ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 16/06/2012 ರಂದು 1730 ಗಂಟೆಗೆ ಶ್ರೀ.ಮಹಾಂತೇಶ ಮತ್ತು ಗಜೇಂದ್ರ, ಬ್ರಹ್ಮಪೂರ ಪೊಲೀಸ್ ಠಾಣೆ ರವರು ಸುಪರ ಮಾರ್ಕೆಟದಿಂದ ತಹಶೀಲ ಆಫೀಸ ಹತ್ತಿರ ಪೆಟ್ರೋಲಿಂಗ್ ಕುರಿತು ಹೋದಾಗ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೊದಂತೆ ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವರನ್ನು ಹಿಡಿದು ಹೆಸರು ವಿಚಾರಿಸಿದ್ದು, ಚಂದ್ರಕಾಂತ ತಂದೆ ಕಲ್ಯಾಣಿ ಹರಳಯ್ಯ, ಸಾ|| ಹೋದಲೂರ, ತಾ|| ಆಳಂದ, ಫೀರೋಜ ತಂದೆ ಮಹ್ಮದ ಇಸ್ಮಾಯಿಲ ಸಾ|| ದರ್ಗಾ ಹತ್ತಿರ ಮುಸ್ಲಿಂ ಸಂಘ ಗುಲಬರ್ಗಾರವರು ಸ್ಥಳದಲ್ಲಿ ಯಾಗೇಯೆ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗೃತೆ ಕ್ರಮದ ದಸ್ತಗಿರಿ ಮಾಡಿ ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 80/2012 ಕಲಂ: 110(ಇ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ ಶ್ರೀ ವಿಜಯಕುಮಾರ ತಂದೆ ನರಸಪ್ಪಾ ಗುರಮಿಟಕಲ್ ರವರು ರ ನಾನು ದಿನಾಂಕ 15-06-2012 ರಂದು ರಾತ್ರಿ 8.30 ಸುಮಾರಿಗೆ ನನ್ನ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಊಟಕ್ಕೆ ಕುಳಿತ ಸಮಯದಲ್ಲಿ ಮದನ ಗೋಪಾಲ್ ತಂದೆ ನರಸಪ್ಪಾ ಗುರುಮಿಟಕಲ್, ಹಣಮಂತ ತಂದೆ ಮದನ ಗೋಪಾಲ ಮತ್ತು ರೇಣುಕಾಬಾಯಿ ಗಂಡ ಮದನ ಗೋಪಾಲ ಇವರೆಲ್ಲರೂ ಕೂಡಿ ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಹೆಂಡತಿ, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರಿಂದ, ನಾನು ಹಾಗೂ ತನ್ನ ಮಗ ಅಶ್ವತ ಯಾಕೆ ಬೈಯುತ್ತಿದ್ದಿರಿ ಅಂತ ಕೇಳಿದ್ದಕ್ಕೆ, ಕೈಯಲ್ಲಿ ಚಾಕು ಹಿಡಿದುಕೊಂಡು ಜೀವ ತೆಗೆಯುತ್ತೇನೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 44/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮಕೈಕೊಂಡೆನು.
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀ ಮದನಗೋಪಾಲ ತಂದೆ ನರಸಪ್ಪಾ ಗುರುಮಿಟಕಲ್ ರವರು ನನ್ನ ಮನೆಯಲ್ಲಿ ದಿನಾಂಕ 15-06-2012 ರಂದು ರಾತ್ರಿ 9.30 ಗಂಟೆಗೆ ಇದ್ದಾಗ ಅ ಸಮಯಕ್ಕೆ ತನ್ನ ಅಣ್ಣನ ಮಕ್ಕಳಾದ ಅಶ್ವಥ, ಬಾಲಕೃಷ್ಣಾ ಇವರುಗಳು ಮನೆಗೆ ಬಂದು ಮನೆಯ ಹಂಚಿಕೆ ವಿಚಾರದಲ್ಲಿ ಮಾತಾನಾಡುವುದು ಇದೆ ನಮ್ಮ ಮನೆಗೆ ಹೋಗೋಣ ನಡೆ ಅಂತಾ ಕರೆದು ನಾನು ಹೀಗೇಕೆ ಮಾತಾನಾಡುವುದು ಸದರಿ ಮನೆಯ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದು, ನಾಳೆ ಬೆಳಿಗ್ಗೆ ಮಾತಾನಾಡೋಣ ಅಂತಾ ಅಂದರು ಸಹ ನನಗೆ ಕೇಳದೇ ಮನವೋಲಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಅಣ್ಣ ವಿಜಯಕುಮಾರ ಈತನು ಮನೆಯ ವಿಷಯದಲ್ಲಿ ನನ್ನೊಂದಿಗೆ ಚರ್ಚಿಸುತ್ತಿದ್ದು, ನಾನು ಮನೆಯ ಬಗ್ಗೆ ನ್ಯಾಯಾಲಯದಲ್ಲಿ ತನಿಖೆ ನಡೆದಿದ್ದು ಅದು ಬರುವ ತನಕ ನೋಡೋಣ ಅಂತಾ ನಾನು ಹೇಳಿದಾಗ ನಮ್ಮ ಅಣ್ಣ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ ಸಾವಿತ್ರಿ ಗಂಡ ಪ್ರದೀಪ ಸಾ: ವೆಂಕಟೇಶ ನಗರ ರವರು ನಾನು ದಿನಾಂಕ 16-06-2012 ರಂದು ಮುಂಜಾನೆ ಕೆಲಸ ಮುಗಿಸಿಕೊಂಡು ಹುಸೇನ ಸಾಗರ ಟ್ರೈನ ಮುಖಾಂತರ ಗುಲಬರ್ಗಾಕ್ಕೆ 20-00 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಆಗ ಮಳೆ ಬರುತ್ತಿತ್ತು ನಾನು ಒಬ್ಬಳೆ ಇರುವದರಿಂದ ನಡೆಯುತ್ತಾ ಹೊರಟೇನು ವೆಂಕಟೇಶ ನಗರದಲ್ಲಿ ನಾನು ನಡೆಯುತ್ತಾ ಹೊರಟಾಗ ನನ್ನ ಪಕ್ಕದಲ್ಲಿ ಒಬ್ಬ ಹುಡಗ ನಡೆಯುತ್ತಾ ಬರುತ್ತಿದ್ದ ನನ್ನ ಮನೆ ಸಮೀಪ ಹೋದಾಗ ನ್ನ ಜೊತೆಯಲ್ಲಿಯೆ ಬರುತ್ತಿದ್ದ ಹುಡುಗ ನನಗೆ ದಬ್ಬಿಸಿಕೊಟ್ಟು ನನ್ನ ಕೊರಳಲ್ಲಿಯ ಮಂಗಳ ಸೂತ್ರಕ್ಕೆ ಕೈ ಹಾಕಿ ಜಗ್ಗಿ ಹರಿದುಕೊಂಡ ನಾನು ಚೀರಾಡಲು ಪ್ರಾಂಭಿಸಿದೆನು. ಆಗ ಓಣಿಯಲ್ಲಿ ಹೊಗುವವರು ಬಂದು ಸದರಿಯವನಿಗೆ ಹಿಡಿದುಕೊಂಡು ಅವನ ಹತ್ತಿರ ಇದ್ದ ನನ್ನ ಮಂಗಳ ಸೂತ್ರ ನನಗೆ ಮರಳಿ ಕೊಡಿಸಿರುತ್ತಾರೆ. ಸದರಿಯವನು ಓಡಿ ಹೋದನು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:85/12 ಕಲಂ 392, 511 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment