ಜೂಜಾಟ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ:ದಿನಾಂಕ 20/05/2012
ರಂದು 7-30 ಪಿ.ಎಂ ಕ್ಕೆ ಶ್ರೀ ಶರಣಪ್ಪಾ
ಹಿಪ್ಪರಗಿ ಪಿ.ಐ ಶಹಾಬಾದ ನಗರ ಠಾಣೆ ರವರು ಮತ್ತು ಅವರ ಸಿಬ್ಬಂದಿಯವರು ಕೂಡಿಕೊಂಡು ಭಂಕೂರದ
ತಿಪ್ಪಣ್ಣಾ ಮಾಸ್ತರ ಪಾಲಿಸ ಮಶೀನ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಜೂಜಾಟ
ಆಡುತ್ತಿದ್ದ ನಾಗೇಂದ್ರ ತಂದೆ ರಾಮಲಿಂಗ ಗಾಲಿ ಸಾ;ಭಂಕೂರ, ಬಾಬಾ ಪಟೇಲ ತಂದೆ ಲಾಡ್ಲೆಪಟೇಲ ಶಹಾಬಾದ,
ಮಲ್ಲಣ್ಣಾ ತಂದೆ ಶರಣಪ್ಪಗೌಡ ಸಾ: ಶಂಕರವಾಡಿ, ಶಿವರಾಜ ತಂದೆ ಶಾಮರಾವ ಟೆಂಗಳಿ ಸಾ: ಭಂಕೂರ,
ಶಾಂತು ತಂದೆ ಗುಂಡಪ್ಪಾ ಅಳ್ಳೊಳ್ಳಿ ಸಾ: ಭಂಕೂರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 4770/- ರೂಪಾಯಿಗಳು, ಇಸ್ಪೀಟ ಎಲೆಗಳು ಜಪ್ತಿ
ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 67/2012 ಕಲಂ 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ:ಶ್ರೀ ಭೀಮಪ್ಪಾ ತಂದೆ ಯಲ್ಲಪ್ಪಾ ಚಿಂತಾಮಣಿ ಸಾ:ಮಡ್ಡಿ ನಂ 1
ಶಹಾಬಾದ. ಹಾ;ವ: ಮಾತುಂಗ ಲೇಬರ ಕ್ಯಾಂಪ ಮುಂಬಯಿರವರು ನಾನು ದಿನಾಂಕ
20/05./2012 ರಂದು ಸಾಯಂಕಾಲ 6-00 ಗಂಟೆಗೆ ಮಹಾಕಾಳಿ ಗುಡಿಯ ಹತ್ತಿರ ನಿಂತಾಗ ಕಾಶಿನಾಥ ತಂದೆ
ಲಕ್ಷ್ಮಣ , ಅಂಬು , ನಾಗನಾಥ ಇವರು ಬಂದು ಬೈಯುತ್ತಿದ್ದರು, ಇಲ್ಲಿ ಚೀರಾಡಬೇಡಿರಿ
ಅಂತಾ ಹೇಳಿದಕ್ಕೆ ನಾಗನಾಥ, ಅಂಬು,ಸಂಗಡ ಇನ್ನೂ ಕೆಲವು ಜನರು ಕೂಡಿಕೊಂಡು ಬಿಡಿಸಲು ಬಂದವರಿಗೂ ಹೊಡೆದಿರುತ್ತಾರೆ.
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ:143 147 148
323 324 504 ಸಂ; 149 ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ: ಶ್ರೀ ರಾಜು ತಂದೆ ಲಕ್ಷ್ಮಣ ದಾಸರ ಸಾ: ಮಡ್ಡಿ ನಂ; 1 ಶಹಾಬಾದ ರವರು ನಾನು
ಮತ್ತು ಸಿದ್ದು ತಂದೆ ಯಲ್ಲಪ್ಪಾ, ಶಿವಕಾಂತ, ಹಾಗೂ ಸಿದ್ದು ತಂದೆ ಬಲರಾಮ ಕೂಡಿ ಕಾಶಿನಾಥ ಜೊಗಿ ಇವರ
ಮನೆಯಲ್ಲಿ ಕುಳಿತು ಊಟ ಮಾಡುತ್ತಿರುವಾಗ ಭೀಮಪ್ಪಾ ತಂದೆ ಹಣಮಂತ, ಶಂಕರ ತಂದೆ
ದುರ್ಗಪ್ಪಾ, , ಹಣಮಂತ ತಂದೆ ಶರಣಪ್ಪಾ, ಈರಪ್ಪಾ ತಂದೆ
ಶರಣಪ್ಪಾ, ಮರಗೇಪ್ಪಾ ತಂದೆ
ಮಶ್ಯಾಪ್ಪಾ ಹಾಗೂ ದುರ್ಗಪ್ಪಾ @ ಜಿಗಳ್ಯಾ ತಂದೆ
ಸುಂಕಪ್ಪಾ ಸಾ: ಎಲ್ಲರೂ ಮಡ್ಡಿ ನಂ: 1 ರವರು ಕೂಡಿ ಬಂದು ನನಗೆ
ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ತಲೆಯ ಹಿಂದುಗಡೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು
ಸಿದ್ದು ತಂದೆ ಬಲರಾಮ ದಾಸರ ಇತನಿಗೆ ದುರ್ಗಪ್ಪಾ @ ಜೀಗಳ್ಯಾ ತಂದೆ ಸುಂಕಪ್ಪಾ ಇತನು ಕಟ್ಟಿಗೆಯಿಂದ
ತಲೆಯ ಮೇಲೆ ಹೊಡದು ರಕ್ತಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:69/2012 ಕಲಂ:143 147 148 323 324 504 ಸಂ; 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆ:ಶ್ರೀ ಸಾಯಬಣ್ಣ ತಂದೆ
ಭೀಮಶಾ ಹರಳಯ್ಯ ಸಾ: ಭೂಪಾಲ ತೆಗನೂರ ತಾ:ಜಿ: ಗುಲಬರ್ಗಾರವರು ನಾನು ದಿನಾಂಕ
20/05/2012 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಶ್ರೀ ಸಾಯಬಣ್ಣ ಕೊರಬಾ ಇವರ
ಹೊಲದಲ್ಲಿ ಗಿಡಗಳು ಕಡಿಯುವ ಕೂಲಿ ಕೆಲಸಕ್ಕೆ ಹೊಗಿದ್ದು ನನ್ನ ಜೋತೆ ಅಮ್ಮೂರ ಪ್ರಭು ತಂದೆ ಗುಂಡಪ್ಪಾ
ಹಾಗರಗಾ ಮತ್ತು ತಾಜು ಇವರು ಬಂದಿದ್ದರು, ನಾವು ಮೂರು ಜನ ಹೊಲದಲ್ಲಿ ಕೆಲಸ ಮಾಡಿ ಸಾಯಂಕಾಲ 6-00
ಗಂಟೆ ಸುಮಾರಿಗೆ ನಮಗೆ ಕೂಲಿ ಕೆಲಸಕ್ಕೆ ಹಚ್ಚಿದ ಮಾಲಿಕ ಸಾಯಬಣ್ಣ ಕೊರಬಾ ಇತನ ಮಗನಾದ ಸಿದ್ದು ಇತನು
ಬಂದು ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನಿನಗೆ ಯಾರು ಗಿಡ ಕಡಿಯುದಕ್ಕೆ ಹೇಳಿದ್ದಾರೆ ಅಂತಾ
ಕೇಳಲು, ನಾನು ನಿಮ್ಮ ತಂದೆಯವರು ಗಿಡ ಕಡಿಯುವ ಕೂಲಿ ಕೆಲಸಕ್ಕೆ ಹಚ್ಚಿದ್ದಾರೆ ಅಂತಾ ಅಂದಾಗ ಹೊಡೆ
ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 117/2012 ಕಲಂ 324,504,506
ಮತ್ತು 3(1)(10) ಎಸ್.ಸಿ/ಎಸ್.ಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment