ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಬ್ರಹ್ಮಾನಂದ ತಂದೆ ಗುರುಶಾಂತಪ್ಪ ಧನ್ನಿಕರ ಸಾ: ಯಳವಂತಗಿ (ಕೆ) ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯನಾದ ಬಾಬುರಾವ ಮತ್ತುಅಣವೀರಪ್ಪಾ ಮೂವರು ಕೂಡಿಕೊಂಡು ಪಟ್ಟಣ ಕ್ರಾಸ ಹತ್ತಿರ ದಿನಾಂಕ. 06-6-2012 ರಂದು 1 ಮಧ್ಯಾಹ್ನ 1-00 ಗಂಟೆಗೆ ಮಾವಿನ ಹಣ್ಣು ಖರೀದಿ ಮಾಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಕಾರ ಕೆಎ 32 ಬಿ-4464 ಚಾಲಕ ಅತೀವೇಗವಾಗಿ ನಡೆಸುತ್ತಾ ಬಂದು ಮಾವಿನ ಹಣ್ಣು ಖರೀದಿ ಮಾಡುತ್ತಿದ್ದ ನನಗೆ ಮತ್ತು ನನ್ನ ಗೆಳೆಯರಿಗೆ ಹಾಗೂ ಮಾವಿ ಬಂಡಿಗೆ ಮತ್ತು ಪಾನ ಡಬ್ಬಿಗೆ ಡಿಕ್ಕಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:187/12 ಕಲಂ 279,337, ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಕುಮಾರ ಸ್ವಾಮಿ ತಂದೆ ಮನ್ಮಥಯ್ಯಾ ಸ್ವಾಮಿ ಉ:ಖಾಸಗಿ ಇಂಜನಿಯರ ಕೆಲಸ ಸಾ: ಕ್ರಿಷ್ಣಾ ನಗರ ಗುಲಬರ್ಗಾರವರು ನಾನು ದಿನಾಂಕ 06-06-12 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಲಾಹೋಟಿ ಪೆಟ್ರೋಲ್ ಬಂಕದಿಂದ ಐವಾನ ಈ ಶಾಹಿ ರೋಡಿನಲ್ಲಿ ಬರುವ ಹುಡಗಿಯರ ಹಾಸ್ಟೇಲ ಹತ್ತಿರ ರೋಡಿನ ಮೇಲೆ ನನ್ನ ಮೋಟಾರ ಸೈಕಲಗೆ ಕಾರ ನಂ:ಕೆಎ-32ಎಮ್-9473 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಕಾರ ಸಮೇತ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
No comments:
Post a Comment