Police Bhavan Kalaburagi

Police Bhavan Kalaburagi

Sunday, June 10, 2012

GULBARGA DIST REPORTED CRIMES


:: ಪತ್ರಿಕಾ ಪ್ರಕಟಣೆ ::
       ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:27-04-2012 ರಂದು ನೀಡಿದ ತಿರ್ಪಿನಂತೆ, ದೇಶದಲ್ಲಿ ಹೆಚ್ಚುತ್ತಿರುವ ಘೋರ ಅಪರಾಧಗಳ ಕುರಿತಂತೆ ವಾಹನಗಳ ಗಾಜುಗಳಿಗೆ ಬ್ಲ್ಯಾಕ್ ಪೀಲ್ಮನ್ನು ಉಪಯೋಗಿಸುವದು ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕಾನೂನಿಗೆ ವಿರುದ್ದವಾಗಿದ್ದು, ವಾಹನಗಳ ಮುಂಭಾಗ ಮತ್ತು ಹಿಂಭಾಗ ಹಾಗೂ ಎರಡು ಬದಿಯ ಗಾಜುಗಳಿಗೆ ಅನುಕ್ರಮವಾಗಿ 70% ಮತ್ತು 50% ಪಾರದರ್ಶಕತೆ ಹೊಂದಿರಬೇಕು. ಮತ್ತು ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಫೀಲ್ಮನ್ನು (ಸನ್ ಪೀಲ್ಮ ) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ ಎಂಬುದಾಗಿ ಆದೇಶಿಸಿರುವದಲ್ಲದೇ, ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಪೀಲ್ಮ ಅಂಟಿಸಿದಲ್ಲಿ ಅಥವಾ  ಮೇಲೆ ತಿಳಿಸಿದ ಗುಣಮಟ್ಟಕಿಂತ ಕಡಿಮೆ ಪಾರದರ್ಶಕತೆಯನ್ನು ಹೊಂದಿರುವ ಗಾಜುಗಳನ್ನು ಅಳವಡಿಸಿಕೊಂಡಿದಲ್ಲಿ, ಅಂತಹ ವಾಹನಗಳ ಮಾಲಿಕರ ವಿರುದ್ದ ನಿಯಾಮನುಸಾರ ದಂಡ ವಸೂಲಿ ಮಾಡುವದಲ್ಲದೇ, ನೊಂದಣಿ ಪುಸ್ತಕ (ಆರ್.ಸಿ ಪುಸ್ತಕ) ಅಮಾನತ್ತುಗೊಳಿಸಲು ಸಹ ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕ್ರಮ ಕೈಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪೆಟಿಷನ್ (ಸಿವಿಲ್ ) ಸಂಖ್ಯೆ:265/2012 ರಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಕೊಳ್ಳಲು ಆದೇಶಿಸಿರುವದು.
        ಮಾಹನಗಳ ಮಾಲಿಕರು ಇನ್ನು ಮುಂದೆ ದಿನಾಂಕ:19-06-2012 ರೊಳಗಾಗಿ ತಮ್ಮ ವಾಹನಗಳ ಗಾಜುಗಳಿಗೆ ಅಂಟಿಸಿದ ಬ್ಲ್ಯಾಕ್ ಪೀಲ್ಮ ಗಳನ್ನು ತೆಗದು ಹಾಕಬೇಕು. ಮತ್ತು ದಿನಾಂಕ: 20-06-2012 ರಿಂದ ಪೋಲೀಸ್ ಹಾಗು ಸಾರಿಗೆ ಇಲಾಖೆ ಯವರಿಂದ ಜಂಟಿಯಾಗಿ ಮೋಟಾರು ವಾಹನ ಕಾಯಿದೆ 1988 ಹಾಗೂ ನಿಯಮ 1989 ರ ಅಡಿಯಲ್ಲಿ ಪ್ರವರ್ತನ ಕಾರ್ಯ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನೂನ್ವಯ ದಂಡ ವಿಧಿಸುವದಲ್ಲದೇ, ಅಂತಹ ವಾಹನಗಳ ನೊಂದಣಿ ಪುಸ್ತಕ ಸಹ ಅಮಾನತ್ತುಗೊಳಿಸಲಾಗುವದೆಂದು, ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮತ್ತು ಶ್ರೀ ಈಶ್ವರ ಬಿ. ಅವಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುಲಬರ್ಗಾ ರವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವರು. 
ಮಧ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ಬಂದನ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 09/06/2012 ರಂದು  7:00 ಪಿ.ಎಮಕ್ಕೆ  ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ರವರು ಮತ್ತು 'ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಶಿವಪ್ರಕಾಶರಾಮು ಪವಾರ,ದೇವಿಂದ್ರ, ರವರೆಲ್ಲರಿಗೆ, ಶ್ರೀ ಭೂಷಣ ಜಿ ಬೋರಸೆ ಐ.ಪಿ.ಎಸ್ () ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ  ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಾಜೀಪೂರ ಬಡಾವಣೆಯ ಪೊಸ್ಟ ಆಫೀಸ ಹಿಂದುಗಡೆ ಮಾನವ ಜೀವಕ್ಕೆ ಹಾನಿಯಾಗುವಂತಹ ಸಿಂಧಿ ಮತ್ತು ಅನಧೀಕೃತ ಮದ್ಯ ಮಾರಾಟ ಮಾಡುತ್ತಿರುವನ ಮೇಲೆ ದಾಳಿ ಮಾಡಲು ಆತನ ಹೆಸರು ಮಲ್ಲಿಕಾರ್ಜುನ ತಂದೆ ನಾಗಪ್ಪ ಶಹರಸಾ|| ಪೊಸ್ಟ ಆಫೀಸ ಹಿಂದುಗಡೆ ಗಾಜೀಪೂರ ಗುಲಬರ್ಗಾ ಅಂತಾ ಹೇಳಿದ್ದು, ಸದರಿಯವನಿಂದ ಓ.ಸಿ ವಿಸ್ಕಿ 88 ಬಾಟಲ ಅ||ಕಿ|| 3784,ಲೀಟರ ವಿಷಪೂರಿತ ಸಿಂಧಿ ಅ||ಕಿ|| 140/-,ನಗದು ಹಣ 580/,ದೊರೆತ್ತವು. ಅವುಗಳು ಜಪ್ತಿ ಮಾಡಿಕೊಂಡಿದ್ದರಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 72/2012 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 328 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: