Police Bhavan Kalaburagi

Police Bhavan Kalaburagi

Saturday, May 19, 2012

GULBARGA DIST REPORTED CRIMES


ಅಶ್ಲೀಲವಾಗಿ ಮೇಲ್ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಮೊಬಾಯಿಲ್ ನಂಬರರವರ ಮೇಲೆ ಕಾನೂನು ಕ್ರಮ ಜರೂಗಿಸುವ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ ರಾಜಶ್ರೀ ಗಂಡ ಶರಣಬಸಪ್ಪ ಸಜ್ಜನ ಉ: ಓಂ ಎಂಟರಪ್ರೈಜಸ್ ಮಾಲಿಕಳು ಮತ್ತು ಟಿ.ಟಿ.ಕೆ ಪ್ರಸ್ಟೀಜ ಕಂಪನಿಯ ಸರ್ವಿಸ್ ಸೆಂಟರ ಮಾಲಿಕರು ಸಾ: ಕೆ.ಎಚ್.ಬಿ ಕಾಲೋನಿ ಕೊರ್ಟ ಹಿಂದುಗಡೆ ಗುಲಬರ್ಗಾರವರು ನನ್ನ ಮೋಬಾಯಿಲ್  ನಂಬರಿಗೆ ಅನಾಮಿಕ ಮೇಲ್  ID Mallappapatil2@gmail.com ಎಂಬುವವನಿಂದ ನನ್ನ ಮೊಬಾಯಿಲ್  ನಂಬರಗೆ ದಿನಾಂಕ:22/11/2011 ರಂದು ಸಂಜೆ 17:24 ಗಂಟೆಗೆ TD-677800  ಮೊ. ನಂ 9241444233 ದಿಂದ ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ಈ ಮೇಲ್ ಸಂದೇಶಗಳನ್ನು ಕಳುಹಿಸಿರುತ್ತಾನೆ. ದಿನಾಂಕ:17/05/2012 ರಂದು 14:30 ಗಂಟೆಗೆ  TD-677800  ಮೊ. ನಂ 7760672355 ಅಶ್ಲೀಲವಾಗಿ ಗಂಡ ಹೆಂಡತಿಗೆ ಬೆರ್ಪಡೆಯಾಗುವಂತ ಮೇಲ್ ಸಂದೇಶ ದಿನಾಂಕ:17/05/2012 ರಂದು 14:33 ಗಂಟೆಗೆ ಮತ್ತು ದಿನಾಂಕ:17/05/2012 ರಂದು 14:51 ಗಂಟೆಗೆ ಅತೀ ಅಶ್ಲೀಲವಾಗಿ ಈ ಮೇಲ್ ಸಂದೇಶ ಕಳುಹಿಸಿ ನನ್ನ ಮಾನಸಿಕ ನೆಮ್ಮದಿಗೆ  ಕಾರಣರಾಗಿರುವ ಈ ಮೇಲ್ ಐ.ಡಿ ID Mallappapatil2@gmail.com ಹಾಗೂ ನನಗೆ ಕಳುಹಿಸಿದ ಮೊಬಾಯಿಲ್ ನಂಬರಗಳಾದ 9241444233,  7760672355 ನೇದ್ದವರ ಮೇಲೆ  ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:70/2012 ಕಲಂ 323, 504, 507, 509 ಐಪಿಸಿ ಮತ್ತು 66 (ಎ), (ಬಿ) ಐ.ಟಿ ಅಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಬಿ.ಎಂ ಪಾಟಿಲ ಅಧೀಕ್ಷಕರು ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ  ಗುಲಬರ್ಗಾರವರು ನಮ್ಮ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ಗುಲಬರ್ಗಾ ಕಟ್ಟಡದಲ್ಲಿ ಬೋರಿಂಗ ಮತ್ತು ಲೈಟಿನ ಸಲುವಾಗಿ ಸಾದಾ ವೈರ ಮತ್ತು ಬೋರಿಂಗಕ್ಕೆ ಅಳವಡಿಸಿದ ಕೇಬಲ ವೈರನ್ನು ಯಾರೋ ಕಳ್ಳರು ವೈರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 71/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೇವಾನಂದ ತಂದೆ ಬಾಬುರಾವ ಮುಗಳನಾಗಾಂವ   ಸಾ:ಮರತೂರ ರವರು ನನ್ನ ಹೆಂಡತಿ ಬಾಗಮ್ಮಾ ಇವಳು ನೀರಿಗೆ ಹೊದಾಗ ಕೈ ಹಿಡಿದು ಜಗ್ಗಾಡಿದ್ದು ಯಾಕೆ ಅಂತಾ ಕೇಳಲಿಕ್ಕೆ ಹೋದಾಗ ದೇವಾನಂದ ತಂದೆ ಚಂದಪ್ಪಾ ಮತ್ತು ಶಿವಾನಂದ ತಂದೆ ಚಂದಪ್ಪಾ, ಕುಶಾಲ ತಂದೆ ಚಂದಪ್ಪಾ ಇವನು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ, ಮತ್ತು ಅವರ ತಾಯಿ ಮಹಾದೇವಿ ಇವರು ಪ್ರಚೋದನೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 63/2012 ಕಲಂ: 323, 324, 504, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.              
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸತೀಶ ತಂದೆ ಶಾಮರಾವ ಗೌರಕರ ಸಾ:ಮುಡಬಿ ತಾ:ಬಸವಕಲ್ಯಾಣ ಜಿ:ಬೀದರ ರವರು ನಾನು ಮತ್ತು ಚಂದ್ರಕಾಂತ ಕಟ್ಟಿಮನಿ ಕೂಡಿಕೊಂಡು ದಿನಾಂಕ:15/05/2012 ರಂದು ನಸುಕಿನ ಜಾವ 5.00 ಗಂಟೆಗೆ ಗುಲಬರ್ಗಾದಿಂದ ಟಾಟಾ ಸುಮೋ ಜೀಪ ನಂ.ಎಮ್‌ಹೆಚ್‌-12 ಬಿಜಿ-9880 ನೇದ್ದರಲ್ಲಿ ಕುಳಿತು ತೊನಸಳ್ಳಿ (ಎಸ್‌) ಗ್ರಾಮ ಕಡೆಯಿಂದ ಶಹಾಬಾದಕ್ಕೆ ಬರುವಾಗ ತೊನಸಳ್ಳಿ ದಾಟಿ  ಚಾಲಕನು ತನ್ನ ಟಾಟಾ ಸುಮೋ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಟಾಟಾ ಸುಮೋ ಪಲ್ಟಿಯಾಗಿ ಬಿತ್ತು ಚಾಲಕನಿಗೆ ರಕ್ತಗಾಯವಾಗಿರುತ್ತೆವೆ ಮತ್ತು  ಎದುರಿನ ಗ್ಲಾಸ ಒಡೆದು ಬಾಡಿ ಬೆಂಡಾಗಿರುತ್ತದೆ ಆಗಿದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 64/2012 ಕಲಂ: 279, 337  ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಮಹಾದೇವಿ ಗಂಡ ಚಂದಪ್ಪಾ ಚನ್ನಮಗೋಳ ಸಾ:ಮರತೂರ.  ರವರು  ನಾನು ಮನೆಯಲ್ಲಿದ್ದಾಗ ಶಾಮರಾವ ಇವನು ನನಗೆ ಹೊರಗೆ ಕರೆದು ನನ್ನ ತಾಯಿಯ ಸಂಗಡ  ಬೋರವೇಲ ಹತ್ತಿರ ಯಾಕೆ ಜಗಳ ಮಾಡಿದೆ ಅಂತಾ ಕೇಳಿ ಹೊಡೆ ಬಡೆ ಮಾಡಿದನು ಅದರಂತೆ ದೇವಾನಂದ, ಶಾಮರಾವ, ಸಂಜು ಇವರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:65/2012 ಕಲಂ: 324,323,504,506 ಸಂ 34  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶಿವಾನಂದ ತಂದೆ ಕಾಶಿರಾಯ ಅಷ್ಟಗಾ ಸಾ|| ಅಸ್ಟಗಾ ರವರು ನಮ್ಮ ಮನೆ ಎದುರು ನಾನು ಮತ್ತು ಶರಣಮ್ಮ ಕುಳಿತಾಗ ತಮ್ಮ  ಜಾತಿಯವರಾದ ಶಾಂತಪ್ಪ ಆಲಗೂಡ ಮತ್ತು ಆತನ ಮಗ ಅರ್ಜುನ  ಇಬ್ಬರು ನನ್ನ ಹತ್ತಿರ ಬಂದು  ಮನೆ ಕಟ್ಟುವ ಗೌಂಡಿ ಕೆಲಸಕ್ಕೆ ಬಾ ಎಂದು ಕರೆದರು. ಅದಕ್ಕೆ ನಾನು ಇಂದು ಬೇರೆಯವರ  ಹತ್ತಿರ  ಬೆಳಿಗ್ಗೆ  ಗೌಂಡಿ ಕೆಲಸಕ್ಕೆ ಹೋಗಿದ್ದೆನೆ ನಾಳೆ ಬರುತ್ತೇನೆ ಅಂತಾ ಹೆಳಲು ಶಾಂತಪ್ಪಾ ಮತ್ತು ಅರ್ಜುನ ಇವರು ಕೂಡಿಕೊಂಡು ಕೊಡಬೇಕಾದ 3000/- ರೂ ಕೊಡು ಇಲ್ಲದಿದ್ದರೆ ಹಣ ವಾಪಸ್ಸು ಕೊಡು ಅಂತಾ ಜಗಳ ಮಾಡಿರುತ್ತಾರೆ ನಾನು ಎರಡು ದಿವಸ ಬಿಟ್ಟು ಕೊಡುತ್ತೆನೆ ಅಂತಾ ಅಂದಿದಕ್ಕೆ ಅವಾಚ್ಯವಾಗಿ ಬೈದು ರಾಡಿನಿಂದ ತಲೆ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:158/2012 ಕಲಂ 504, 323, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿರುತ್ತಾರೆ.

No comments: