Police Bhavan Kalaburagi

Police Bhavan Kalaburagi

Tuesday, June 19, 2012

GULBARGA DIST REPORTED CRIMES


ಕೊಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ಹೀರು ತಂದೆ ಭಾವಸಿಂಗ ಚವ್ಹಾಣ ಸಾ: ಮದಿಹಾಳ ತಾಂಡಾ ಶ್ರೀನಿವಾಸ ಸರಡಗಿ ತಾ:ಜಿ:ಗುಲಬರ್ಗಾರವರು ನಮ್ಮ ಹೋಲ  6 ವರ್ಷಗಳಿಂದ ಹಿಂದೆ ನಮ್ಮ  ತಾಂಡಾದ ವಾಲು ತಂದೆ ಮೇಘು ಇವರ 1 ಏಕರೆ ಹೋಲ 4 ಲಕ್ಷ ರೂಪಾಯಿಗೆ ಖರಿದಿಸಿ ಪೂರ್ತಿ  ಹಣ ಕೊಟ್ಟಿದ್ದು, ಸದರಿ ಹೊಲದ ಫೋಡಿ ಆಗದಿದ್ದಕ್ಕೆ ರಿಜಿಸ್ಟರ ಮಾಡಿಕೊಳ್ಳಲು ತಡವಾಗಿದ್ದು ನಂತರ ವಾಲುನ ಮಗನಾದ ವಿನೋದ ಇತನು ಇನ್ನೂ ಹಣ ಕೋಡಿರಿ ಅಂತ ಜಗಳ ಮಾಡಿ 2 ವರ್ಷಗಳ ಹಿಂದೆ ನನ್ನ ಮಗನಾದ ವಸಂತ ಇತನಿಗೆ ಹೊಡೆದು ರಕ್ತಗಾಯ ಗೊಳಿಸಿದ್ದರಿಂದ ಈ ಬಗ್ಗೆ ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ ದಾಖಲಿಸಲಾಗಿತ್ತು, ನಂತರ ತಾಂಡಾದ ಹಿರಿಯರ ಸಮಕ್ಷಮ ಪಂಚಾಯತ ಮಾಡಿಕೊಂಡು ಪಂಚರು ಹೇಳಿದಂತೆ ಮತ್ತೆ 2 ಲಕ್ಷ ರೂಪಾಯಿ ಕೊಟ್ಟು 2 ತಿಂಗಳ ಹಿಂದೆ ರಿಜಿಸ್ಟರ ಮಾಡಿಕೊಂಡಿದ್ದೆವು, ಪಾಣಿಯಲ್ಲಿ 50 ಸಾವಿರ ಬ್ಯಾಂಕ ಲೋನ ನಮೂದಿಸಿದ್ದು ಈ ಹಣ ನೀವೆ ಕಟ್ಟಿರಿ ಅಂತ ನನ್ನ ಮಗ ವಸಂತ ಇತನು ವಾಲುನ ಮಗ ವಿನೋದ ಇತನಿಗೆ ಹೇಳಿದ್ದರಿಂದ ಅವರ ನಮ್ಮ ಮಧ್ಯೆ ತಕರಾರು ಆಗಿತ್ತು, ದಿನಾಂಕ 17-06-2012 ರಂದು ನನ್ನ ಮಗ ವಸಂತ ಇತನನೊಂದಿಗೆ ವಿನೋದ ಮತ್ತು ರವಿ ಇವರು ಸರಾಯಿ ಕುಡಿದು  ಸಣ್ಣೂರ ಕ್ರಾ ಹತ್ತಿರದ ಬ್ರಿಡ್ಜ (ಸೇಡಂ ರೋಡ) ಮೇಲೆ ನನ್ನ ಮಗನನ್ನು ಹರಿತವಾದ ಆಯುಧಗಳಿಂದ ತೆಲೆಗೆ ಹಣಗೆ ಹೋಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 144/2012 ಕಲಂ 302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸುರೇಶ ತಂದೆ ಶಿವಯೋಗಪ್ಪ ಆಂದಾನಿ (ಹೊನ್ನಕಿರಣಗಿ) ಸಾ|| ಮನೆ ನಂ 1-6/4 1/ಎ ತಂಗಾ ಆಸ್ಪತ್ರೆಯ ಹತ್ತಿರ, ಪಬ್ಲಿಕ ಗಾರ್ಡನ ರೋಡ ಜಾಜಿ ಲೇ ಔಟ ಗುಲಬರ್ಗಾರವರು ನಾವು ದಿನಾಂಕ; 17/06/2012 ರಂದು ಮದ್ಯಾನ್ಹ 3-00 ಗಂಟೆಯ ಸುಮಾರಿಗೆ ನಮ್ಮ ವೈಯಕ್ತಿಕ ಕೆಲಸದ ನಿಮಿತ್ಯ ಮನೆಗೆ ಬೀಗ ಹಾಕಿ ಮನೆಯ ಕೆಲಸದವಳಿಗೆ ನಿಗಾ ಇಡುವಂತೆ ಮತ್ತು ರಾತ್ರಿ ಪಕ್ಕದ ಮನೆಯಲ್ಲಿ ಮಲಗುವಂತೆ ಹೇಳಿ ಮನೆಗೆ ಕೀಲಿಹಾಕಿಕೊಂಡು ಹೋಗಿದ್ದೇನು. ದಿನಾಂಕ; 18/06/2012 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ಮನೆಕೆಲಸದ ಶೈಲಾ ಇವಳು ಮೊಬೈಲ್ ಪೊನ್ ಮುಖಾಂತರ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲ ಕೀಲಿ ಮುರಿದ್ದಿದ್ದಾರೆ ಕೂಡಲೇ ಬರಬೇಕು ಅಂತಾ ತಿಳಿಸಿದ ಪ್ರಕಾರ ನಾನು ಮರಳಿ ಧಾರವಾಡದಿಂದ ಬಂದು ನೋಡಲು ನನ್ನ ಹೆಂಡಿತಿಯವರು ಅಲಮಾರಿಯಟ್ಟಿದ್ದ ಮೂರು ಜೋತೆ ಕಿಯೋಲೆ ಜುಮಕಿ ಸಮೇತ 10 ಗ್ರಾಂ, ನಾಲ್ಕು ಬಳೆಗಳು 50 ಗ್ರಾಂ, ಎರಡು ಮುತ್ತಿನ ಬಳೆಗಳು 25 ಗ್ರಾಂ, ಒಂದು ಚೈನ 5 ಗ್ರಾಂ, ಮೂರು ಸಣ್ಣ ಉಂಗರಳಗಳು 10 ಗ್ರಾಂ, ಹೀಗೆ ಒಟ್ಟು 10 ತೋಲೆ ಬಂಗಾರದ ಆಭರಣಗಳು ಅಂದಾಜ 2,50,000=00 ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 86/2012 ಕಲಂ 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: