ಗುಲಬರ್ಗಾ ಜಿಲ್ಲಾ ವಿಶೇಷ ಘಟಕದ ಪೊಲೀಸ್ ಅಧಿಕಾರಿಗಳಿಂದ, ಶಹಾಬಾದ
ನಗರದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಆರೋಪಿಗಳ ಬಂದನ, ನಗದು ಹಣ 60,230 ರೂಪಾಯಿಗಳು
ಜಪ್ತಿ.
ಮಾನ್ಯ ಪೊಲೀಸ್
ಅಧೀಕ್ಷಕರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಗುಲಬರ್ಗಾ ರವರು, ಶಹಾಬಾದ ನಗರದ ವಡ್ಡರ
ಸಂಘದಲ್ಲಿರುವ ಅಂಬರಾಯ ಹದನೂರ ಇತನ ಮನೆಯ ಪಕ್ಕದ ಖುಲ್ಲಾ
ಜಾಗೆಯಲ್ಲಿ ಸಾರ್ವಜನಿಕರಿಂದ ಒಂದು ರೂಪಾಯಿಗೆ
ಎಂಬತ್ತು ರೂಪಾಯಿಗಳು ಬರುತ್ತೆವೆ ಅಂತಾ ಜನರಿಗೆ ನಂಬಿಸಿ ಅವರಿಂದ ಹಣ ಪಡೆದುಕೊಂಡು ಮಟಕಾ ಬರೆದುಕೊಳ್ಳುತ್ತಿರುವ
ವ್ಯಕ್ತಿಯ ಮೇಲೆ ದಾಳಿ ಮಾಡಲು ಸೂಚಿಸಿದ ಮೇರೆಗೆ ಶ್ರೀ ಅಸ್ಲಾಂ ಭಾಷ ಪೊಲೀಸ್ ಇನ್ಸಪೇಕ್ಟರ
ಜಿಲ್ಲಾ ವಿಶೇಷ ಶಾಖೆ ಗುಲಬರ್ಗಾ ರವರು, ಮತ್ತು ಶ್ರೀ ಚೇತನ ಐಪಿಎಸ್ ರವರು, ಬಿ.ಬಿ ಪಟೇಲ್
ಡಿಸಿಐಬಿ ಘಟಕ, ಶಿವಪ್ಪಾ ಹೆಚಸಿ, ಎಪಿಸಿಗಳಾದ ರಾಘವೇಂದ್ರ, ಸಿದ್ದಾರೋಢ, ಶಿವಪ್ಪಾ, , ಮತ್ತು
ಖಾಸಿಂ ಹೆಚಸಿ ಡಿಎಸಬಿ ಶಾಖೆ ರವರೆಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಂದ ಹಣ
ಪಡೆದು ಅಂಕಿ ಸಂಖ್ಯೆಗಳ ಮೇಲೆ ಒಪನ ಬಂದರೆ ಒಂದು ರೂಪಾಯಿಗೆ ಎಂಟು ರೂಪಾಯಿ, ಜಾಯಿಂಟ ಬಂದರೆ ಒಂದು
ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೆವೆ ಅಂತಾ ಹೇಳಿ ಚೀಟಿ ಬರೆದುಕೊಳ್ಳುತ್ತಿವರ ಮೇಲೆ ದಾಳಿ
ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ, ಅಂಬರಾಯ ತಂದೆ ಹಣಮಂತ ಹದನೂರ, ಸಾ|| ವಡ್ಡರ ಸಂಘ
ಗುಲಬರ್ಗಾ, ಇತನಿಂದ ನಗದು ಹಣ 13500/- ಮತ್ತು ಪೆನ್ನು,ಮಟಕಾ ಚೀಟಿಗಳು, ವೆಂಕಟೇಶ ತಂದೆ
ಯಲ್ಲಪ್ಪಾ ಚೌದರಿ ಸಾ|| ಸುಭಾಶ ಚೌಕ ಶಹಾಬಾದ ಇತನಿಂದ 10,930/- ನಗದು ಹಣ, ಮತ್ತು ಪೆನ್ನು,
ಮಟಕಾ ಚಿಟಿಗಳು, ಮಲ್ಲಿನಾಥ ತಂದೆ ಹಣಮಂತ ಹದನೂರ ಸಾ|| ವಡ್ಡರ ಸಂಘ ಇತನಿಂದ 10,000/- ನಗದು ಹಣ,
ಪೆನ್ನು ಮತ್ತು ಮಟಕಾ ಚೀಟಿಗಳು, ಚಂದ್ರಶೇಖರ ತಂದೆ ಶರಣಪ್ಪಾ ಹದನೂರ ಇತನಿಂದ 10,000/- ನಗದು ಹಣ
ಮತ್ತು ಪೆನ್ನು, ಮಟಕಾ ಚೀಟಿಗಳು, ಪರಮಾನಂದ ತಂದೆ ದುಂಡಪ್ಪಾ ಯಲಗೋಡ್ ಇತನಿಂದ ನಗದು ಹಣ 9300/-
ಮತ್ತು ಪೆನ್ನು ಮಟಕಾ ಚೀಟಿಗಳು, ನಾಗು ತಂದೆ ಮಲ್ಲಪ್ಪಾ ಬೆನಕನಳ್ಳಿ ಇತನಿಂದ ನಗದು ಹಣ 6500/-
ಪೆನ್ನು ಮತ್ತು ಮಟಕಾ ಚೀಟಿಗಳು, ಹೀಗೆ ಒಟ್ಟು ನಗದು ಹಣ 60,230/- ರೂಪಾಯಿಗಳು, ಜಪ್ತಿ
ಮಾಡಿಕೊಂಡಿರುತ್ತಾರೆ, ಹೀರಾ ಮೇಸ್ತ್ರಿ ಮಟಕಾ ಬುಕ್ಕಿ ಇತನು ಪರಾರಿಯಾಗಿರುತ್ತಾನೆ. ಈ ಸಂಬಂಧ
ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment