Police Bhavan Kalaburagi

Police Bhavan Kalaburagi

Sunday, June 24, 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಹಸೀಬ ತಂದೆ ಖದೀರ  ಸಾ: ಬಾರೇ ಹಿಲ್ಸ ಗುಲಬರ್ಗಾ ರವರು ನನ್ನ ಗೆಳೆಯರಾದ ಜಾಹೀದ ತಂದೆ ಭಾಷಾಸಾಬ,ತೌಷೀಫ್ ತಂದೆ ಸಾದೀಕಸಾಬ,ನಿಯಾಜ ತಂದೆ ರಿಯಾಜ ರವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ದರ್ಗಾ ದರ್ಶನಕ್ಕೆ ಕುರಿತು ಸ್ಕಾರ್ಪಿಯೋ ನಂ: ಕೆಎ 34- ಟಿಅರ್-1937 ನೇದ್ದರಲ್ಲಿ ಗುಲಬರ್ಗಾಕ್ಕೆ  ಬರುತ್ತಿದೆವೆ ಅಂತಾ ಹೇಳಿದ್ದರು, ಬರುತ್ತಿವ ಬಳ್ಳಾರಿ ಬಿಟ್ಟ ನಂತರ ಅವರು ನನ್ನ ಜೋತೆ ಪೋನ ಸಂಪರ್ಕದದಲ್ಲಿದ್ದರು, ದಾರಿ ಮಧ್ಯ ದಿನಾಂಕ:23/06/2012 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಜಾಹೀದ ಇತನು ಜೇವರ್ಗಿ – ಶಹಾಪೂರದ ರೋಡಿನ ಮುದಬಾಳ (ಬಿ) ಕ್ರಾಸ್ ಹತ್ತಿರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಬ್ರೀಡ್ಜ ಕೆಳಗೆ ಪಲ್ಟಿ ಮಾಡಿದ್ದರಿಂದ,ನಿಯಾಜ ಇತನು ಸ್ಥಳದಲ್ಲಿಯೇ ಸತ್ತಿರುತ್ತಾನೆ. ತೌಸಿಫ ಮತ್ತು ಜಾಹೀದ ಇವರಿಗೆ ಸಣ್ಣ ಮತ್ತು ಭಾರಿಗಾಯಗಳಾಗಿರುತ್ತವೆ. ನಾನು ಅವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆನೆ. ಜಾಹೀದ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ: 95/2012 ಕಲಂ.279.337.338. 304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: