ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಅಬ್ಬಾಸ ಅಲಿ ತಂದೆ ಅಮಿನಸಾಬ
ಸಾ|| ಹೀರಾ ನಗರ ಹೀರಾಪೂರ ಗುಲಬರ್ಗಾ ರವರು ನಾನು ದಿನಾಂಕ: 29/04/2012 ರಂದು 1330 ಗಂಟೆಗೆ ಶರಣಬಸವೇಶ್ವರ
ಕೆರೆ ಗಾರ್ಡನ ಎದುರುಗಡೆ ನನ್ನ ದ್ವಿಚಕ್ರ ವಾಹನ ಹೀರೊಹೊಂಡಾ ಸ್ಪೆಂಡರ್ ಪ್ಲಸ ನಂ ಕೆಎ 32 ಕ್ಯೂ
3377 ಅ||ಕಿ|| 25,000/- ನೇದ್ದನ್ನು ನಿಲ್ಲಿಸಿದ್ದು, ಮರಳಿ ಬಂದು ನೋಡಿದಾಗ ನಿಲ್ಲಿಸಿರುವ ಸ್ಥಳದಲ್ಲಿ ವಾಹನವು ಇರುವದಿಲ್ಲ. ಯಾರೋ
ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ
67/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕ್ಷುಲಕ್ಕ
ಕಾರಣಕ್ಕಾಗಿ ಕೊಲೆ:
ಚಿತ್ತಾಪೂರ
ಪೊಲೀಸ್ ಠಾಣೆ:ಶ್ರೀ ಸಾಬಣ್ಣ ತಂದೆ ಬೀರಪ್ಪ ಮುಗಟಿ ಸಾ|ಮರಗೋಳ ಗ್ರಾಮ ತಾ|| ಚಿತ್ತಾಫೂರ ರವರು ನಾನು ಮನೆಯ ಮುಂದೆ ಕಟ್ಟೆಯ
ಮೇಲೆ ಕುಳಿತುಕೊಂಡು ತಂಬಾಕು ಹಾಕಿಕೊಂಡು ರಸ್ತೆಯ ಬಾಜು ಉಗುಳಿದಾಗ ಬಾಜು ಮನೆಯ ಬುಜ್ಜಮ್ಮ ಗಂಡ
ದಸ್ತಯ್ಯಾ ಈಳಗೇರ ಇವಳು ಏ ಈ ಕಡೆ ಯಾಕೆ ಉಗುಳುತ್ತೀ ಅಂತ ಕೇಳಿದಾಗ ನಾನು ನನ್ನ ಜಾಗದಲ್ಲಿ
ಉಗುಳಿದ್ದೇನೆ ಅಂತ ಅಂದಾಗ ಸದರಿಯವಳು ಅವಾಚ್ಯವಾಗಿ ಬೈಯುತ್ತಿದ್ದಾಗ ಮರೆಪ್ಪ ಇತನು ಮನೆಯಿಂದ
ಹೊರಗೆ ಬಂದು ನಮ್ಮ ಅಪ್ಪ ನಮ್ಮ ಜಾಗದಲ್ಲಿ ಉಗುಳಿದ್ದಾನೆ ಅವನಿಗೆ ಯಾಕ್ಎ ಬೈಯುತ್ತಿ ಅಂತಾ ಬುಜ್ಜಮ್ಮನನ್ನು
ಕೇಳಿದಾಗ ಅಕೆ ಗಂಡ ದಸ್ತಯ್ಯಾ ಗಂಡ ಶಂಕ್ರಯ್ಯಾ ಈಳಗೇರ ಇವನು ನನ್ನ ಮಗನಿಗೆ ತೆಕ್ಕೆಗೆ ಬಿದ್ದು
ಅಲ್ಲಿಯೇ ಇದ್ದ ಒಂದು ಕಟ್ಟಿಗೆ ತೆಗೆದುಕೊಂಡು ನನ್ನ ಮಗನ ಹೆಡಕಿಗೆ ಜೋರಾಗಿ ಹೊಡೆದನು ಹಾಗೆಯೇ
ನನ್ನ ಮಗ ನೆಲಕ್ಕೆ ಬಿದ್ದು ಬಿಟ್ಟನು. ಅವನನ್ನು ಉಪಚಾರ ಕುರಿತು ಚಿತ್ತಾಫೂರ ಸರಕಾರಿ ದವಾಖಾನೆಗೆ
ಟಂಟಂ ಗಾಡಿಯಲ್ಲಿ ಹಾಕಿಕೊಂಡು ಚಿತ್ತಾಫೂರ ಸರಕಾರಿ ಆಸ್ಪತ್ರೆಗೆ ಬಂದೆವು, ಆಸ್ಪತ್ರೆಯ ವೈದ್ಯಾಧಿಕಾರಿಗಳು
ಮೃತಪಟ್ಟಿರುತ್ತಾನೆ. ಅಂತ ತಿಳಿಸಿದರು. ನನ್ನ ಮಗ ಮರೆಪ್ಪ ಈತನಿಗೆ ದಸ್ತಯ್ಯಾ ಈಳಗೇರ ಮತ್ತು ಅವನ
ಹೆಂಡತಿ ಬುಜ್ಜಮ್ಮ ಇವರು ಅವಾಚ್ಯವಾಗಿ ಬೈದು ನನ್ನ ಮಗನಿಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು
ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 302,504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment