Police Bhavan Kalaburagi

Police Bhavan Kalaburagi

Sunday, June 17, 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಪರತಬಾದ ಪೊಲೀಸ್ ಠಾಣೆ: ಶ್ರಿ ಬಾಬು ತಂದೆ ಹಣಮಂತ ಚೆಟ್ಟಿ ಸಾ: ಗರೂರ(ಬಿ) ವರು ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ದಿನಾಂಕ: 16-6-2012 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಊಟ ಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲಿಗೆ ಕೀಲಿ ಹಾಕಿ ಮನೆಯ ಮೇಲಿನ ಮಾಳಗಿಯ ಮೇಲೆ ಮಲಗಿಕೊಂಡಿದ್ದೇವು. ನಮ್ಮಂತೆ ನಮ್ಮ ಬಾಜು ಮನೆಯ ನನ್ನ ಅಣ್ಣನ ಮಗನಾದ ಪ್ರಭು ತಂದೆ ದೇವಿಂದ್ರಪ್ಪ ಚೆಟ್ಟಿ ಈತನು ಕೂಡಾ ಅವನ ಹೆಂಡತಿ ಮಕ್ಕಳೊಂದಿಗೆ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದರು. ದಿನಾಂಕ: 17-6-2012 ರಂದು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ನಾನು ಮೂತ್ರ ವಿರ್ಸಜನೆಕ್ಕೆಂದು ಮನೆಯ ಮಾಳಗಿಯಿಂದ ಕೆಳಗೆ ಇಳಿಯುತ್ತಿದ್ದಾಗ ನಮ್ಮ ಬಾಗಿಲು ತೆರೆದಿದು ನೋಡಿ ಗಾಬರಿಯಾಗಿ ನನ್ನ ಹೆಂಡತಿ ಮಕ್ಕಳಿಗೆ ಎಬ್ಬಿಸಿ ಮನೆಯಲ್ಲಿ ಹೋಗಿ ನೋಡಲಾಗಿ ಮನೆಯ ಹಾಕಿದ ಬೀಗ ತೆರೆದಿದು, ಆಲಮಾರಿ ಬೀಗ ತೆರೆದಿದು ಆಲಮಾರಿ ಒಳಗೆ ಇಟ್ಟಿದ್ದ  10 ಗ್ರಾಂ ಬಂಗಾರದ ಲಾಕೇಟು, ಅ.ಕಿ. 25,000=00 ರೂ. 5 ಗ್ರಾಂ ಬಂಗಾರದ ಲಾಕೇಟು ಅ.ಕಿ. 12,500=00 ರೂ. 5 ಗ್ರಾಂ ಬಂಗಾರದ ಉಂಗೂರ ಅ.ಕಿ. 12,500=00 ರೂ. 10 ಗ್ರಾಂ ಬಂಗಾರದ ಬೊರಮಳ ಸರ ಅ.ಕಿ. 25,000=00 ರೂ. 30 ಗ್ರಾಂ ಬಂಗಾರದ ಸಿಂಗಾರದ ಕರಿಮಣಿ ಅ.ಕಿ. 75,000=00 ರೂ. 60 ಗ್ರಾಂ ಬೆಳ್ಳಿಯ ಹಾಲಗಡ ಜೈನ, ಉಡದಾರ ಅ.ಕಿ. 1800=00 ರೂ, ನಗದು ಹಣ 1500=00 ರೂ. ಯಾರೋ ಕಳ್ಳರು ಆಲಮಾರಿ ಬೀಗ ತೆರೆದು ದಿನಾಂಕ: 16-6-2012 ರ ರಾತ್ರಿಯಿಂದ ದಿನಾಂಕ: 17-3-2012 ರ 3-00 ಎಎಮ್‌ದ ಅವಧಿಯಲ್ಲಿ ಬೆಲೆ ಬಾಳುವ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ನಮ್ಮ ಅಣ್ಣನ ಮಗನಾದ ಪ್ರಭು ತಂದೆ ದೇವಿಂದ್ರ ಚಟ್ಟಿ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲಿದ್ದ 5 ಗ್ರಾಂ ಬಂಗಾರದ ಜುಮಕಿ ಅ.ಕಿ. 12,500=00 ರೂ. ಹಾಗೂ 80 ಗ್ರಾಂ ಬೆಳ್ಳಿಯ ಉಡಿದಾರ ಹಾಗೂ ಹಾಲಗಡಗಾ ಮತ್ತು ಮನೆಯಲ್ಲಿದ್ದ ಒಂದು ಕಾರಬನ್ ಕಂಪನಿಯ ಮೊಬೈಯಲ್ ನಂ: 9945071612 ಮತ್ತು ನಗದು ಹಣ 300=00 ರೂ, ಹೀಗೆ ಒಟ್ಟು 15,700=00 ರೂ. ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ದಿನಾಂಕ:15-06-2012 ರಂದು ರಾತ್ರಿ 3-00 ಗಂಟೆ ಸುಮಾರಿಗೆ ರಾಜಶೇಖರ ತಂದೆ ಸಿದ್ದಣ್ಣ ಸೂಗೂರ ಹರಿಜನ ಮತ್ತು ಆತನ ಗೆಳೆಯರಾದ ಶಿವಕುಮಾರ ಕಲ್ಲಕ, ಮಲ್ಲಿಕಾರ್ಜುನ, ಸಿದ್ದಣಗೌಡ ತಂದೆ ಶರಣಗೌಡ, ರಾಘವೇಂದ್ರ ಸಾ|| ಚಿತಾಫೂರ ರವರು ಕೂಡಿಕೊಂಡು ಜೀಪ ನಂ ಕೆಎ-25-ಎನ್-3280 ನೇದ್ದರಲ್ಲಿ ನನ್ನ ತಂಗಿಯಾದ ಭುವನೇಶ್ವರಿ ವ-18 ಜಾ|| ಕಬ್ಬಲಿಗೇರ ಸಾ|| ಚಿತ್ತಾಫುರ ಇವಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆಅಂತಾ ಶ್ರೀ ರಾಕೇಶ ತಂದೆ ದತ್ತಾತ್ರೇಯ ಶಾಖಾಪುರ ಸಾ|| ಚಿತ್ತಾಫೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012 ಕಲಂ 366 ಸಂಗಡ 149 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: