ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-06-2012
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 94/2012 ಕಲಂ 392 ಐಪಿಸಿ :-
ದಿನಾಂಕ; 15-06-2012 ಗಂಟೆಗೆ ಶ್ರೀಮತಿ ಶಕುಂತಲಾ ಗಂಡ ದಿ. ಕಲ್ಲಪ್ಪ ಹತ್ತಿ 56 ವರ್ಷ, ಜಾ|| ಲಿಂಗಾಯತ ಉ|| ಅಂಗನವಾಡಿ ಶಿಕ್ಷಕಿ ಸಾ|| ಧೂಮನಸೂರ ಸದ್ಯ ಎಸ್.ಎಂ ಕೃಷ್ಣ ನಗರ ಬೀದರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದ್ದು ಸಾರಾಂಶವೆನೆಂದರೆ, ದಿನಾಂಕ: 07-05-2012 ರಂದು ಫಿರ್ಯಾದಿತರು ಬೀದರ ಮಡಿವಾಳ ಚೌಕದಿಂದ ಒಂದು ಆಟೋದಲ್ಲಿ ಬಾಡಿಗೆಗೆ ಕುಳಿತು ಗಾಂಧಿಗಂಜ ಕಡೆಗೆ ಬರುವಾಗ, ಆರೋಪಿತನಾದ ಆಟೋಚಾಲಕ ಮತ್ತು ಇನ್ನೋಬ್ಬ ಫಿರ್ಯಾದಿಗೆ ಮುಂದೆ ಎಲ್ಲಿಗೆ ಹೋಗುವದು ಇದೆ ಅಂತ ಕೇಳಿದ್ದು, ಫಿರ್ಯಾದಿತರು ತಾನು ಎಸ್.ಎಂ.ಕೃಷ್ಣಾ ನಗರಕ್ಕೆ ಹೋಗುವದು ಇದೆ ಅಂತ ತಿಳಿಸಲು ನಾವು ಅಲ್ಲಿಗೆ ಹೋಗುತ್ತಿದ್ದೆವೆ ಅಂತ ತಿಳಿಸಿ ಫಿರ್ಯಾದಿತರನ್ನು ಬೆಳ್ಳುರ ಕ್ರಾಸವರೆಗೆ ಆಟೋದಲ್ಲಿ ಕರೆದುಕೊಂಡು ಆಟೋವನ್ನು ಧುಮಸಾಪೂರ ಕಡೆಗೆ ತಿರಗಿಸದೆ , ಕಮಠಾಣ ಕಡೆಗೆ ಒಯ್ಯುತ್ತಿರುವಾಗ ಫಿರ್ಯಾದಿತರು ಈ ಬಗ್ಗೆ ಚೀರುತ್ತಿರುವಾಗ ಆಟೋವನ್ನು ಆಮಲಾಪೂರ ಶಿವಾರದ ಅರಣ್ಯದಲ್ಲಿ ಕರೆದುಕೊಂಢು ಹೋಗಿ ಆಟೋ ಚಾಲಕನ ಪಕ್ಕದಲ್ಲಿ ಇರುವ ವ್ಯಕ್ತಿ ಫಿರ್ಯಾದಿಯ ಹತ್ತಿರ ಬಂದು ಚಾಕು ತೋರಿಸಿ ಅವರ ಕೊರಳಿದ್ದ 3 ತೊಲೆ 5 ಗ್ರಾಮ ಬಂಗಾರದ ಒಂದು ನಾನ ಸರ ಅ| ಕಿ|| 91000=00 8 ಗ್ರಾಮ ಬಂಗಾರದ ಒಂದು ಅಷ್ಟಫೈಲಿ ಸರ ಅ|| ಕಿ|| 15000=00 3 ತೊಲೆ ಬಂಗಾರದ ಲಿಂಗದಕಾಯಿ ಅ|| ಕಿ|| 1800=00 ರೂ ಹೀಗೆ ಒಟ್ಟು ಅ|| ಕಿ|| 1,07.800=00 ರೂ ನೇದು ದೋಚಿಕೊಂಡು ಹೋಗಿರುತ್ತಾರೆ. ಸದರಿ ಘಟನೆ ನಡೆದಾಗ ದಿ: 07-05-2011 ರಂದಿ ರಾತ್ರಿ 7:45 ಗಂಟೆಯಾಗಿರುತ್ತದೆ . ಸದರಿ ಆಟೋಚಾಲಕ ಮತ್ತು ಅಪರಿಚಿತ ವ್ಯಕ್ತಿ ಹೆಸರು ಮತ್ತು ನನಗೆ ಗೊತ್ತಿಲ್ಲ. ಆಟೋ ನಂಬರ ಕತ್ತಲಲ್ಲಿ ನೋಡಿರುವುದಿಲ್ಲ ಅಂತ ಇದ್ದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಫಿಯರ್ಾದಿ ಚಂದ್ರಶೇಖರ ತಂದೆ ಮಲ್ಲಿಕಾಜರ್ುನ ಸುಲೇಪೆಟ ವಯ 41 ವರ್ಷ ಶ್ರೀರಾಮ ಫೈನಾನ್ಸ್ ಕಂಪನಿ ಬಸವಕಲ್ಯಾಣ ರವರು ನೀಡಿದ ದೂರಿನ ಸಾರಾಂಶವೆನೆಂದರೆ ರೇವಣಸಿದ್ದಪ್ಪಾ ತಂದೆ ನಾಗೇಂದ್ರಪ್ಪಾ ಪಾಟೀಲ ಸಾ; ಬೆನ್ ಚಿಂಬೋಳಿ ತಾ; ಹುಮನಾಬಾದ ರವರು ಸದರಿ ಬ್ಯಾಂಕಿನಿದ 869547/- ರೂಪಾಯಿ ಸಾಲ ಪಡೆದು ನಂತರ ಆರ್.ಸಿ. ನಲ್ಲಿದ್ದ ವಾಹನದ ಶ್ರೀರಾಮ ಫೈನಾನ್ಸದ ಮಾಲಿಕತ್ವದ ಹೆಸರನ್ನು ತೆಗೆದು ಅಮೃತ ತಂದೆ ನಾಗಪ್ಪಾ ಪಾಟೀಲ ಇತನ ಹೆಸರು ಸೇರಿಸಿ ವಾಹನದ ಸಾಲ ತೀರಿಸದೇ ಅಪರಾಧ ನಂಬಿಕೆ ದ್ರೋಹ ಮತ್ತು ಮೋಸ ವಂಚನೆ ಮಾಡಿದ ಅಪರಾಧ ಎಸಗಿರುತ್ತಾನೆ ಅಂತಾ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ. 48/2012. ಕಲಂ .464,465,467,468,470,471,472,484,420 ಜೊತೆ 34 ಐಪಿಸಿ.
ದಿನಾಂಕ: 15/06/2012 ರಂದು 1730 ಗಂಟೆಗೆ. ಫಿಯರ್ಾದಿ ಹಣಮಂತಪ್ಪಾ ತಂದೆ ನಾಗಪ್ಪಾ ಸಾ: ತಾಜಲಾಪೂರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿಯರ್ಾದಿ ಮತ್ತು ಆರೋಪಿತರಾದ ರವಿ, ನಾಗಮ್ಮಾ, ರಾಘವೇಂದ್ರ ಮತ್ತು ಸಂಜೀವ ರೆಡ್ಡಿ ರವರುಗಳ ಮಧ್ಯೆ ತಾಜಲಾಪೂರ ಗ್ರಾಮದ ಮನೆ ನಂ.1-46 ನೇದರ ತಕರಾರು ಬಗ್ಗೆ ಮಾನ್ಯ ಸಿವಿಲ್ ನ್ಯಾಯಾಲಯ ಬೀದರದಲ್ಲಿ ಒ.ಎಸ್ ನಂ.42/06 ಪ್ರಕಾರ ವಿಚಾರಣೆ ನಡೆದಿದ್ದು ಆದರೆ ಆರೋಪಿತರಾದ ಮೃತ ಶೆಶಪ್ಪಾ ತಂದೆ ಗುಂಡಪ್ಪಾ ಸಾ;ತಾಜಲಾಪೂರ ಇವರು ದಿನಾಂಕ:19/10/2003 ರಂದು ತಾಜಲಾಪೂರ ಗ್ರಾಮದಲ್ಲಿ ಮೃತಪಟ್ಟಿರುತ್ತಾನೆಂದು ಸಿ.ಎಂ.ಸಿ ಬೀದರದಿಂದ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಒ.ಎಸ್ ನಂ.42/06 ನೇದರಲ್ಲಿ ಲಗತ್ತಿಸಿ ತಾತ್ಕಾಲಿಕ ತಡೆಯಾಜ್ಞೆ ತಂದು ತಮಗೆ ಮೊಸ ಮಾಡಿರುತ್ತಾರೆಂದು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರನ್ನು ದಿನಾಂಕ:15/06/2012 ರಂದು 1730 ಗಂಟೆಗೆ ಮಾನ್ಯ ಹೆಚ್ಚುವರಿ ಸಿ.ಜೆ.ಎಂ ಬೀದರ ರವರ ಕಛೇರಿ ಸಂಖ್ಯೆ 2515/12 ದಿನಾಂಕ:13/06/2012 ರ ಜೊತೆ ಲಗತ್ತಿಸಿದ ಫಿಯರ್ಾದಿ ಖಾಸಗಿ ದೂರು ಸಂ.06/12 ನೇದರ ಮೇರೆಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment