ದರೋಡೆ
ಪ್ರಕರಣ:
ಚೌಕ
ಪೊಲೀಸ್ ಠಾಣೆ:ಶ್ರೀಮತಿ ಹರ್ನಾಬಾಯಿ ಗಂ ದಿಃ ವಿಠಲ ಸರಾಫ ಸಾಃ ಮನೆ ನಂ
8-725 ಆಸೀಫ ಗಂಜ ಪೋರ್ಟರೋಡ ಗುಲಬರ್ಗಾರವರು ನಾನು ದಿನಾಂಕ 22.05.2012 ರಂದು 6-30 ಮುಂಜಾನೆ ನಮ್ಮ
ಮನೆಯ ಮುಂದಿನ ಕಸ ಗುಡಿಸುತ್ತಿದ್ದಾಗ ಇಬ್ಬರು ಮೋಟಾರ ಸೈಕಲ ಮೇಲೆ ತಮ್ಮ ಮೊಟಾರ ಸೈಕಲ ನಿಲ್ಲಿಸಿ ನನಗೆ,
ಇಲ್ಲಿ ಗುಪ್ತಾ ಟೀಚರ ಮನೆ ಎಲ್ಲಿ ಬರುತ್ತದೆ ಅಂತ ಕೇಳಿದರು. ನಾನು ಗೊತ್ತಿಲ್ಲ ಅಂತ ಹೇಳಿ ಮತ್ತೆ
ನಾನು ಕಸ ಗುಡಿಸುತ್ತಿರುವಾಗ ಮೋಟಾರ ಸೈಕಲ ಹಿಂದುಗಡೆ ಕುಳಿತಿರುವನು ಕೆಳಗೆ ಇಳಿದು ನನ್ನ ಕೊರಳಿಗೆ
ಕೈ ಹಾಕಿ ಕೊರಳ್ಳಲ್ಲಿರುವ 1 ½ ತೊಲೆ ಬಂಗಾದ ಚೈನ ಅಃಕಿಃ 30,000/- ರೂ. ಬೆಲೆಬಾಳುವ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ 84/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಕೊಲೆ
ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಗ್ಯಾನಮ್ಮ ಗಂಡ ಗುಂಡಪ್ಪ ಹೊನ್ನೂರ ಸಾ: ಸರಡಗಿ ಹಾ||ವ|| ಎಸ್.ಜಿ ಕುಲಕರ್ಣಿ
ಮನೆಯಲ್ಲಿ ಬಾಡಿಗೆ ನಿಸರ್ಗಾ ಹೊಟೆಲ ಎದರುಗಡೆ ಹಳೆ ಜೇವರ್ಗಿ ರಸ್ತೆ ಗಣೇಶ ನಗರ ಗುಲಬರ್ಗಾ
ರವರು ನನ್ನ ಗಂಡನಾದ ಗುಂಡಪ್ಪಾ ಇತನು ಬಾಗಲಕೋಟ ಯು.ಕೆ.ಪಿ ಕಛೇರಿಯಲ್ಲಿ ಅಟೆಂಡರ ಕೆಲಸ
ನಿರ್ವಹಿಸುತ್ತಿದ್ದು ಆಗಾಗ ಗುಲಬರ್ಗಾಕ್ಕೆ ಬಂದು ಹೋಗುತ್ತಿದ್ದನು. ನನ್ನ ಗಂಡನು ಚಂದಮ್ಮ ತಂದೆ
ಯಮುನಪ್ಪ ಚಪ್ಪಟೆರ್ ಸಾ: ಡೊರನಳ್ಳಿ ಇವಳೊಂದಿಗೆ ಸುಮಾರು 20 ವರ್ಷಗಳಿಂದ ಅನೈತಿಕ ಸಂಬಂದ
ಇಟ್ಟುಕೊಂಡಿದ್ದು ಚಂದಮ್ಮ ಇವಳು ಸುಮಾರು 5 ತಿಂಗಳ ಹಿಂದೆ ಮೃತಪಟ್ಟಿರುತ್ತಾಳೆ. ಅವಳಿಗೆ ದೇವಕಿ
ಅಂತಾ ಮಗಳಿದ್ದು ಅವಳು ನಾಲ್ಕು ತಿಂಗಳಿಂದ ನನ್ನ ಗಂಡನ ಹೆಸರಿಗಿದ್ದ 6 ಎಕರೆ 16 ಗುಂಟೆ
ಜಮೀನುದಲ್ಲಿ ನನಗೆ ನನ್ನ ತಾಯಿ ಚಂದಮ್ಮನ ಪಾಲು ಇರುತ್ತದೆ ನನಗೂ ಬೇಕು ಅಂತಾ ಪರತಾಬಾದ ನಾಡ
ತಹಸೀಲ್ದಾರ ಕಛೇರಿಯಲ್ಲಿ ದಾವೆ ಹೂಡಿರುತ್ತಾಳೆ. ನನ್ನ ಮಗನಾದ ಮಲ್ಲಿಕಾರ್ಜುನ ಇತನಿಗೆ ಸುಮಾರು
ದಿವಸಗಳಿಂದ ಮೈಯಲ್ಲಿ ಆರಾಮವಿಲ್ಲದರಿಂದ ದಿನಾಂಕ 19/05/2012 ರಂದು ನನ್ನ ಮಗನಿಗೆ ಕರೆದುಕೊಂಡು
ನನ್ನ ತವರು ಮನೆಯಾದ ಬಿರಾಳ ತಾ: ಜೇವರ್ಗಿಗೆ ಹೋಗಿದ್ದೆನು. ನನ್ನ ಗಂಡ ನನಗೆ ಪೋನ ಮಾಡಿ
ತಿಳಿಸಿದ್ದೆನೆಂದರೆ ದಿನಾಂಕ 20/05/2012 ರಂದು ಪರತಾಬಾದ ನಾಡ ತಹಸೀಲ್ದಾರ ಕಛೇರಿಯಲ್ಲಿ ಪೇಶಿ
ಇದ್ದ ಪ್ರಯುಕ್ತ ಬಾಗಲಕೋಟದಿಂದ ಗುಲಬರ್ಗಾಕ್ಕೆ ಬಂದು ಮಗಳಾದ ನಾಗಮ್ಮ ಇವಳ ಮನೆಯಲ್ಲಿ ರಾತ್ರಿ
ಉಳಿದು ದಿನಾಂಕ 21/05/2012 ರಂದು ಅಳಿಯನಾದ ಶಾಮರಾವ ಇತನೊಂದಿಗೆ ಪರತಾಬಾದಕ್ಕೆ ಹೋಗಿ ಪೇಶಿ ಮುಗಿಸಿಕೊಂಡು ನಮ್ಮ
ಮನೆಗೆ ಹೋರಟಿದ್ದೆನೆ ಮನೆಯಲ್ಲಿದ್ದು, ಬೆಳಿಗ್ಗೆ
ಬಾಗಲಕೋಟಕ್ಕೆ ಹೋಗುತ್ತೇನೆ ಅಂತಾ ತಿಳಿಸಿದ್ದನು. ದಿನಾಂಕ 22/05/12 ರಂದು ಬೆಳಿಗ್ಗೆ 06-00
ಗಂಟೆ ಸುಮಾರಿಗೆ ನನ್ನ ಅಳಿಯನಾದ ಶಾಮರಾಯ ನಾಟಿಕಾರ ಇತನು ನನಗೆ ಪೋನ ಮಾಡಿ ಗುಂಡಪ್ಪ ಮಾವನ ಮೈ
ಸುಟ್ಟಿದ್ದರಿಂದ ಮನೆಯ ಮುಂದಿನ ಪರ್ಸಿ ಕಲ್ಲುಗಳ ಮೇಲೆ ಮೃತಪಟ್ಟಿರುತ್ತಾನೆ ಅಂತಾ
ತಿಳಿಸಿದ್ದರಿಂದ ಬಂದು ನೋಡಲು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಮೈ ಮೇಲೆ ಸೀಮೆ ಎಣ್ಣೆ ಹಾಕಿ
ಬೆಂಕಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 75/12 ಕಲಂ 302, 201 ಐಪಿಸಿ ಪ್ರಕಾರ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾಜಿ
ಕಾರ್ಯದರ್ಶಿ, ಸೇವಾ ಸಂಘಗಳಿಗೆ ಮೋಸ ಮಾಡಿ ಹಣ ದುರಪಯೋಗ ಪಡಿಸಿಕೊಂಡ ಬಗ್ಗೆ
ಕಮಲಾಪೂರ
ಪೊಲೀಸ್ ಠಾಣೆ:ಶ್ರೀ ಸುಭಾಶ್ಚಂದ್ರ
ತಂದೆ ವೀರಪ್ಪಾ ಚೆಂಗಟಾ ಮಾಜಿ ಕಾರ್ಯದರ್ಶಿ ಸಾಃ ಮುನಿಮ ಸಂಘ ಗುಲಬರ್ಗಾ ಇವರು ಸೊಂತ ಗ್ರಾಮದ ವ್ಯವಸಾಯ
ಸಹಕಾರ ಸೇವಾ ಸಂಘ ನಿಯಮಿತದಲ್ಲಿ(ವಿ.ಎಸ್.ಎಸ್.ಎಸ್.ಎನ್) ಸುಮಾರು13ವರ್ಷಗಳಿಂದ(ದಿಃ01/10/1993 ರಿಂಧ 07/03/2006 ರವರೆಗೆ) ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಈ
ಅವಧಿಯಲ್ಲಿ ಸಂಘಗಳಿಗೆ ಮತ್ತು ರೈತರಿಗೆ ಸಾಲಕೊಟ್ಟು ಸಾಲ ವಸೂಲಿ ಮಾಡಿದ ಬಗ್ಗೆ ರಸಿದಿ ಕೆಲವರಿಗೆ
ಕೊಡದೇ ಅಮಾಯಕ ಜನರ ಹೆಸರ ಮೇಲೆ ಮತ್ತು ಸಂಘಗಳ ಹೆಸರುಗಳ ಮೇಲೆ ತಾನೆ ಸ್ವತಃ ಸಾಲ ಪಡೆದು ಬೇರೆಯವರ
ಹೆಸರು ಬರೆದು ಜನರಿಗೆ ಸಾಲದ ಹಣ ಕೊಡಿಸುತ್ತೇನೆ ಅಂತಾ ಹೇಳಿ ಸಹಿ ಪಡೆದು ಸಂಘಗಳಿಂದ ಸುಮಾರು
ಒಟ್ಟು 608242-00 ರೂ. (ಆರು ಲಕ್ಷ ಎಂಟು ಸಾವಿರದ ಎರಡುನೂರಾ ನಲವತ್ತೇರಡು ರೂಪಾಯಿ) ಸಾಲ ಪಡೆದು
ತನ್ನ ಸ್ವಂತ ಬಳಕೆಗಾಗಿ ಹಣ ಬಳಸಿಕೊಂಡು ಬ್ಯಾಂಕಿಗೆ, ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿರುತ್ತಾನೆ ಅಂತಾ ಶ್ರೀ ಕ್ರೀಷ್ಣಮೂರ್ತಿ ತಂದೆ ಬಸಪ್ಪಾ ಉಃ
ಗುಲಬರ್ಗಾ ಸಹಕಾರ ಸಂಘದ ನಿರೀಕ್ಷಕರು ಸಾಃ ಸಹಾಯಕ ನಿಬಂಧಕ ಗುಲಬರ್ಗಾ ಉಪ ವಿಭಾಗ ಗುಲಬರ್ಗಾರವರು ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2012 ಕಲಂ 406, 409, 420, 468, 471
ಐಪಿಸಿ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment