ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ,ದೇವರಾಜ @ ದೇವೀಂದ್ರ ತಂದೆ ನಾಗಪ್ಪ ಸುತಾರ ಸಾ:ಮದಗುಣಕಿ,ತಾ:ಆಳಂದ ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ@ ಮಲ್ಲಿಕಾರ್ಜುನ ಸಣ್ಣಮನಿ ಇಬ್ಬರೂ ಕೂಡಿಕೊಂಡು ದಿನಾಂಕ:23/06/2012ರಂದು ರಾತ್ರಿ 8:30 ಗಂಟೆ ಸುಮಾರಿಗೆ ಮೋಟರ್ ಸೈಕಲ್ ನಂಬರ ಎಮ್.ಹೆಚ್ 13 ಎಫ್ 8283 ನೇದ್ದರ ಮೇಲೆ ಮದಗುಣಕಿ ಗ್ರಾಮದಿಂದ ಮಾದನ ಹಿಪ್ಪರಗಾ ಸಮೀಪದ ಅರಗಲ ಮಡ್ಡಿ ಹತ್ತಿರ ದಾಟಿ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗದಿಂದ, ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗಳಿಗೆ ಮುಖಾಮುಕಿ ಡಿಕ್ಕಿಯಾಗಿರುತ್ತವೆ. ಡಿಕ್ಕಿಯಾದ ಪರಿಣಾಮ ನನಗೆ ಬಲಗಾಲ ಮೋಳಕಾಲ ಹತ್ತಿರ ರಕ್ತಗಾಯ ಮತ್ತು ಬಲಗಾಲದ ಹಸ್ತದ ಮೇಲೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಮೊಟರ್ ಸೈಕಲ್ ನಂ ನೊಡಲಾಗಿ ಕೆಎ 32 ಎಲ್ 8620 ಅಂತಾ ಇರುತ್ತದೆ. ಸದರಿ ಮೋಟಾರ ಸವಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/2012 ಕಲಂ 279,337,338 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಶಿವರಾಯ ತಂದೆ ಸಿದ್ದಪ್ಪಾ ನಾಟಿಕಾರ ಮು|| ಮಳಗ(ಎನ್) ತಾ|| ಚಿತ್ತಾಪೂರ ಜಿ|| ಗುಲಬರ್ಗಾ ರವರು ನನ್ನ ಮಗಳಾದ ಕುಮಾರಿ ಮಹಾದೇವಿ ತಂದೆ ಶಿವರಾಯ ನಾಟಿಕಾರ ವಯ 12 ವರ್ಷ ಅಪ್ರಾಪ್ತ ಬಾಲಕಿ ದಿನಾಂಕ 23-06-2012 ರಂದು ಮುಂಜಾನೆ 5 ಗಂಟೆಗೆ ಬಯಲು ದರಸಿಗೆ ಹೋದಾಗ ದೇವಪ್ಪಾ ತಂದೆ ಅಯ್ಯಾಪ್ಪಾ ಜಡಿಯಾರ, ಅಯ್ಯಪ್ಪಾ ತಂದೆ ಭಿಮರಾಯ ಜಡಿಯಾರ ಹಾಗು ಆತನ ಸಂಗಡಿಗನಾದ ಭೀಮರಾಯ ತಂದೆ ತಿಪ್ಪಣ್ಣಾ ಗಡ್ಡಿಮನಿ ಈ ಮೂವರು ಕೂಡಿಕೊಂಡು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 366 (ಎ) ಸಂ 34 ಐಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment