ಕಳ್ಳತನ ಪ್ರಕರಣ:
ವಿಶ್ವ ವಿಧ್ಯಾಲಯ ಪೋಲೀಸ್ ಠಾಣೆ:ಅಜಾದಪೂರ ಗ್ರಾಮದ ಸೀಮಾಂತರದಲ್ಲಿ ಅಳವಡಿಸಿದ ಏರಟೆಲ್ ಟವರನಲ್ಲಿನ ಆರ.ಎಫ ಕೇಬಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಾಂತ್ರಿಕ ನಿರ್ವಾಹಕನಾದ ಹೂವಣ್ಣ ಇತನು ಪೋನ ಮೂಲಕ ತೀಳಿಸಿದ ಮೇರೆಗೆ ನಾನು ದಿನಾಂಕ:07-06-2012 ರಂದು 2-45 ಪಿ.ಎಮಕ್ಕೆ ಹೋಗಿ ಪರಿಶೀಲಿಸಿ ನೋಡಲಾಗಿ ಆರ.ಎಫ ಕೇಬಲ ಸುಮಾರು ಅಂದಾಜು 250 ಮೀಟರ ಅ.ಕಿ.24,000/ರೂ ನೇದ್ದನ್ನು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-131/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಗೋದಾಮ ಕೂಲಿ ಕಾರ್ಮಿಕ ಸಾವು :
ಸೇಡಂ ಪೊಲೀಸ್ ಠಾಣೆ: ಲಕ್ಷ್ಮೀ ಗಂಡ ಲಕ್ಷ್ಮಣ ದಂಡಗುಂಡ ಸಾ:ಕಾಚವಾರ ಇವರು ನನ್ನ ಗಂಡನಾದ ಲಕ್ಷ್ಮಣ ತಂದೆ ಸಿದ್ದಪ್ಪ ದಂಡಗುಂಡ ವಯ:36 ವರ್ಷ ಇವನು ಪ್ರತಿನಿತ್ಯ ಬೆಳಗ್ಗೆ 8-00 ಗಂಟೆಗೆ ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗಿ ಬಟಗೇರಾ (ಬಿ) ಗೇಟದಲ್ಲಿರುವ ಸರಕಾರಿ ಗೋದಾಮಿನಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಮರಳಿ ಸಂಜೆ 7-00 ಗಂಟೆಗೆ ಮನೆಗೆ ಬರುತ್ತಿದ್ದರು. ದಿ:08-06-2012 ರಂದು ಸಹ ಬೆಳಗ್ಗೆ 8-00 ಗಂಟೆಗೆ ಹೋಗಿ ಕೆಲಸ ಮಾಡುವ ಕಾಲಕ್ಕೆ ಸುಮಾರು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಒಂದು ಲಾರಿಯಲ್ಲಿ ಗೋದಿ ಚೀಲ ಲೋಡ ಮಾಡಲು ಬೆನ್ನ ಮೇಲೆ ಗೋದಿ ಚೀಲಿ ಹೊತ್ತುಕೊಂಡು ಹೋಗುವಾಗ ಒಂಕು ಡೊಂಕಾಗಿರುವ ಸಾಲಿನ ಗೋದಿ ಚೀಲಗಳು ಮೇಮೇಲೆ ಬಿದ್ದು ಬಿದ್ದಿರುತ್ತವೆ. ಆತನನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದದಿಂದ ರಾತ್ರಿ 9-30 ಗಂಟೆ ಸುಮಾರಿಗೆ ನಾನು ಬಂದು ನೋಡಲು ನನ್ನ ಗಂಡನು ಮೃತ ಪಟಟಿದ್ದನು. ಗೋದಾಮಿನಲ್ಲಿ ಕೆಲಸಗಾರಿಗೆ ಸರಿಯಾಗಿ ನಿರ್ವಹಣೆ ಮಾಡದೇ ಇರುವದರಿಂದ ಗೋದಿ ಚೀಲಗಳು ಜಾರಿ ಮೈಮೇಲೆ ಬಿದ್ದು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2012 ಕಲಂ 304 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
No comments:
Post a Comment