ಕೊಲೆಗೆ ಪ್ರಯತ್ನ ಪ್ರಕರಣ
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀ.ಲಕ್ಷ್ಮಣ ತಂದೆ ಶಿವಶರಣಪ್ಪ ಆಮ್ಟೇ, ಸಾ|| ಬಾಪೂನಗರ ಗುಲಬರ್ಗಾ ರವರು ಈಗ ಸುಮಾರು ಒಂದು ವರ್ಷದ ಹಿಂದೆ ಮಾಂಗರವಾಡಿ ಬಡಾವಣೆಯ ಸೂರಜ ತಂದೆ ಭಾಷಾ, ರಾಜಪಾಲ ತಂದೆ ಮಹಿಪಾಲ ಇವರು ಸಿಗರೇಟ ಸಲುವಾಗಿ ನಮ್ಮ ಅಂಗಡಿಗೆ ಬಂದು ನನ್ನ ಜೊತೆ ಜಗಳ ಮಾಡಿಕೊಂಡಿದ್ದರು, ಅದೇ ದ್ವೇಷ ಭಾವನೆಯಿಂದ ದಿನಾಂಕ: 16/06/2012 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ನಾನು ನಮ್ಮ ದುಕಾನ ಎದುರುಗಡೆ ನಿಂತಾಗ ಸೂರಜ ಮತ್ತು ಭಾಷಾ ಇವರು ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ: 323, 341, 307, 504 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment