ಮನುಷ್ಯ ಕಾಣೆಯಾದ ಪ್ರಕರಣ:
ಆಳಂದ ಪೊಲೀಸ್ ಠಾಣೆ:
ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ
ನಾಗೇಂದ್ರ ಸಿಂಗೆ ಸಾ: ಬಂಗರಗಾ ರವರು
ನಾನು 4 ವರ್ಷದ ಹಿಂದೆ
ಬಂಗರಗಾ ಗ್ರಾಮದ ನಾಗೇಶನೊಂದಿಗೆ ಮದುವೆಯಾಗಿದ್ದೆನೆ.ನಮ್ಮ ಮನೆಯಲ್ಲಿ ನನಗೆ 2 ಜನ ಗಂಡು ಮಕ್ಕಳು ಇದ್ದು, ನನ್ನ ಅತ್ತೆ , ನನ್ನ ಗಂಡ ಜನರು ಇದ್ದು. ನನ್ನ ಗಂಡ ರುದ್ರವಾಡಿ ಗ್ರಾಮ
ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೂಲಿ ಕೆಲಸ ಮಾಡುತ್ತಾನೆ. ಪ್ರತಿ ದಿವಸ ನಮ್ಮ ಗ್ರಾಮದಲ್ಲಿ ಒಟ್ಟು 6 ಮೋಟಾರಗಳಿಗೆ ನೀರು ಬಿಡಲು ದಿನಾಲು ನನ್ನ
ಗಂಡ ಸೈಕಲ ತೆಗೆದುಕೊಂಡು ಹೋಗಿ ನೀರು ಬಿಟ್ಟು
ರಾತ್ರಿ 8-00 ಗಂಟೆಗೆ ಮನೆಗೆ ಬರುತ್ತಿದ್ದನು. ನನ್ನ
ಗಂಡ ಬರದೆ ಇದ್ದುದರಿಂದ ನಮ್ಮ ಅತ್ತೆ ಬೀಮಬಾಯಿ ಮೈದುನ ರಾಜೇಂದ್ರ ತಂದೆ ವಿಠಲ ಕಲಕೇರೆ ಕೂಡಿಕೊಂಡು
ಮೊಬಾಯಿಲ್ ಗೆ ಕಾಲ್ ಮಾಡಿದಾಗ ನಾಟ್ ರಿಚೇಬಲ್ ಅಂತಾ
ಬಂತು ನಾವೇಲ್ಲರೂ ಹುಡಕಾಡಿದರೂ ಎಲ್ಲಿಯೂ ಸಿಕ್ಕಿರುವದಿಲ್ಲ. ನನ್ನ ಗಂಡ ಕಾಣೆಯಾದ ಬಗ್ಗೆ ನಮ್ಮೂರು
ಸುಭಾಷ ಮತ್ತು ದರ್ಮರಾಯ ಇವರ ಮೇಲೆ ಸಂಶಯವಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ ಪಟ್ಟೆ: ಎತ್ತರ 5 ಅಡಿ 6 ಇಂಚು ಉದ್ದ, ಸುಮಾರು
35 ವರ್ಷ ವಯಸ್ಸು, ಮೈಬಣ್ಣ ಗೋಧಿ ವರ್ಣ. ಸಣ್ಣ ಮೀಸೆ, ಕರೀಯ ಪ್ಯಾಂಟು, ಬಿಳಿ ಬಣ್ಣದ ಪುಲ್ಲ ಶರ್ಟ, ಕಾಲಲ್ಲಿ ಕಂಪನೀಯ ಕೆಂಪು ಬಣ್ಣದ ಚಪ್ಪಲಿ, ಹಣೆಯ ಮೇಲೆ ಬಲಗಡೆ ಒಂದು ಹಳೆಯ ಗಾಯ, ಬಲಗಡೆ ಕಾಲು ಕುಂಟುತ್ತಾನೆ. ಬಲಗೈಯಲ್ಲಿ
ತಾಮ್ರದ ಖಡೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment