ದರೋಡೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ : ಶ್ರೀ, ಅಮೃತ ತಂದೆ ಕಾಶಪ್ಪಾ ಕಟ್ಟಿಮನಿ ಸಾ|| ಹೀರಾಫೂರ
ಚರ್ಚ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ:06/06/2012 ರಂದು ರಾತ್ರಿ ಮನೆಯ ಮಾಳಗಿ ಮೇಲೆ ಮಲಗಿ ಕೊಂಡಾಗ ಮಧ್ಯರಾತ್ರಿ ಸುಮಾರು 5 ಜನರು 25
ರಿಂದ 30 ವರ್ಷದವರು ಬಂದು ನನಗೆ ಹೊಡೆ ಬಡೆ ಮಾಡುತ್ತಿದ್ದರು, ಇದರ ಸಪ್ಪಳ ಕೇಳಿ ನನ್ನ ಮನೆಯವರು
ಬಾಗಿಲ ತೆರೆಯುತ್ತಿರುವಾಗ ಅವರಿಗೂ ಸಹ ಹೊಡೆ ಬಡೆ ಮಾಡಿರುತ್ತಾರೆ ಅಲ್ಲದೇ ಮನೆಯಲ್ಲಿದ್ದ ಬಂಗಾರದ
ಆಭರಣ, ಮೊಬಾಯಿಲ್ ಕೈ ಗಡಿಯಾರ, ನಗದು ಹಣ
ಇವೆಲ್ಲವೂ ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 189/2012 ಕಲಂ 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ವಿಜಯ ತಂದೆ ಮಹಾದೇವ ಯಾದವ ,ಸಾ:ಸಾಯಿನಾಥ ನಗರ ವಡಗಾಂವ ಸೇರಿ ಪೂನಾ (ಮಹಾರಾಷ್ಟ) ರವರು ನಾನು ದಿನಾಂಕ: 06-06-2012 ರಂದು ರಾತ್ರಿ 7-00
ಸುಮಾರಿಗೆ ನಾನು ಮಹಾರಾಷ್ಟ್ರದ ಪುನಾದಲ್ಲಿದ್ದಾಗ ನನ್ನ ಲಾರಿ ಚಾಲಕ ಹಣಮಂತ ಶೇಳಕೆ ನನಗೆ ಪೋನ್ ಮಾಡಿ ಹೇಳಿದ್ದೆನೆಂದರೆ ನಾನು ದಿ/06/06/2012 ರಂದು ಮಳಖೇಡ ದಿಂದ ಲಾರಿಯಲ್ಲಿ ಸೀಮೆಂಟ್ ತುಂಬಿಕೊಂಡು ಪೂನಾಕ್ಕೆ
ತೆಗೆದುಕೊಂಡು ಬರುವಾಗ ಆಳಂದ – ವಾಗ್ದರಗಿ ಮೇನರೋಡನಲ್ಲಿ ಸರಸಂಬಾ ಜಕ್ಕಮ ಗುಡ್ಡದ ಹತ್ತಿರ
ರಸ್ತೆಯಲ್ಲಿ ಲಾರಿ ನಂ MH:12 FZ:3769 ನೇದ್ದು ಲಾರಿ ಪಲ್ಟಿಯಾಗಿದೆ ಅಂತಾ ತಿಳಿಸಿದ ಮೇರೆಗೆ
ನಾನು ಬಂದು ನೋಡಲು ನಿಜವಿರುತ್ತದೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
26/2012 ಕಲಂ 279 ಐಪಿಸಿ ಸಮಗಡ 187 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment