Police Bhavan Kalaburagi

Police Bhavan Kalaburagi

Monday, June 18, 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಇಂದು ದಿನಾಂಕ:17/6/2012 ರಂದು ಸಾಯಂಕಾಲ ಠಾಣೆಯಲ್ಲಿದ್ದಾಗ ಅವರಾದ (ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಅಂಬರಾಯ ಇವರ ಹೊಲದಲ್ಲಿ ಇಸ್ಪೇಟ ಜೂಜಾಟ ಆಡುತ್ತಿದ್ದ ಕಲ್ಲಪ್ಪ ತಂದೆ ಸಿದ್ದಪ್ಪ ನೆಲ್ಲೂರ ಸಾ: ಉಪಳಾಂವ,ರಾಜು @ ರಾಜಶೇಖರ ತಂದೆ ಶಿವಶರಣಪ್ಪ ನಿಂಬಾಳ ಉಪಳಾಂವ,ರಾಘವೇಂದ್ರ ತಂದೆ ಈರಣ್ಣ ಮುಕರಂಬಿ ಸಾ: ಅವರಾದ,                                          ಬಾಬುರಾವ ತಂದೆ ಶರಣಪ್ಪ  ಜಮಾದಾರ ಸಾ: ಅವರಾದ (ಬಿ)  ರವರ ಮೇಲೆ  ಆನಂದರಾವ ಪಿ.ಎಸ.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟಕ್ಕೆ ಬಳಸಿದ 6400/- ರೂ & ಇಸ್ಪೇಟ ಎಲೆಗಳು ಜಪ್ತಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 207/2012 ಕಲಂ 87 ಕೆಪಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯ ಮಾರಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:17/6/2012 ರಂದು ಸಾಯಂಕಾಲ 7:15 ಪಿಎಮಕ್ಕೆ ಆಲಗೂಡ  ಗ್ರಾಮದ ಅಂಬಾರಾಯ ಇತನು ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದಿದ್ದರಿಂದ, ಮೇಲಾದಿಕಾರಿಗಳ ಮಾರ್ಗದರ್ಶನ ಹಾಗೂ ಸಿಪಿಐ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಆಲಗೂಡ ಗ್ರಾಮಕ್ಕೆ ಹೋಗಿ ಅವರ ಮನೆಯ ಹತ್ತಿರ ಲೈಟಿನ ಬೆಳಕಿನಲ್ಲಿ ಪ್ಲಾಸ್ಟಿಕ ಚೀಲದಲ್ಲಿ  ಬಾಟಲಿಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಪಿ.ಎಸ.ಐ ಆನಂದರಾವ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅವನನ್ನು ವಶಕ್ಕೆ ತೆಗೆದುಕೊಂಡು ಅವನ ಹತ್ತಿರದಿಂದ 72 ಯುಎಸ್‌ ವಿಸ್ಕಿ  ಅ, ಕಿ 3096/- ರೂಗಳನ್ನು ವಶಪಡಿಸಿಕೊಂಡು ಆತನ ವಿರುದ್ದ ಠಾಣೆ ಗುನ್ನೆ ನಂ: 208/2012 ಕಲಂ 32, 34 ಕೆ ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ದೇವಲಗಾಣಗಾಪೂರ ಪೊಲೀಸ್ ಠಾಣೆ : ದಿನಾಂಕ:17-04-2012 ರಂದು ಸೈಕಲ ಮೋಟರ ನಂ:ಕೆಎ 32 ಎಇ-7979 ನೇದ್ದರ ಮೇಲೆ ನಿಶ್ಚಯ ಕಾರಣ ಕುರಿತು ಸಿದ್ದಣ್ಣ ನರಸಗೊಂಡ, ಹಾಗೂ ರಾಜಕುಮಾರ ಇವಣಿ ಇಬ್ಬರೂ ಕೂಡಿಕೊಂಡು ಗುಂಡಗುರ್ತಿಯಿಂದ ದೇವಲಗಾಣಗಾಪೂರ ಮಾರ್ಗವಾಗಿ ಬಂದರವಾಡಕ್ಕೆ ಹೊರಟಾಗ ಮದ್ಯಾಹ್ನ 2-15 ಗಂಟೆ ಸುಮಾರಿಗೆ ಸೈಕಲ ಮೋಟಾರ ಸವಾರನಾದ ರಾಜಕುಮಾರನು ಇತನು ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ರಸ್ತೆ ಬದಿ ಒಡ್ಡಿಗೆ ಡಿಕ್ಕಿ ಪಡಿಸಿ ರಸ್ತೆಯ ಮೇಲೆ ಬಿದ್ದಿದ್ದನು. ಸಿದ್ದಣ್ಣನ ತೆಲೆಗೆ ಬಾರಿ ಒಳ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ರಾಜಕುಮಾರ ಇತನಿಗೆ ತಲೆಗೆ, ಎದೆಗೆ, ಬಾರಿ ಒಳ ಪೆಟ್ಟಾಗಿರುತ್ತದೆ ಅಂತಾ  ಶ್ರೀ ಶರಣಬಸಪ್ಪ ತಂದೆ ಅಣ್ಣಾರಾವ ಇವಣಿ  ಸಾ|| ಗುಂಡಗುರ್ತಿ ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 67/2012 ಕಲಂ 279.338, 304[ಎ] ಐಪಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ. 

No comments: