:: ಪತ್ರಿಕಾ
ಪ್ರಕಟಣೆ ::
ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:27-04-2012
ರಂದು ನೀಡಿದ ತಿರ್ಪಿನಂತೆ, ದೇಶದಲ್ಲಿ ಹೆಚ್ಚುತ್ತಿರುವ ಘೋರ ಅಪರಾಧಗಳ ಕುರಿತಂತೆ ವಾಹನಗಳ
ಗಾಜುಗಳಿಗೆ ಬ್ಲ್ಯಾಕ್ ಪೀಲ್ಮನ್ನು ಉಪಯೋಗಿಸುವದು ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ
ಕಾನೂನಿಗೆ ವಿರುದ್ದವಾಗಿದ್ದು, ವಾಹನಗಳ ಮುಂಭಾಗ ಮತ್ತು ಹಿಂಭಾಗ ಹಾಗೂ ಎರಡು ಬದಿಯ ಗಾಜುಗಳಿಗೆ
ಅನುಕ್ರಮವಾಗಿ 70% ಮತ್ತು 50% ಪಾರದರ್ಶಕತೆ ಹೊಂದಿರಬೇಕು. ಮತ್ತು ವಾಹನಗಳ ಗಾಜುಗಳ ಮೇಲೆ
ಬ್ಲ್ಯಾಕ್ ಫೀಲ್ಮನ್ನು (ಸನ್ ಪೀಲ್ಮ ) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ ಎಂಬುದಾಗಿ
ಆದೇಶಿಸಿರುವದಲ್ಲದೇ, ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಪೀಲ್ಮ ಅಂಟಿಸಿದಲ್ಲಿ ಅಥವಾ ಮೇಲೆ ತಿಳಿಸಿದ ಗುಣಮಟ್ಟಕಿಂತ ಕಡಿಮೆ
ಪಾರದರ್ಶಕತೆಯನ್ನು ಹೊಂದಿರುವ ಗಾಜುಗಳನ್ನು ಅಳವಡಿಸಿಕೊಂಡಿದಲ್ಲಿ, ಅಂತಹ ವಾಹನಗಳ ಮಾಲಿಕರ ವಿರುದ್ದ ನಿಯಾಮನುಸಾರ ದಂಡ ವಸೂಲಿ
ಮಾಡುವದಲ್ಲದೇ, ನೊಂದಣಿ ಪುಸ್ತಕ (ಆರ್.ಸಿ ಪುಸ್ತಕ) ಅಮಾನತ್ತುಗೊಳಿಸಲು ಸಹ ಮೋಟಾರು ವಾಹನ ನಿಯಮ
1989 ರ ಅಡಿಯಲ್ಲಿ ಕ್ರಮ ಕೈಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪೆಟಿಷನ್ (ಸಿವಿಲ್ )
ಸಂಖ್ಯೆ:265/2012 ರಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಕೊಳ್ಳಲು ಆದೇಶಿಸಿರುವದು.
ಮಾಹನಗಳ ಮಾಲಿಕರು ಇನ್ನು ಮುಂದೆ ದಿನಾಂಕ:19-06-2012 ರೊಳಗಾಗಿ ತಮ್ಮ ವಾಹನಗಳ ಗಾಜುಗಳಿಗೆ
ಅಂಟಿಸಿದ ಬ್ಲ್ಯಾಕ್ ಪೀಲ್ಮ ಗಳನ್ನು ತೆಗದು ಹಾಕಬೇಕು. ಮತ್ತು ದಿನಾಂಕ: 20-06-2012 ರಿಂದ
ಪೋಲೀಸ್ ಹಾಗು ಸಾರಿಗೆ ಇಲಾಖೆ ಯವರಿಂದ ಜಂಟಿಯಾಗಿ ಮೋಟಾರು ವಾಹನ ಕಾಯಿದೆ 1988 ಹಾಗೂ ನಿಯಮ 1989
ರ ಅಡಿಯಲ್ಲಿ ಪ್ರವರ್ತನ ಕಾರ್ಯ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನೂನ್ವಯ ದಂಡ ವಿಧಿಸುವದಲ್ಲದೇ,
ಅಂತಹ ವಾಹನಗಳ ನೊಂದಣಿ ಪುಸ್ತಕ ಸಹ ಅಮಾನತ್ತುಗೊಳಿಸಲಾಗುವದೆಂದು, ಶ್ರೀ ಪ್ರವೀಣ ಮಧುಕರ ಪವಾರ
ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮತ್ತು ಶ್ರೀ ಈಶ್ವರ ಬಿ. ಅವಟಿ
ಪ್ರಾದೇಶಿಕ ಸಾರಿಗೆ ಅಧಿಕಾರಿ ಗುಲಬರ್ಗಾ ರವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವರು.
No comments:
Post a Comment