ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಅಕ್ಮಲ್ ತಂದೆ ಮಂಜೂರ ಅಹೇಮದ ಶಿವಪುರಗಲ್ಲಿ ಹುಮನಾಬಾದ ಜಿ|| ಬೀದರ ರವರು ನಾನು ಮತ್ತು ನನ್ನ ಗೆಳೆಯರಾದ ಮಹ್ಮದ ಇಸ್ಮಾಯಿಲ ಹಾಗೂ ಸೈಯದ ಖಾನ ಮೂರು ಜನರು ಕೂಡಿಕೊಂಡು ಮದ್ಯಾಹ್ನ 2:15 ಗಂಟೆಗೆ ತಂಪು ಪಾನಿಯ ಕುಡಿಯಲು ಮಹಮ್ಮದ ಇಸ್ಮಾಯಿಲ್ ಇವರ ಮೊಟಾರ ಸೈಕಲ್ ನಂ.ಕೆಎ=32 ಎಇ-9979 ನೇದ್ದರ ಮೇಲೆ ರಿಂಗ ರೋಡನ ಮೆಜೆಸ್ಟಿಕ್ ಫಕ್ಸನ್ ಹಾಲ ಹತ್ತಿರದ ಹೋಟಲಗೆ ಹೋರಟಾಗ ಮಹಮ್ಮದ ಇಸ್ಮಾಯಿಲ್ ಇತನು ಮೋಟಾರ ಸೈಕಲ್ ನಡೆಸುತ್ತಿದ್ದ, ನಾನು ಅವನ ಹಿಂದೆ ಕುಳಿತಿದ್ದೆ ನನ್ನ ಹಿಂದೆ ಸೈಯದ ಖಾನ ಕುಳಿತಿದ್ದನು. ಮಹಮ್ಮದ ರಫೀಕ್ ಚೌಕ ಹತ್ತಿರ ಹೋಗುತ್ತಿರುವಾಗ ಹಾಗರಗಾ ಕ್ರಾಸ ಕಡೆಯಿಂದ ಒಂದು ಟಾಟಾ ಎ.ಸಿ.ಇ ಕೆಎ 32 ಎ-7349 ನೇದ್ದರ ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತು ಹೊರಟ ಮೋಟಾರ ಸೈಕಲ್‌ಕ್ಕೆ ಡಿಕ್ಕಿ ಹೊಡೆದಿದ್ದರಿಂದ ನಾವು ಕೆಳಗೆ ಬಿದ್ದೆವು, ನನಗೆ ಹಾಗೂ ಸೈಯದ ಇಸ್ಮಾಯಿಲ್ ಇತನಿಗೆ ಸಾದಾ ಹಾಗೂ ಭಾರಿ ಗಾಯವಾಗಿರುತ್ತದೆ. ಇನ್ನೊಬ್ಬ ಗೆಳೆಯ ಸೈಯದ ಖಾನನಿಗೆ ತಲೆಗೆ ಬಾರಿ ಪೆಟ್ಟಾಗಿತ್ತು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:178/2012 ಕಲಂ , 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Tuesday, May 29, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment