ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 37/12 ಕಲಂ 279,337338 ಐಪಿಸಿ ಜೋತೆ 187 ಐ ಎಂ ವಿ ಎಕ್ಟ :-
ದಿನಾಂಕ 06-06-2012 ರಂದು 1400 ಗಂಟೆಗೆ ಸಂತಪೂರ ಸರಕಾರಿ ಆಸ್ಪತ್ರೆಯಿಂದ ಎಂ ಎಲ ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿ ಶ್ರೀ ಸುನೀಲಕುಮಾರ ತಂದೆ ಗೋವಿಂದರಾವ ಜೂಜಾನೆ ವಯ 30 ವರ್ಷ ಜಾ, ಮರಾಠಾ ಸಾ,ಆಲೂರ ಬಿ ರವರಿಗೆ ವಿಚಾರಿಸಲಾಗಿ ಅವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 06-06-2012 ರಂದು ಫಿಯರ್ಾದಿಯು ಒಂದು ಪ್ಯಾಸೆಂಜರ ಆಟೋದಲ್ಲಿ ವಡಗಾಂವದಿಂದ ಸಂತಪೂರಕ್ಕೆ ಬರುವಾಗ ಆಟೋಚಾಲಕನು ತನ್ನ ಆಟೋ ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಜೋಜನಾ ದಾಟಿ ಬ್ರೀಡ್ಜ್ ಹತ್ತಿರ ರೋಡಿನ ಮೇಲೆ ತನ್ನ ಆಟೋ ಪಲ್ಟಿ ಮಾಡಿದ್ದು ಆಟೋ ಚಾಲಕ ಓಡಿಹೊಗಿದ್ದು ಸದರಿ ಅಪಘಾತದಿಂದ ಬಲಗಡೆ ಹಣೆಗೆ ಎಡಗಾಲಮೋಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 45/12 ಕಲಂ 309 ಐಪಿಸಿ :-
ದಿನಾಂಕ : 06/06/2012 ರಂದು 1145 ಗಂಟೆಗೆ ಬಬ್ಲುಸಿಂಗ್ ತಂದೆ ಬಿಜಯಸಿಂಗ್ ವ:30 ವರ್ಷ ಸಾ:ಸಿಡಗಾಂವ ಸಂಭಜೀ ಚೌಕ್ ನಾಂದೇಡ (ಎಂ.ಎಸ್) ಫಿರ್ಯಾದಿ ಆರೋಪಿತನು ಸ್ಟಿಲ್ ನೆಮ್ ಪ್ಲೇಟ ವ್ಯಾಪಾರ ಮಾಡುತ್ತಿದ್ದು ತನ್ನ ವ್ಯಾಪಾರದಲ್ಲಿ ಸುಮಾರು 17000/-ರೂ. ನಷ್ಟ ಆಗಿದ್ದರಿಂದ ಮನಸ್ಸಿಗೆ ಬೆಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೀದದ ನಯಕಮಾನ ಒಳಗಡೆ ಇರುವ ಕನರ್ಾಟಕ ಲಾಡ್ಜ ಮುಂದುಗಡೆ ಫುಟಪಾತ ಮೇಲೆ ತನ್ನ ಪಗಡಿಯಲ್ಲಿ ಇದ್ದ ಸ್ಟೀಲ್ ಮೊಳೆಯಿಂದ ಕುತ್ತಿಗೆ ನಳಿಯಲ್ಲಿ ಹೊಡೆದುಕೊಂಡು ರಕ್ತಗಾಯ ಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಅಂತ ಫಿರ್ಯಾದಿ ಆರೋಪಿತನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ. ಗುನ್ನೆ ನಂ 46/2012 ಕಲಂ 63, 65 ಕಾಪಿ ರೈಟ್ ಆ್ಯಕ್ಟ್ 1957 ಜೊತೆ 420 ಐಪಿಸಿ :-
ದಿನಾಂಕ : 06/06/2012 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ ಜಗದೀಶ ತಂದೆ ರಾಮೇಶ್ವರ ಪಿ ರಾಥಿ ವ:35 ವರ್ಷ ಸಿನಿಯರ ಮ್ಯಾನೇಜರ್ ಅಕೌಂಟ್ಸ್ ಹ್ಯಾವೆಲ್ಸ್ ಇಂಡಿಯಾ ಲಿ. ಬ್ಯ್ರಾಂಚ್ ಹೈದ್ರಬಾದ ಸಾ:ಮನೆ ನಂ.16-11-17/ಬಿ/2 ಸಲಿಮ ನಗರ ಕಾಲೊನಿ ಮಲಕ್ ಪೇಟ ಹೈದ್ರಬಾದ(ಎಪಿ) ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ದಿನಾಂಕ:05/06/2012 ರಂದು 1700 ಗಂಟೆಗೆ ತಮ್ಮ ಕಂಪನಿಯ ಎಕ್ಸಕ್ಯೂಟಿವ್ ರವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಉಸ್ಮಾನಗಂಜ ದಲ್ಲಿರುವ ಸಂಗಮೇಶ್ವರ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಹ್ಯಾವೇಲ್ಸ್ ಕಂಪನಿಯ ವೈರ ನಕಲಿ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಮೇರೆಗೆ ಸದರಿ ಅಂಗಡಿಗೆ ಹೊಗಿ ವೈರ ಖರಿದಿಸಿ ಅದನ್ನು ನಕಲಿ ಅಂತ ಖಚಿತ ಪಡಿಸಿಕೊಂಡು ಸದರಿ ಅಂಗಡಿಗೆ ದಾಳಿ ಮಾಡಿ ಒಟ್ಟು 1 ಸ್ಕಾಯರ್ ಎಂ.ಎಂ.ದ 24 ಹ್ಯಾವೆಲ್ಸ್ ಕಂಪನಿಯ ನಕಲಿ ವೈರ್ ಬಾಕ್ಸಗಳೂ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಗುನ್ನೆ ನಂ. 89/2012 ಕಲಂ 454, 380 ಐಪಿಸಿ :-
ದಿನಾಂಕ: 02,03,06-2012 ರಂದು. ಆರೋಪಿತರಾದ ಲತೀಫ್ ತಂದೆ ಶಮೀನು ಅಹ್ಮದ್ ಹಾಗೂ ಇನ್ರ್ನೆಬ್ಬನು ಏರಫೋರ್ಸ ಸ್ಟೇಶನ ಟೆಕ್ನಿಕಲ್ ಏರಿಯದಲ್ಲಿ ಎಲೆಕ್ಟ್ರಿಕಲ್ ಕೇಲಸ ಮಾಡುತ್ತಿದ್ದಾಗ. ಸದರಿ ಕಾಪರ ಸ್ವೀಪ್ ವೈರ ಅ.ಕಿ 5000/- ರೂ ರಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ಫಿರ್ಯಾದಿ ಶ್ರೀ. ರಾಜಸಿಂಣ್ ತಂದೆ ಆಲಾಸಿಂಣ್ ವಯ : 44 ವರ್ಷ, ಉ: ಅಸಿಸ್ಟಂಟ್ ಸೆಕ್ಯೂರಿಟಿ ಆಫಿಸರ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 124/12 ಕಲಂ 279, 338 ಐಪಿಸಿ. ಜೊತೆ 187 ಐಎಮವಿ. ಎಕ್ಟ. :-
ದಿನಾಂಕ 06/06/2012 ರಂದು 15:00 ಗಂಟೆಗೆ ಫಿರ್ಯಾದಿ ಶಿವಯ್ಯಾ ತಂದೆ ಲಕ್ಷ್ಮಿ ನಾರಾಯಣ, ವಯ: 48 ವರ್ಷ, ರವರ ಮಗಳಾದ ಮಮತಾ ಇವಳು ತನ್ನ ಗುಡಿಸಲಿನಿಂದ ಬರ್ಹಿದೆಸೆಗೆ ಹೊಗಿ-ಮರಳಿ ಗುಡಿಸಿಲಿಗೆ ನಡೆದುಕೊಂಡು ಬೀದರ-ಜಹಿರಾಬಾದ ರಸ್ತೆ ದಾಟುತ್ತಿರುವಾಗ ಶಾಹಪುರ ಗೇಟ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಕೆಎ38ಇ8715 ನೇದನ್ನು ಅದರ ಚಾಲಕ ದುಡುಕಿನಿಂದ, ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದು ಮಮತಾಗೆ ಡಿಕ್ಕಿಡಿಸಿದರಿಂದ ಅಪಘಾತ ಸಂಭವಿಸಿ ಮಮತಾಳ ಬಲ ಮೊಣ ಕಾಲ ಮತ್ತು ಪಾದದ ಮಧ್ಯ ಎಲುಬು ಮುರಿದಂತೆ ಗುಪ್ತ ಗಾಯವಾಗಿದೆ. ಅಪಘಾತದ ನಂತರ ಆರೋಪಿತನು ಮೋಟಾರ ಸೈಕಲ ಸಹಿತ ಓಡಿ ಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಔರಾದ ಪೊಲೀಸ್ ಠಾಣೆ ಗುನ್ನೆ ನಂ. 44/12 ಕಲಂ 323,504 302, ಜೋತೆ 34 ಐಪಿಸಿ. :-
ದಿನಾಂಕ 07/06/12 ರಂದು ರಾತ್ರಿ 0230 ಗಂಟೆಗೆ ಔರಾದ ಪಟ್ಟಣದ ಲಿಡ್ಕರ ಕಾಲೋನಿ ರಾಜೆಪ್ಪಾ ಖಾನಾಪೂರೆ ರವರ ಮನೆಯ ಹತ್ತಿರ ರಾಜೆಪ್ಪಾ ಖಾನಾಪುರೆ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಮೃತ ಅಲೀಮ ತಂದೆ ಯಸುಫ ಸಾ// ಔರಾದ ಇತನಿಗೆ ಡಿ.ಜೆ ನೀನು ಸರಿಯಾಗಿ ಭಾರಿಸಿಲ್ಲ ಮತ್ತು ನಾವು ಹೇಳಿದ ಹಾಡುಗಳು ಹಾಕಿಲ್ಲಾ ಅಂತ ಆರೋಪಿತರಾದ ದತ್ತಾತ್ರಿ ತಂದೆ ಸೋಪಾನ ಮತ್ತು ಸಚೀನ ತಂದೆ ಧನರಾಜ ನಿಟ್ಟುರೆ ಸಾ// ಔರಾದ ರವರು ಅಲೀಮ ಇತನಿಗೆ ಅವಾಚ್ಯವಾಗಿ ಬೈದು ಜಗಳ ತೆಗೆದು ಕೈ ಮುಷ್ಠಿ ಮಾಡಿ ಎದೆಯಲ್ಲಿ ಹೋಡೆದು ಕಾಲಿನಿಂದ ಗುಪ್ತಾಂಗದ ಮೇಲೆ ಒದ್ದಿದರಿಂದ ಅಲೀಮ ಇತನು ಗಾಯಹೊಂದಿದ್ದು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತಂದಾಗ 0300 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಫಿರ್ಯಾದಿ ನರಸಿಂಗ ತಂದೆ ಗಣಪತಿ ಕೋಟಗೀರೆ ಸಾ// ಮಮದಾಪುರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment