಾರ ಕುರಿತು ನನಗೆ ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿರುತ್ತಾಳೆ. ನನ್ನ ಮಗಳಿಗೆ ಹೊಡೆಬಡೆ ಮಾಡಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ಧ ಹಾಗೂ ಕೊಲೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ. 498 (ಎ), 323, 504, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: