:: ದಿನಾಂಕ:22-05-2012 ರಂದು ಬೆಳಿಗ್ಗೆ 11-00 ಗಂಟೆಗೆ ಪರ್ಮಿಟ್
ಹೊಂದಿದ್ದ ಅಟೋ ರಿಕ್ಷಾಗಳಿಗೆ ಗುರುತಿನ ಚೀಟಿ (ಸ್ಟೀಕರ) ನೀಡುತ್ತಿರುವ ಬಗ್ಗೆ ಪ್ರಕಟಣೆ ::
ಗುಲಬರ್ಗಾ ನಗರಲ್ಲಿ ಈಗಾಗಲೇ ಅನಧಿಕೃತವಾಗಿ
ಪರ್ಮಿಟ್ ಇಲ್ಲದೇ ಚಲಿಸುತ್ತಿರುವ ಅಟೋರಿಕ್ಷಾಗಳಿಗೆ ಕಡಿವಾಣ ಹಾಕಲು ಅಟೋ ರಿಕ್ಷಾ ಮಾಲಿಕರುಗಳಿಗೆ
ತಮ್ಮ ಅಟೋಗಳಿಗೆ ಸಂಬಂಧಿಸಿದ ಮೂಲ ಪರ್ಮಿಟ್ ದಾಖಲಾತಿಯು ನಗರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಸಲ್ಲಿಸಿ ಗುರುತಿನ ಚೀಟಿ (ಸ್ಟೀಕರ) ಯನ್ನು ಪಡೆಯುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು 4000 ಅಟೋ
ರಿಕ್ಷಾಗಳ ಮೂಲ ದಾಖಲಾತಿಗಳನ್ನು ಹಾಜರ ಪಡಿಸಿ ಗುರುತಿನ ಚೀಟಿ ( ಸ್ಟೀಕರ) ಪಡೆಯಲು ನಗರದ ಸಂಚಾರಿ
ಪೊಲೀಸ್ ಠಾಣೆಗಳಲ್ಲಿ ತಮ್ಮ ಹೆಸರು ಮತ್ತು ಅಟೋ ನಂಬರಗಳು ನಮೂದಿಸಿರುತ್ತಾರೆ.
ದಿನಾಂಕ: 22-05-2012 ರಂದು ಬೆಳಿಗ್ಗೆ 11-00
ಗಂಟೆಗೆ ಜಿಲ್ಲಾ ಪೊಲೀಸ್ ಪರೇಡ ಮೈದಾನ (ಪೊಲೀಸ್
ಹೆಡ್ ಕ್ವಾರ್ಟ್ಸ) ದಲ್ಲಿ ಸಂಚಾರಿ ಪೊಲೀಸ್ ಠಾಣೆಯಲ್ಲಿ
ನೊಂದಾಯಿಸಿದ ಕ್ರ ಸಂ: 001 ರಿಂದ 100 ರವರೆಗೆ ಹಾಗು ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಗಳಲ್ಲಿ
ನೊಂದಾಯಿಸಿದ ಕ್ರ ಸಂ: 1001 ರಿಂದ 1100 ರವರೆಗಿನ ಅಟೋ ರಿಕ್ಷಾಗಳಿಗೆ ಗುರುತಿನ ಚೀಟಿ
(ಸ್ಟೀಕರ್) ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಇನ್ನೂಳಿದ ಪರ್ಮಿಟ ಹೊಂದಿದ
ಅಟೋ ರಿಕ್ಷಾಗಳಿಗೆ ನಗರದ ಸಂಚಾರಿ ಸಂಚಾರಿ ಪೊಲೀಸ್
ಠಾಣೆಗಳಲ್ಲಿ ಗುರುತಿನ ಚೀಟಯನ್ನು ವಿತರಿಸಲಾಗುವದು ಅಂತಾ ಮಾನ್ಯ ಪೊಲಿಸ್ ಅಧೀಕ್ಷಕರು ಗುಲಬರ್ಗಾ
ಜಿಲ್ಲೆ ರವರು ತಿಳಿಸಿರುತ್ತಾರೆ.
No comments:
Post a Comment