ಹಲ್ಲೆ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ
ಕುಷಾಬಾಯಿ ಗಂಡ ಅಣ್ಣಪ್ಪಾ ನಾಕಮನ ಸಾ|| ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ನಮ್ಮ ಮನೆ ಮುಂದೆ ಇದ್ದಾಗ
ಶ್ರೀಮತಿ, ಮಾಪಮ್ಮಾ ಗಂಡ
ರಾಣಪ್ಪಾ, ಲಕ್ಷ್ಮೀ ಗಂಡ ನಾಗಪ್ಪಾ ನಾಕಮನ , ಗಂಗಾದರ ತಂದೆ ಲಕ್ಷಪ್ಪಾ ನಾಕಮನ , ಶ್ರೀಮತಿ
ಕುಷಾಬಾಯಿ ಗಂಡ ಅಣ್ಣಪ್ಪಾ ನಾಕಮನ ಎಲ್ಲರೂ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾ ರವರು ದಿನಾಂಕ.8-6-2012 ರಂದು ಮಧ್ಯಾಹ್ನ
1-00 ಗಂಟೆಗೆ ಮನೆಯ ಎದುರುಗಡೆ ಬಂದು ನಮ್ಮ ಮನೆಯ ಪಕ್ಕದಲ್ಲಿ (ಕೆರ್) ಬಾಡ ಏಕೆ ಕಟ್ಟಿರುವಿ
ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ತೆಲೆಯ ಮೇಲಿನ
ಕೂದಲೂ ಹಿಡಿದು ಎಳೆದಾಡಿ , ಕೈ ಹಿಡಿದು ಎಳೆದಾಡಿ , ಕೈಯಿಂದ , ಕಟ್ಟಿಗೆ ಬಡಿಗೆಯಿಂದ ಕಲ್ಲಿನಿಂದ
ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
192/2012 ಕಲಂ 323, 324, 354, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹಲ್ಲೆ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ: ಶ್ರೀ, ರೇವಣಸಿದ್ಧಪ್ಪ
ತಂದೆ ಗುರುಶಾಂತಪ್ಪ ಪೊಲೀಸ ಪಾಟೀಲ ಗುಲಬರ್ಗಾ ರವರು ನಾನು ದಿನಾಂಕ: 08-06-2012 ರಂದು ಮಧ್ಯಾಹ್ನ
1-00 ಗಂಟೆ ಸುಮಾರಿಗೆ ನನ್ನ ಮನೆ ಎದುರು ನಿಂತಾಗ ನನ್ನ ತಮ್ಮ ಶರಣಬಸಪ್ಪಾ ಇತನು ಕೆಲಸಕ್ಕೆ ಯ್ಯಾಕೆ ಹೋಗಿಲ್ಲ ಅಂತಾ ಕೇಳಿದನು,
ಅದಕ್ಕೆ ನಾನು ಮೈಯಲ್ಲಿ ಆರಾಮ ಇಲ್ಲದ್ದಕ್ಕೆ ಹೋಗಿರುವುದಿಲ್ಲಾ ಅಂತ ಹೇಳಿದಾಗ ಸುಮ್ನೆತ ತಿಂದರೆ
ಹೇಗೆ ನಡೆಯುತ್ತೆ ಅಂತ ಹೇಳಿದನು, ನಾನು ಆಸ್ತಿಯಲ್ಲಿ ಪಾಲು ಕೊಡು ಅಂತಾ ಕೇಳಿದ್ದಕ್ಕೆ ಅವಾಚ್ಯವಾಗಿ
ಬೈದು ಅಲ್ಲೇ ಬಿದ್ದ ಕೊಡಲಿ ಕಾವಿನಿಂದ ತಲೆಯ
ಹಿಂದೆ ಮತ್ತು ಬಲರಟ್ಟೆಗೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 193/2012 ಕಲಂ 504, 324 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ನಿಂಬರ್ಗಾ
ಪೊಲೀಸ ಠಾಣೆ: ಶ್ರೀಮತಿ ಗಜರಾಬಾಯಿ
ಗಂಡ ಲಕ್ಷ್ಮಣ ಲವಟೆ ಸಾ|| ಭೂಸನೂರ ರವರು ನನ್ನ ಗಂಡನಾದ ಮೃತ ಲಕ್ಷ್ಮಣ ಇವರು
ದಿನಾಂಕ 30/05/2012 ರಂದು 6-00 ಗಂಟೆಗೆ ನಮ್ಮ ಕಬ್ಬಿನ ಗದ್ದೆಗೆ ನೀರು ಬಿಡಲು ಹೋಗಿದ್ದು, ನನ್ನ ಭಾವನ
ಮಕ್ಕಳಾದ ಸುಧಾಕರ ಮತ್ತು ಪ್ರಶಾಂತ ಇವರು ರಾತ್ರಿ 11-00 ಗಂಟೆಗೆ ನನ್ನ ಗಂಡನನ್ನು ಮೋಟಾರ ಸೈಕಲ
ಮೇಲೆ ತೆಗೆದುಕೊಂಡು ಬಂದಿದ್ದು, ನನ್ನ ಗಂಡನಿಗೆ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಮತ್ತು
ಕಿವಿಯಿಂದ ರಕ್ತ ಬರುತ್ತಿತ್ತು ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಉಪಚಾರ ಕುರಿತು ಬಸವೇಶ್ವರ
ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ವೈಧ್ಯರು ಸಲಹೆ ಮೇರೆಗೆ ಗಂಗಾ ಆಸ್ಪತ್ರೆ ಸೊಲ್ಲಾಪೂರದಲ್ಲಿ
ಸೇರಿಕೆ ಮಾಡಿ 5-6 ದಿವಸಗಳವರೆಗೆ ಚಿಕಿತ್ಸೆ ಪಡೆದು ಮರಳಿ ಮನೆಗೆ ಬಂದು ಸದರಿ ನೋವು
ಕಡಿಮೆಯಾಗದ್ದಿಂದ ಪುನಃ ದಿನಾಂಕ 06/06/2012 ರಂದು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ
ಮಾಡಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 08/06/2012 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ನನ್ನ ಗಂಡನು ತೋಟಕ್ಕೆ ನೀರು ಬಿಟ್ಟು ಮನೆಗೆ
ಬರುವಾಗ ದಿನಾಂಕ:30/05/2012 ರಂದು ಮೊಟಾರ ಸೈಕಲನ್ನು ಅತೀವೇಗದಿಂದ ಚಲಾಯಿಸಿ ಮೋಟಾರ ಸೈಕಲ ಸ್ಕೀಡ ಆಗಿ ಬಿದ್ದಿದ್ದರಿಂದ ತಲೆಗೆ ಭಾರಿ
ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿರುತ್ತಾನೆ. ಅಂತಾ
ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ
ನಂ. 45/2012 ಕಲಂ 279, 304 (ಎ) ಐಪಿಸಿ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment