ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರವಿಕುಮಾರ ತಂದೆ ಸಿದ್ರಾಮಪ್ಪಾ ಕೋರಿ ಸಾಃ ಬಸವೇಶ್ವರ ಕಾಲೋನಿ
ಗುಲಬರ್ಗಾ ರವರು ನಮ್ಮ ತಂದೆ ಸಿದ್ರಾಮಪ್ಪಾ ತಾಯಿ ಕಾಂತುಬಾಯಿ ರವರು ದಿಃ 25/05/2012 ರಂದು ಇಬ್ಬರು ಕೂಡಿಕೊಂಡು ಕಮಲಾಪೂರ
ಕೆ.ಜಿ.ಬಿ ಬ್ಯಾಂಕಿನಲ್ಲಿ ಕೆಲಸವಿದ್ದ ಪ್ರಯುಕ್ತ ಸೈಕಲ ಮೇಲೆ ಕುಳಿತುಕೊಂಡು ರಾಜನಾಳದಿಂದ
ಕಮಲಾಪುರಕ್ಕೆ ಬರುತ್ತಿದ್ದಾಗ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ರಾಜನಾಳ ಕ್ರಾಸ ಹತ್ತಿರ
ಎದುರಿನಿಂದ ಜೀಪ ನಂ. ಕೆಎ-20 ಎಮ್-7865 ನೇದ್ದರ ಚಾಲಕ ಮಹ್ಮದ ಮೋಹಿನ ತಂದೆ ಸರದಾರಸಾಬ ಸಾಃ
ಮರಗುತ್ತಿ ಈತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸೈಕಲ ಮೇಲೆ ಬರುತ್ತಿದ್ದ ನಮ್ಮ ತಂದೆ
ತಾಯಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನಮ್ಮ ತಂದೆಗೆ ಬಲಕಣ್ಣಿನ ಕೆಳಗೆ ರಕ್ತಗಾಯ, ಹಣೆಗೆ ರಕ್ತಗಾಯವಾಗಿರುತ್ತದೆ. ನಮ್ಮ ತಾಯಿ ಕಾಂತಾಬಾಯಿ ಇವಳಿಗೆ
ಹಣೆಗೆ ರಕ್ತಗಾಯ, ಎಡಕಣ್ಣಿನ ಹತ್ತಿರ ರಕ್ತಗಾಯ, ಬಲಗೈ ಮಣಿಕಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ನೋಡಿದವರು 108
ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿರುತ್ತಾರೆ. ಕಾರಣ ನನ್ನ ತಂದೆ ತಾಯಿಗೆ
ಅಪಘಾತ ಪಡಿಸಿದ ಮಹ್ಮದ ಮೋಹಿನ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ
No comments:
Post a Comment