Police Bhavan Kalaburagi

Police Bhavan Kalaburagi

Wednesday, May 23, 2012

GULBARGA DIST

ಗುಲಬರ್ಗಾ ನಗರದಲ್ಲಿ ತಹಶೀಲ್, ಮಹಾನಗರ  ಪಾಲಿಕೆ ಹಾಗೂ ಇನ್ನಿತರ ಕಛೇರಿಗಳ  ಅಧಿಕಾರಿಗಳ ಖೊಟ್ಟಿ ಶೀಲು ತಯಾರಿಸಿ ಸಾರ್ವಜನಿಕರ ಹೆಸರಿನಲ್ಲಿ ಸರಕಾರದಿಂದ ಬರುವ ವೃದ್ದಾಫ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಜನನ-ಮರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ರೇಶನ ಕಾರ್ಡ ಮತ್ತು ಇತ್ಯಾದಿ ಖೊಟ್ಟಿ ದಾಖಲೆಗಳ್ನು ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ದುರುಪಯೋಗ ಪಡಿಸಿಕೊಂಡ 6 ಜನ ಆರೋಪಿಗಳ ಬಂದನ: 

ಶ್ರೀ ಪ್ರವೀಣ ಮಧುಕರ ಪವಾರ ಎಸ.ಪಿ ಗುಲಬರ್ಗಾರವರು, ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಎಸ.ಪಿ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ ಭೂಷಣ ಜಿ ಬೊರಸೆ ಎ.ಎಸ.ಪಿ (ಎ) ಉಪವಿಭಾಗ, ಶ್ರೀ ಹೆಚ್.ತಿಮ್ಮಪ್ಪ ಡಿ,ಎಸ,ಪಿ ಗ್ರಾಮಾಂತರ ಉಪವಿಭಾಗ ರವರ  ನೇತೃತ್ವದಲ್ಲಿ ಶ್ರೀ ಶರಣಬಸವೇಶ್ವರ ಪೊಲೀಸ ಇನ್ಸಪೆಕ್ಟರ ಬ್ರಹ್ಮಪೂರ ಠಾಣೆ , ಹಾಗೂ ಸಿಬ್ಬಂದಿಯವರಾದ  ಮಾರುತಿ ಎ.ಎಸ.ಐ, ಬಸವರಾಜ, ಅಣ್ಣಪ್ಪ, ಗಂಜೇಂದ್ರ, ಶಿವಪ್ರಕಾಶ, ಮಹ್ಮದ ರಫೀಕ್, ರಾಮು ಪವಾರ, ರವರು ಗುಲಬರ್ಗಾ ನಗರದಲ್ಲಿ ಕೆಲವರು ತಹಶೀಲ್, ಮಹಾನಗರ  ಪಾಲಿಕೆ ಹಾಗೂ ಇನ್ನಿತರ ಕಛೇರಿ ಹಾಗು ಅಧಿಕಾರಿಗಳ ಖೊಟ್ಟಿ ಶೀಲು ತಯಾರಿಸಿಕೊಂಡು ಕೆಲವು ಇಲಾಖೆಯ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಸಾರ್ವಜನಿಕರ ಹೆಸರಿನಲ್ಲಿ ಸರಕಾರದಿಂದ ಬರುವ ವೃದ್ದಾಫ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಜನನ-ಮರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ರೇಶನ ಕಾರ್ಡ ಮತ್ತು ಇತ್ಯಾದಿ ಖೊಟ್ಟಿ ದಾಖಲೆಗಳ್ನು ಸೃಷ್ಠಿಸಿ ಅವು ನೈಜವೆಂಬಂತೆ ನಂಬುವಂತೆ ಮಾಡಿ ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ತಮ್ಮ ಸ್ವಾರ್ಥ ಹಾಗೂ ಸ್ವಂತ ಲಾಭಕ್ಕಾಗಿ ಮೋಸ ಮಾಡಿ ಕೋಟ್ಯಾಂತರ ರೂಪಾಯಿ ಸರಕಾರದ ಖಜಾನೆಯಿಂದ ಕೊಳ್ಳೆ ಹೊಡೆಯುವ ಜಾಲವನ್ನು ಭೇಧಿಸಿ ಈ ಜಾಲದಲ್ಲಿ ಭಾಗಿಯಾದ ಮಹ್ಮದ ಸಲಿಂ ತಂದೆ ಶುಕುರಮಿಯಾ ಮತ್ತು ಚಂದ್ರಕಾಂತ ತಂದೆ ವೀರೂಪಾಕ್ಷಪ್ಪ ಗೋಶೆಟ್ಟಿ ಪೊಸ್ಟಮ್ಯಾನ ಇವರನ್ನು ದಿನಾಂಕ:22-05-2012 ರಂದು ಬಂಧಿಸಿ ವೃಧ್ದಾಫ್ಯ ಮತ್ತು ಅಂಗವಿಕಲರ ಖೊಟ್ಟಿ ಮಾಶಾಸನದ ಎಂ.ಓ ಫಾರಂ, ಗುಲಬರ್ಗಾ ತಹಶೀಲ್ ಕಛೇರಿಯ ಶೀಲಗಳು, ಹಳೆಯ ಎಂ.ಓ ಸಂದಾಯವಾದ ರಶೀದಿಗಳು, 2-ಮೊಬೈಲಗಳು, ಒಂದು ಹಸಿರು ಮತ್ತು ನೀಲಿ ಬಾಲ ಪೆನ್, ಅವುಗಳನ್ನು  ಜಪ್ತಿಪಡಿಸಿಕೊಂಡು ಸದರಿಯವರನ್ನು ದಸ್ತಗಿರಿ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಸಲೀಂ ವಶದಿಂದ 41,89,435=00 ರೂಪಾಯಿ ಅಕ್ರಮವಾಗಿ ಗಳಿಸಿದ ನಗದು ಹಣ, 1346 ಓ.ಎ.ಪಿ ಆದೇಶ ಪ್ರತಿಗಳು, 1005 ಅಂಗವಿಕಲರ ಮಾಶಾಸನ ಪ್ರತಿಗಳು, 582 ವಿಧವಾ ವೇತನ ಆದೇಶ ಪ್ರತಿಗಳು, ಮಹಾನಗರ ಪಾಲಿಕೆ, ತಹಶೀಲ ಕಛೇರಿ, ಜಿಲ್ಲಾ ಖಜಾನೆ ಇಲಾಖೆ, ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆ, ಖಾಸಗಿ ವೈದ್ಯರ ಹೀಗೆ ಒಟ್ಟು 76 ಖೊಟ್ಟಿ ಶೀಲುಗಳು, ಸಾರ್ವಜನಿಕ ಮಹಿಳೆ ಮತ್ತು ಪುರುಷರ ಪಾಸಪೊರ್ಟ ಸೈಜಿನ 600 ಭಾವಚಿತ್ರಗಳು, 17-ಖೊಟ್ಟಿ ಮರಣ ಪ್ರಮಾಣಪತ್ರ, ಖೊಟ್ಟಿ ಜನನ ಪ್ರಮಾಣ ಪತ್ರಗಳು-13, ಜಾತಿ ಮತ್ತು ಆಧಾಯ ಪ್ರಮಾಣ ಪತ್ರಗಳು-09, ತಹಶೀಲ್ದಾರ ಗುಲಬರ್ಗಾರವರು ಖೊಟ್ಟಿ ಸಹಿ ಮಾಡಿದ ಖಾಲಿ ಆದೇಶ ಪ್ರತಿಗಳು, ಸರಕಾರದಿಂದ ವಿವಿಧ ಮಾಶಾಸನ ಪಡೆಯುವ ಫಲಾನುಭವಿಗಳ ನಂಬರ ಇರುವ ಮಾಹಿತಿ ಪತ್ರಿಕೆಗಳ 12 ರೆಜಿಸ್ಟರಗಳು ಮತ್ತು ಇದೆಲ್ಲವೆನ್ನು ತಯಾರಿಸಲು ಉಪಯೋಗಿಸಿದ ಕಂಪ್ಯೂಟರ, ಲ್ಯಾಪಟಾಪ, ಕಲರ ಪ್ರಿಂಟರ್, ಸ್ಕ್ಯಾನರ್, ಪೆನಡ್ರೈವ್, ಡಾಟಾ ಕಾರ್ಡಗಳು, ಸಿ.ಡಿ.ಗಳು, 7-ಮೊಬೈಲಗಳು, ಖೋಟಾ ನೋಟು ಪತ್ತೆ ಹಚ್ಚುವ ಮತ್ತು ಹಣವನ್ನು ಎಣಿಕೆ ಮಾಡುವ ಸಲಕರಣೆಗಳು,ಲಕ್ಷಾಂತರ ರೂಪಾಯಿ ಬೇಲೆ ಬಾಳುವ ವಸ್ತಗುಳನ್ನು ಸ್ವಾಧೀನಪಡಿಸಿಕೊಂಡಿರುವದಲ್ಲದೆ ಲಭ್ಯವಿರುವ ದಾಖಲೆಗಳ ಪ್ರಕಾರ ಹಾಗೂ ತನಿಖೆಯಿಂದ ದೃಢಪಡಿಸಿಕೊಂಡ ಮಾಹಿತಿಯ ಆಧಾರದ ಮೇಲೆ ಕೋಟ್ಯಾಂತರ ರೂಪಾಯಿಯಷ್ಟು ವೃದ್ಯಾಪ್ಯ, ವಿಧವಾ ವೇತನ ಮತ್ತು ಅಂಗವಿಕಲ ಮಾಶಾಸನ ಪಡೆದ ರಶೀಧಿಗಳನ್ನು ಪತ್ತೆ ಹಚ್ಚಲಾಗಿದೆ. ಶಿವಪುತ್ರ ತಂದೆ ನಾಗಪ್ಪ ಕೋಲಕೂರ ಸಾ:ಬಬಲಾದ (ಐ.ಕೆ), ಶ್ರೀನಿವಾಸ ತಂದೆ ಪ್ರಕಾಶ ಡೋಲಾರೆ ಸಾ: ಆರ್ಯ ನಗರ ನೇಹರು ಗಂಜ ಗುಲಬರ್ಗಾ,ಮಹ್ಮದ ಅಕ್ರಮ ತಂದೆ ಖಾಜಾ ಹುಸೇನ ಭಾಸಗಿ ಸಾ: ರೆಹಮಾನ ಕಾಲೋನಿ ಗುಲಬರ್ಗಾ, ಮಹ್ಮದ ರಫೀಕ್ ತಂದೆ ಗುಲಾಮ ರಸೂಲ್ ರೆಹಮಾನ ಕಾಲೋನಿ ಗುಲಬರ್ಗಾ ಇವರನ್ನು ಬಂಧಿಸಲಾಗಿದೆ.ದಾಳಿಯಲ್ಲಿ ಭಾಗವಹಿಸಿ ಅಂತರ ಜಿಲ್ಲಾ ವಂಚನೆ ಮಾಡುವವರ ಜಾಲವನ್ನು ಭೇಧಿಸಿದ ತಂಡಕ್ಕೆ ಪೊಲಿಸ್ ಅಧೀಕ್ಷಕರು ಗುಲಬರ್ಗಾ ರವರು 25,000/- ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

No comments: