Police Bhavan Kalaburagi

Police Bhavan Kalaburagi

Thursday, June 7, 2012

GULBARGA DIST


ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ, ಆಳಂದ ತಾಲೂಕಿನ ದಲಿತ ಮುಖಂಡ ನಾಗೇಶ ಸಿಂಗೆ ಇತನನ್ನು ಕೊಲೆ ಮಾಡಿದ 9 ಜನ ಆರೋಪಿಗಳ ಬಂದನ
ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ ನಾಗೇಂದ್ರ ಸಿಂಗೆ ಸಾ||ಬಂಗರಗಾ ತಾ|| ಆಳಂದರವರು,  ನನ್ನ ಗಂಡ ನಾಗೇಶ @ ನಾಗೇಂದ್ರ ಇತನು ರುದ್ರವಾಡಿ ಗ್ರಾಮ ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೆಲಸ ಮಾಡುತ್ತಿದ್ದಾಗ ದಿನಾಂಕ:28-05-2012 ರಂದು ಪಂಪದಿಂದ ನೀರು ಬಿಡಲು ಹೋದಾಗ ತಮ್ಮ ಗ್ರಾಮದ ಧರ್ಮರಾಯ ಮತ್ತು ಸುಭಾಶ ಇವರು  ಅಪಹರಣ ಮಾಡಿರಿಬಹುದು ಅಂತಾ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಈ ಪ್ರಕರಣವನ್ನು ಬೇದಿಸಿ ಪತ್ತೆ ಹಚ್ಚಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ತನಿಖಾ ತಂಡದ ನೇತ್ರತ್ವವನ್ನು ಶ್ರೀ ಎಸ್.ಬಿ. ಸಾಂಬಾ ಡಿ.ಎಸ್.ಪಿ. ಆಳಂದ ಉಪ ವಿಭಾಗ, ಶ್ರೀ ರಾಜೇಂದ್ರ ಸಿ.ಪಿ.ಐ. ಅಫಜಲಪೂರ ವೃತ್ತ, ಶ್ರೀ ಹಾಲೇಶ ಪಿ.ಎಸ್.ಐ. ಆಳಂದ ಠಾಣೆ, ಶ್ರೀ ವಿನಾಯಕ ಪಿ.ಎಸ್.ಐ. ನರೋಣಾ ಠಾಣೆ ಮತ್ತು ಶ್ರೀ ಎಸ್.ಎಸ್. ದೊಡ್ಡಮನಿ ಪಿ.ಎಸ್.ಐ. ನಿಂಬರ್ಗಾ ಠಾಣೆ ರವರು ಈ ಪ್ರಕರಣವನ್ನು ಬೇದಿಸುವಲ್ಲಿ ಯಶ್ವಸಿಯಾಗಿದ್ದು, ಈ ಕೆಳಕಂಡ 9 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ,  ಆರೋಪಿತರಾದ ಧರ್ಮರಾಯ ತಂದೆ ಗುರುಲಿಂಗಪ್ಪಾ ಚಿಚಕೋಟಿ,ಅರುಣ ತಂದೆ ಗುರುಲಿಂಗಪ್ಪಾ ಚಿಚಕೋಟಿ, ಸತೀಶ ತಂದೆ ಧರ್ಮರಾಯ ಚಿಚಕೋಟಿ,ನಿತೀಶ ತಂದೆ ಧರ್ಮರಾಯ ಚಿಚಕೋಟಿ,ಪರಮೇಶ್ವರ ತಂದೆ ಶರಣಪ್ಪಾ ಜಮಾದಾರ,ಸುಭಾಶ ತಂದೆ ಬಾಪುರಾವ ಚಿಚಕೋಟಿ, ಬಂಡೇಶ ತಂದೆ ದೂಳಪ್ಪಾ ಜಿಡಗೆ, ಶಿವಕುಮಾರ ತಂದೆ ಬಸವರಾಜ ಸಂಗೋಳಗಿ, ಬರಮಾಲಿಂಗ ತಂದೆ ಶರಣಪ್ಪಾ ಖಜೂರಿ ಸಾ|| ಎಲ್ಲರೂ ಬಂಗರಗಾ ಗ್ರಾಮದವರಾಗಿರುತ್ತಾರೆ. ಆರೋಪಿತರು  ನಾಗೇಶ  @ ನಾಗೇಂದ್ರ ತಂದೆ ಬಾಪುರಾವ ಸಿಂಗೆ ಇವನು ಪ್ರತಿಯೊಂದು ತಮ್ಮ ಕೆಲಸಕ್ಕೆ ವಿರೋಧಿಸುತ್ತಿದ್ದು, ಮತ್ತು ಇವರಲ್ಲಿ ಕೆಲವು ಆರೋಪಿತರು ಹರಿಜನ ಓಣಿಯ ಕೆಲವು ಹೆಣ್ಣುಮಕ್ಕಳೊಂದಿಗೆ ಸಂಬಂಧ ಇಟ್ಟ ಬಗ್ಗೆ ಇದಕ್ಕೆ ಮೃತ ನಾಗೇಶ ಇವನು ಪ್ರತಿಭಟಿಸುತ್ತಿದ್ದರಿಂದ ಕೊಲೆ ಮಾಡುವ ಸಲುವಾಗಿ ಸಂಚು ರೂಪಿಸಿ ಬಲತ್ಕಾರವಾಗಿ ಅಪಹರಣ ಮಾಡಿ ಕೊಲೆ ಮಾಡಿ ಶವವನ್ನು ಕರ್ನಾಟಕ ಮತ್ತು ಆಂದ್ರ ಗಡಿಯಲ್ಲಿರುವ ಬೀದರ ಜಿಲ್ಲೆಯ ಭೀಮಳಖೇಡ ಠಾಣೆ ವಾಪ್ತಿಯ ಕಾಯ್ದಿಟ್ಟ ಆರಣ್ಯದಲ್ಲಿ ಬಿಸಾಡಿರುತ್ತಾರೆ. ತನಿಖಾ ತಂಡದ ಅಧಿಕಾರಿಗಳ ಕಾರ್ಯವನ್ನು ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಪ್ರಶಂಷಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ. 

No comments: