ಹಲ್ಲೆ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀ ನರಸಪ್ಪಾ @ ಸಿದ್ದು ತಂದೆ ಬಸಪ್ಪಾ ಕೊತ್ತಾಲ ಸಾ|| ಭೂತಪೂರ ಗ್ರಾಮ ತಾ|| ಸೇಡಂ ರವರು ನನ್ನ ಮನೆಯ ದಿನಾಂಕಃ 19-05-2012 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಮುಂದೆ ಕಾಶಪ್ಪಾ, ಜಗಪ್ಪಾ, ನಾಗಪ್ಪಾ, ದೇವಿಂದ್ರಪ್ಫಾ ರವರು ಟಂ ಟಂ ನಂ ಲ್ಲಿ ಕುಳಿತು ಮನೆಯ ಮುಂದೆ ಬಂದು ನನಗೆ ಹೊರಗೆ ಕರೆದು ಜಗಳ ತೆಗೆದು ಅವಾಚ್ಯವಾಗಿ ಬೈದು ನಮ್ಮ ಚಂದ್ರಮ್ಮಾ ಇವಳಿಗೆ ಓಡಿಸಿಕೊಂಡು ಬಂದು ಮನೆಯಲ್ಲಿಟ್ಟಿದಿ ಮಗನೇ ಅಂತಾ ಬಡಿಗೆಗಳಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿ ಹಗ್ಗದಿಂದ ಕಾಲುಗಳಿಗೆ ಕಟ್ಟಿ ಟಂಟಂದಲ್ಲಿ ಹಾಕಿಕೊಂಡು ದಿನಾಂಕಃ 20-05-2012 ರಂದು 00-30 ಎ.ಎಮ್ ಕ್ಕೆ ಮದನಾ ಗ್ರಾಮ ಕ್ಕೆ ತಂದು ಗ್ರಾಮದಲ್ಲಿರುವ ಜಗಪ್ಪಾ ಈತನ ಮನೆಯ ಮುಂದಿನ ಲೈಟಿನ ಕಂಬಕ್ಕೆ ಕಟ್ಟಿ ಕಲ್ಲುಗಳಿಂದ ಹಾಗೂ ಬಡಿಗೆಗಳಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:56/2012 ಕಲಂ, 143, 147, 148, 341, 324, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment